Math, asked by anoushka859, 3 months ago

eassy in kannada about patriotism​

Answers

Answered by sureshbabu76405
2

Answer:

ನಮ್ಮೆಲ್ಲರ ನಿರಾಳ ನಿದ್ದೆಗೆ, ನೆಮ್ಮದಿಯ ಬದುಕಿಗೆ ಕಾರಣರಾದವರು ನಮ್ಮ ಸೈನಿಕರು. ಯುದ್ಧಾತಂಕಗಳ ನಡುವೆಯೇ ಭರವಸೆಯ ಕಂದೀಲುಗಳಾಗಿ ನಿಂತವರು ಈ ಸೋಲ್ಜರ್‌ಗಳು. ದೇಶಪ್ರೇಮವೊಂದೇ ಅಲ್ಲ, ಅತ್ಯಂತ ಗಟ್ಟಿ ಗುಂಡಿಗೆಯ ಅಸಲಿ ಹೀರೋಗಳು ಇವರೆ.ಯೇ ದಿಲ್‌ ಮಾಂಗೇ ಮೋರ್‌!

ನೆತ್ತರು ಉಕ್ಕುತ್ತಿದ್ದ ಕೈಯನ್ನು ಹಾಗೇ ಹಿಡಿದುಕೊಂಡು ಮತ್ತೊಂದು ಪರ್ವತದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತೇನೆ ಎಂದು ಹೊರಟಿದ್ದವನ ಹೆಸರು ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ. 1999ರ ಕಾರ್ಗಿಲ್‌ ಕದನದ ಕಥನ ಕೇಳಿದವರಿಗೆ ನೆನಪಿರಬಹುದಾದ ಹತ್ತಾರು ಯೋಧರಲ್ಲಿ ಇವರೂ ಒಬ್ಬರು. 13 ಸೈನಿಕರ ತಂಡದೊಂದಿಗೆ 17000 ಅಡಿ ಎತ್ತರದ, 80 ಡಿಗ್ರಿಯಷ್ಟು ಕಡಿದಾದ ಪಾಯಿಂಟ್‌ 5140 ಪರ್ವತವನ್ನು ಹತ್ತಿ ಪಾಕಿಸ್ತಾನೀಯರಿಂದ ಬಂಧಮುಕ್ತಿಗೊಳಿಸಿದ ಮಹಾ ಸೇನಾನಿ. ಅದು ಇಡೀ ಕಾರ್ಗಿಲ್‌ ಕಾರ್ಯಾಚರಣೆಯ ಅತ್ಯಂತ ರೋಚಕ ಮತ್ತು ಉಳಿದೆಲ್ಲ ಯಶಸ್ಸುಗಳಿಗೆ ಸ್ಫೂರ್ತಿ ತುಂಬಿದ ಯಶೋಗಾಥೆ.

ಸೈನಿಕರೆಂದರೆ ಕೇವಲ ಯುದ್ಧ, ಉನ್ಮಾದ, ಕಡಿ-ಕೊಲ್ಲು ಎನ್ನುವ ರೋಷವೆಂಬ ಭ್ರಮೆಗಳು ಛಿದ್ರಗೊಂಡಾಗ ಇಂಥ ಸಾವಿರಾರು ಸ್ಫೂರ್ತಿದಾಯಕ ಕಥೆಗಳು ಎದ್ದು ನಿಲ್ಲುತ್ತವೆ. ಕಣ್ಣೆದುರು ಸಾವಿರ ಸಾವಿರ ಹೀರೊಗಳ ಮೆರವಣಿಗೆ ಹೊರಡುತ್ತದೆ.

I'm also from Karnataka nd I'm proud for that ☺

Hope the answer will help u☺☺

Similar questions