World Languages, asked by sahanahugar123, 5 months ago

eassay on covid 19 in kannada plz give answer in Kannada once again​

Answers

Answered by deepalmsableyahoocom
2

Answer:

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.

ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು.

ಕೊರೊನಾ ವೈರಸ್ ಸೋಂಕು ಎಂದರೇನು?

ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.

ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು.ಇನ್ನು ಕೆಲವು ವೈರಸ್ ಗಳು ಮನುಷ್ಯರ ಮೇಲೆ ಕೂಡ ಪರಿಣಾಮ ಬೀರುವುದು.

ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು.

ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ.

ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

Explanation:

Hope It Will Help You

Answered by sadhanaN
0

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೇ? ಹಾಗಾದರೆ ನೀವು ಕಚೇರಿಗಳಿಗೆ ಅಲೆದಲೆದು ಸುಸ್ತಾಗಬೇಕಿಲ್ಲ !

ಇದಕ್ಕೆ ಈಗ ಆಪ್ ವೊಂದು ಪರಿಹಾರ ನೀಡಲಿದೆ. ಹೌದು, ಇದು ನಿಮಗೆ ಅಚ್ಚರಿ ಎನಿಸಿದರು ಕೂಡ ಸತ್ಯ. ಒಖ್ಲಾದ ನಿವಾಸಿಯಾಗಿರುವ ಸೋಫಿಯಾ ಫಾತಿಮಾ, 25,ಎರಡನೇ ಬಾರಿಗೆ ಮತವನ್ನು ಚಲಾಯಿಸುತ್ತಿದ್ದಾರೆ ,ಆದರೆ ಅವರ ಹೆಸರು ಚುನಾವಣಾ ಆಯೋಗದ ಭಾರತ (ಇಸಿಐ) ವೆಬ್ಸೈಟ್ನಲ್ಲಿ ನಾಪತ್ತೆಯಾಗಿದ್ದರಿಂದಾಗಿ ಅವರು ಚಿಂತಾಕ್ರಾಂತರಾಗಿದ್ದರು.ಆಗ ಈ ಆಪ್ ಬಗ್ಗೆ ಸ್ನೇಹಿತನ ಮೂಲಕ ತಿಳಿದಿದ್ದ ಆಕೆಯ ಪತಿ ತನ್ನ ಹೆಂಡತಿಗೆ 'Missing Voters' ಆಪ್ ಬಗ್ಗೆ ಮಾಹಿತಿ ನೀಡಿದ್ದಾನೆ.ತದನಂತರ ಆಕೆ ಈ ಆಪ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತನ್ನ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾಳೆ.ಈಗ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿದೆ.

ಅದೇ ರೀತಿಯಾಗಿ ಉತ್ತರ ಪ್ರದೇಶದ ಮೊಹಮ್ಮದ್ ಅನಾಸ್ ಎನ್ನುವ 21 ವರ್ಷದ ಯುವಕನ ಹೆಸರು ಕೂಡ ನಾಪತ್ತೆಯಾಗಿತ್ತು, ನಂತರ ಈ ಆಪ್ ಮೂಲಕ ಹೆಸರನ್ನು ನೋಂದಣಿ ಮಾಡಲಾಗಿದೆ. ಈ ತಿಂಗಳ ಪ್ರಾರಂಭದಲ್ಲಿ ಬಿಡುಗಡೆಯಾಗಿರುವ ಆಪ್ ಗೆ ಬಾರಿ ಡಿಮಾಂಡ್ ಬಂದಿದೆ.ಈ ಆಪ್ ನ್ನು ಹೈದರಾಬಾದ್ ಮೂಲದ ಖಾಲಿದ್ ಸೈಫುಲ್ಲಾ ಎನ್ನುವವರು ತಮ್ಮದೆ ರೇ ಲ್ಯಾಬ್ಸ್ ಟೆಕ್ನಾಲಜಿ ಎನ್ನುವ ಕಂಪನಿ ಮೂಲಕ ಅಭಿವೃದ್ದಿ ಪಡಿಸಿದ್ದಾರೆ. 

ಈ ಆಪ್ ನ್ನು ತಾವು ಗೂಗಲ್ ನಲ್ಲಿ 'Missing Voters'ಎಂದು  ಸರ್ಚ್ ಮಾಡುವುದರ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ 8099 683 683 ಸಂಖ್ಯೆಗೆ ಮಿಸ್ ಕಾಲ್ ನೀಡುವುದರ ಮೂಲಕ ಆಪ್ ನ ಲಿಂಕ್ ನ್ನು ಮೆಸೇಜ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Similar questions