History, asked by vhemalatha629257, 11 months ago

duradrashana{television} prabhanda{essay}in kanna
da ​

Answers

Answered by Mithun3023
1

Answer:

ನವದೆಹಲಿಯಲ್ಲಿ 1959ರಲ್ಲಿ ದೇಶದ ಪ್ರಪ್ರಥಮ ಟೆಲಿವಿಷನ್ ಕೇಂದ್ರದ ಸ್ಥಾಪನೆಯಾಯಿತು. ಇದರೊಂದಿಗೆ, ಭಾರತ ಟೆಲಿವಿಷನ್(ದೂರದರ್ಶನ) ಯುಗಕ್ಕೆ ಪದಾರ್ಪಣೆ ಮಾಡಿತು. ಭಾರತದಲ್ಲಿ ಈಗ 133 ದೂರದರ್ಶನ ವಾರ್ತಾವಾಹಿನಿಗಳಿವೆ. 1983ರಲ್ಲಿ ವಿಶ್ವ ಸಂಸ್ಥೆ ವಿಶ್ವ ಸಂವಹನ ವರ್ಷವನ್ನು ಆಚರಿಸಿದಾಗ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬಡ ರಾಷ್ಟ್ರಗಳ ನಡುವಣ ಅಂತರವನ್ನು ಕಡಿಮೆ ಮಾಡಬೇಕೆಂದು ಆಗ್ರಹಪಡಿಸಲಾಯಿತು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗಬೇಕೆಂಬುದು ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೊರೆಯಾಗಿತ್ತು. ಇದಕ್ಕೂ ಮೊದಲೇ, ಅಂದರೆ ಸುಮಾರು ಮೂರು ದಶಕಗಳಿಗೂ ಹಿಂದೆಯೇ ಭಾರತದ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಗಳಲ್ಲಿ ದೂರದರ್ಶನದತ್ತ ಒಲವು ಬೆಳೆಯ ತೊಡಗಿತ್ತು. ಫಿಲಿಪ್ಸ್ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ದೂರದರ್ಶನ ಪ್ರಸಾರ ಕುರಿತ ಒಂದು ಪ್ರಾತ್ಯಕ್ಷಿಕೆಯನ್ನೂ ತೋರಿಸಿತ್ತು. ಸಮುದಾಯ ಅಭಿವೃದ್ಧಿ ಮತ್ತು ಅನೌಪಚಾರಿಕ ಶಿಕ್ಷಣದಲ್ಲಿ ದೂರದರ್ಶನ ಎಷ್ಟು ಪ್ರಯೋಜನಕಾರಿಯಾದೀತು ಎಂಬ ಪ್ರಯೋಗಶೀಲತೆಯಿಂದ ಕೇಂದ್ರ ಸರ್ಕಾರ ಫಿಲಿಪ್ಸ್ ಸಲಹೆಗೆ ಒಪ್ಪಿಗೆ ನೀಡಿತು. ಸಮುದಾಯ ಕೇಂದ್ರಗಳಿಗಾಗಿ ದೂರದರ್ಶನ ಸೆಟ್‍ಗಳನ್ನು ತೆಗೆದುಕೊಳ್ಳಲು ಯುನೆಸ್ಕೋ 20ಸಾವಿರ ಡಾಲರು ನೆರವು ನೀಡಿತು. ಪ್ರಯೋಗಶೀಲತೆ ಮತ್ತು ಈ ಎಲ್ಲ ಬೆಂಬಲಗಳಿಂದ ಭಾರತದಲ್ಲಿ ದೂರದರ್ಶನ ಪ್ರಾರಂಭವಾಯಿತು. 