English, asked by hargun3540, 6 months ago

Eassy of childrens day in kannada

Answers

Answered by ARMY2009
7

ನವೆಂಬರ್ ಬಂತೆಂದರೆ ಸಾಕು ಎಲ್ಲಾ ಮಕ್ಕಳು ಮಕ್ಕಳ ದಿನಾಚರಣೆಯ ಸಂಭ್ರಮಕ್ಕಾಗಿ ತಯಾರಿ ನಡೆಸುತ್ತಾರೆ. ಇನ್ನು ಮಕ್ಕಳು ಮಾತ್ರವಲ್ಲದೇ ಹಿರಿಯರೂ ಕೂಡಾ ಮಕ್ಕಳ ದಿನಾಚರಣೆಯನ್ನ ತಾವು ಹೇಗೆ ಆಚರಿಸುತ್ತಿದ್ದೆವು ಎಂದು ಮೆಲುಕು ಹಾಕುತ್ತಾರೆ. ಈ ದಿನ ದೊಡ್ಡವರು ಅವರ ಬಾಲ್ಯದ ದಿನವನ್ನು ನೆನೆದು ಕಿರಿಯರಾಗುತ್ತಾರೆ. ಶಿಕ್ಷಕರಂತೂ ನವಂಬರ್ 1 ರಿಂದಲೇ ಶಾಲೆಗಳಲ್ಲಿ ಮಕ್ಕಳ ದಿನ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಮಕ್ಕಳ ಖುಷಿಯನ್ನು ಕೇಳುವಂತೆಯೇ ಇಲ್ಲ ಬಿಡಿ.

ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ, ಭಾಷಣದ ಸಿದ್ಧತೆ, ಹಾಡು, ಆಟಗಳಿಂದ ದಿನಾಚರಣೆಯನ್ನ ಆಚರಿಸಲು ಅನೇಕ ಸಿದ್ಧತೆ ಮಾಡಿಕೊಳ್ಳುತ್ತಾರೆ ಶಿಕ್ಷಕರು ಹಾಗೂ ಮಕ್ಕಳು. ಹಾಗಾಗಿ ಈ ಮಕ್ಕಳ ದಿನಾಚರಣೆಯ ಇತಿಹಾಸವೇನು, ಮಹತ್ವವೇನು ಮತ್ತು ಆಚರಣೆಯ ಉದ್ದೇಶಗಳೇನು ಎಂಬುವುದರ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂದರೆ ನಮ್ಮ ದೇಶದ ಮೊದಲ ಪ್ರಧಾನಿ ಪಂ, ಜವಹರಲಾಲ್ ನೆಹರು ಅವರ ಜನ್ಮದಿನ ಎಂದು ಎಲ್ಲರಿಗು ತಿಳಿದಿರುವ ವಿಚಾರ. ಆದರೆ ನೆಹರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಏಕೆ ಅನುಮತಿ ನೀಡಿದರು ಎನ್ನುವ ಕತೆಯೇ ರೋಚಕ.

1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎನ್. ಕುಲಕರ್ಣಿ ಎನ್ನುವವರು ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, 'ಧ್ವಜ ದಿನಾಚರಣೆ'ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಕಡೆಗೆ ವಾಲಿತು.

ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.

ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರುರವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು 'ಮಕ್ಕಳ ದಿನಾಚರಣೆ'ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ 'ಮಕ್ಕಳ ದಿನಾಚರಣೆ' ಆರಂಭವಾಯಿತು.

ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಕೆಲವು ಘಂಟೆಗಳ ಬಳಿಕ ರಜೆ ಘೋಷಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ ಸ್ಪರ್ಧೆಗಳು ಪ್ರಮುಖವಾಗಿರುತ್ತವೆ.

hope it helps

Similar questions