1959ರ ಸೆಪ್ಟೆಂಬರ್ 15ರಂದು ದೆಹಲಿ ಕೇಂದ್ರದಿಂದ ಮೊದಲ ದೂರದರ್ಶನ ಕಾರ್ಯಕ್ರಮ ಪ್ರಸಾರವಾಯಿತು. ಭಾರತದ ಸಂವಹನ ಕ್ಷೇತ್ರದಲ್ಲಿ ನವ ಅರುಣೋದಯವಾಯಿತು. ದೆಹಲಿ ಕೇಂದ್ರದ ಪ್ರಸಾರ ವ್ಯಾಪ್ತಿ ನಲವತ್ತು ಕಿಲೋಮೀಟರ್ ಆಗಿತ್ತು. ಶುರುವಿಗೆ ವಾರಕ್ಕೆ ಎರಡು ಬಾರಿ ಇಪ್ಪತ್ತು ನಿಮಿಷಗಳ ಅವಧಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿತ್ತು. ಯುನೆಸ್ಕೊ ಕೊಟ್ಟಿದ್ದ ದೂರದರ್ಶನ ಪೆಟ್ಟಿಗೆಗಳನ್ನು ಹೊಂದಿದ್ದ ಟೆಲಿಕ್ಲಬ್‍ಗಳ ಸದಸ್ಯರುಗಳೇ ಈ ಕಾರ್ಯಕ್ರಮಗಳ ವೀಕ್ಷಕರಾಗಿದ್ದರು. 1965ರಲ್ಲಿ ದೂರದರ್ಶನದಲ್ಲಿ ಸುದ್ದಿ ಸಮಾಚಾರ ಮತ್ತು ಮನರಂಜನೆ ಒದಗಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಈ ವರ್ಷದ ಆಗಸ್ಟ್ 15ರಂದು ದೆಹಲಿ ಕೇಂದ್ರದಿಂದ ಪ್ರತಿದಿನ ಒಂದು ಗಂಟೆ ಕಾಲ ಪ್ರಸಾರ ಶುರುಮಾಡಲಾಯಿತು. ಟೆಲಿಕ್ಲಬ್ಗಳಿಗೆಂದೇ ವಿಶೇಷ ಪ್ರಸಾರವನ್ನೂ ಮಾಡಲಾಯಿತು. 1967ರಲ್ಲಿ ರೈತಾಪಿ ವರ್ಗಕ್ಕಾಗಿ ‘ಕೃಷಿದರ್ಶನ’ ವಿಶೇಷ ಕಾರ್ಯಕ್ರಮ ಪ್ರಸಾರ ಆರಂಭವಾಯಿತು. ಈ ಕಾರ್ಯಕ್ರಮ ಅಣುಶಕ್ತಿ ಇಲಾಖೆ, ಕೃಷಿ ಸಂಶೋಧನ ಸಂಸ್ಥೆ ಹಾಗೂ ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ನೆರವಿನಿಂದ ಸಾಧ್ಯವಾಯಿತು. ದೆಹಲಿ ಕೆಂದ್ರದ ಪ್ರಸಾರ ವ್ಯಾಪ್ತಿಯನ್ನು 60ಕಿ.ಮೀ ಗೆ ವಿಸ್ತರಿಸಲಾಯಿತು. 1970ರ ವೇಳೆಗೆ ದೂರದರ್ಶನ ಪ್ರಸಾರ ಅವಧಿಯನ್ನು ಮೂರು ಗಂಟೆಗಳಿಗೆ ಹೆಚ್ಚಿಸಲಾಯಿತು. ಒಂದು ಅಂದಾಜಿನ ಪ್ರಕಾರ 1970ರ ವೇಳೆಗೆ ಇಪ್ಪತ್ತೆರಡು ಸಾವಿರ ಮನೆಗಳಲ್ಲಿ ಟೆಲಿಕ್ಷಬ್‍ಗಳನ್ನು ಹೊರತುಪಡಿಸಿದ ದೂರದರ್ಶನ ಸೆಟ್‍ಗಳಿದ್ದವು. 1970ರ ಮಧ್ಯಭಾಗದ ವೇಳೆಗೆ ಲಕ್ಷ ಸಂಖ್ಯೆಯಲ್ಲಿ ಟೆಲೆಸೆಟ್‍ಗಳು ಮಾರುಕಟ್ಟೆಗೆ ಹರಿದು ಬರಲಾರಂಭಿಸಿದವು. 1972ರಲ್ಲಿ ಮುಂಬಯಿ ದೂರದರ್ಶನ ಕೇಂದ್ರ ಪ್ರಸಾರ ಪ್ರಾರಂಭಿಸಿತು. ನಂತರ ಶ್ರೀನಗರ, ಅಮೃತಸರ ಮತ್ತು ಪುಣೆ ನಗರಗಳಿಂದ ದೂರದರ್ಶನ ಪ್ರಸಾರ ಪ್ರಾರಂಭವಾಯಿತು. 1975ರಲ್ಲಿ ಕಲ್ಕತ್ತ, ಮದ್ರಾಸ್ ಮತ್ತು ಲಖನೌ ದೂರದರ್ಶನ ಕೆಂದ್ರಗಳಲ್ಲಿ ಪ್ರಸಾರ ಆರಂಭವಾದವು. 1976ರ ಜನವರಿ 1ರಂದ ಭಾರತ ದೂರದರ್ಶನದಲ್ಲಿ ವಾಣಿಜ್ಯ ಜಾಹಿರಾತುಗಳು ಕಾಣಿಸಿಕೊಳ್ಳಲಾರಂಭಿಸಿದವು. ಇದೇ ವರ್ಷ, ಕೆಂದ್ರಸರ್ಕಾರ ದೂರದರ್ಶನವನ್ನು 'ಆಲ್ ಇಂಡಿಯ ರೇಡಿಯೋ' ಆಡಳಿತ ನಿರ್ವಹಣೆಯಿಂದ ಬೇರ್ಪಡಿಸಿತು. 1975-76ರಲ್ಲಿ ಉಪಗ್ರಹ ಶೈಕ್ಷಣಿಕ ಟೆಲಿವಿಷನ್ ಮೂಲಕ ಶೈಕ್ಷಣಿಕ ಪ್ರಸಾರ ಪ್ರಾರಂಭವಾಯಿತು. ಕರ್ನಾಟಕದ ಕೆಲವು ಹಳ್ಳಿಗಳಿಗೂ ಸೇರಿದಂತೆ ಭಾರತದ 2400 ಗ್ರಾಮಗಳಿಗೆ, ಒಂದು ವರ್ಷಕಾಲ ಈ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. 1977ರಲ್ಲಿ ಜಯಪುರ, ಹೈದರಾಬಾದ್, ಕಲ್ಬುರ್ಗಿ, ರಾಯಪುರ, ಸಂಬಾಲ್ಪುರ ಮತ್ತು ಮುಜಫರ್‍ಪುರ ದೂರದರ್ಶನ ಕೇಂದ್ರಗಳು ಕಾರ್ಯ ಆರಂಭಿಸಿದವು. ಇದರಿಂದಾಗಿ ಟಿವಿ 100 ದಶಲಕ್ಷ ಭಾರತೀಯರನ್ನು ತಲುಪುವುದು ಸಾಧ್ಯವಾಯಿತು. ಇಂದಿನ ದಿನಗಳಲ್ಲಿ ದೇಶದಾದ್ಯಂತ ಪ್ರಮುಖ ಊರುಗಳಲ್ಲಿ ದೂರದರ್ಶನ ಪ್ರಸಾರ ಕೇಂದ್ರಗಳಿದ್ದು ದೇಶವ್ಯಾಪಿ ಜನರು ದೂರದರ್ಶನ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಒಂದು ಅಂದಾಜಿನ ಪ್ರಕಾರ 1997ರ ವೇಳೆಗೆ ಭಾರತದಲ್ಲಿ 57.7 ದಶಲಕ್ಷ ಟಿ.ವಿ ಸೆಟ್‍ಗಳಿದ್ದವು. 296 ದಶಲಕ್ಷಕ್ಕೂ ಹೆಚ್ಚು ಮಂದಿ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ದೂರದರ್ಶನ ಸುದ್ದಿ, ಮಾಹಿತಿ, ಕ್ರೀಡೆ, ಸಿನಿಮಾ, ಸಂಗೀತ, ನೃತ್ಯ, ನಾಟಕ, ಜ್ಯೋತಿಷ್ಯ ಮೊದಲಾದ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ. ಸಾಮನ್ಯ ಶಿಕ್ಷಣ, ವಿಜ್ಞಾನ, ಕೃಷಿ ದರ್ಶನ ಇವು ಶೈಕ್ಷಣಿಕ ಪ್ರಸಾರಕ್ಕೆ ಕೆಲವು ಉದಾಹರಣೆಗಳು. ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ 1984ರ ಆಗಸ್ಟ್ ನಿಂದ ದೂರದರ್ಶನದಲ್ಲಿ ತರಗತಿಯ ಪಾಠ ಪ್ರವಚನಗಳನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಾವಿರಾರು ಶಾಲಾ ಕಾಲೇಜುಗಳಿಗೆ ಹಾಗೂ ಸಮುದಾಯ ಕೇಂದ್ರಗಳಿಗೆ ಟಿವಿ ಸೆಟ್‍ಗಳನ್ನು ಒದಗಿಸಲಾಗಿದೆ. ದೂರದರ್ಶನಗಳು ಸಾಮಾಜಿಕ ಜಾಲತಾಣಗಳಿಗೂ ಮೊದಲು ಮಾಧ್ಯಮ ಕ್ಷೇತ್ರವನ್ನು ಆಳುತ್ತಿದ್ದವು. ಇವುಗಳು ಸಮೂಹ ಪ್ರೇಕ್ಷಕರಿಗೆ ಪ್ರಚಲಿತ ವಿದ್ಯಾಮಾನಗಳನ್ನು ಪಸರಿಸುವ ಜೊತೆಜೊತೆಗೆ ಶೈಕ್ಷಣಿಕ ಮಾಹಿತಿ ಮತ್ತು ಮನರಂಜನೆಯನ್ನು ನೀಡುತ್ತಿರುವ ಬಹು ದೊಡ್ಡ ಮಾಧ್ಯಮ. ಏಕ ಕಾಲಕ್ಕೆ ಹೆಚ್ಚು ಜನ ಸಮೂಹವನ್ನು ತಲುಪುವುದು ದೂರದರ್ಶನದ ಬಹು ದೊಡ್ಡ ಶಕ್ತಿ. ಜಗತ್ತು ತಂತ್ರಜ್ಞಾನದ ಕಡೆ ಮುಖ ಮಾಡಿದಾಗ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ತನ್ನ ಜೊತೆಗೆ ಅನೇಕ ಶಾಖೆಗಳನ್ನು ಸೇರಿಸಿಕೊಂಡು ಸಮೂಹ ಮಾಧ್ಯಮಗಳಾಗಿ ಮಾರ್ಪಟ್ಟವು. ಸಮೂಹ ಮಾಧ್ಯಮಗಳೆಂದರೆ ವಿಶಾಲ ಶ್ರೇಣಿಯ ಜನರ ನಡುವೆ ದೊಡ್ಡ ಪ್ರಮಾಣದಲ್ಲಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು. ಮಾಹಿತಿಯನ್ನು ಪರಿಣಾಮಕಾರಿಯಾಗಿ ವೀಕ್ಷಕರಿಗೆ ತಲುಪಿಸುವುದು ದೂರದರ್ಶನದ ಪ್ರಮುಖ ಉದ್ದೇಶಗಳಲ್ಲೊಂದು. ಭಾರತದಲ್ಲಿ ದೂರದರ್ಶನ ಕೇವಲ ಸಮೂಹ ಮಾಧ್ಯಮದ ಭಾಗವಾಗಿರದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಹಲವಾರು ಭಾಷೆಗಳು ಬೇರೆ ಬೆರೆ ದೇಶೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಪಡಿಸುತ್ತವೆ.

Explanation:

Please mark me as a BRAINLIEST

Similar questions