English, asked by spiderman6219, 5 months ago

EASSY ON RAKHSHA BHANDAN IN KANNADA

Answers

Answered by PreranaN
0

ಒಡಹುಟ್ಟಿದವರ ನಡುವೆ ಆಚರಿಸಲ್ಪಡುವ ಈ ರಕ್ಷಾ ಬಂಧನ ಹಬ್ಬ ಕೇವಲ ಒಡಹುಟ್ಟಿದವರಿಗೆ ಮಾತ್ರವಲ್ಲದೆ ಎಲ್ಲಾ ಬಗೆಯ ಸಹೋದರ -ಸಹೋದರಿ ಸಂಬಂಧಗಳನ್ನು ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ದಿನ. ಸಹೋದರನಿಗೆ ರಾಖಿಯನ್ನು ಕಟ್ಟಿ ಅವರಿಂದ ಉಡುಗೊರೆಯನ್ನು ಪ್ರತಿಯಾಗಿ ಪಡೆಯುವ ಈ ದಿನಕ್ಕಾಗಿ ವರ್ಷಪೂರ್ತಿ ಸಹೋದರಿಯರು ಎದುರು ನೋಡುತ್ತಿರುತ್ತಾರೆ. ರಕ್ಷಾ ಬಂಧನದ ಸಂಸ್ಕೃತದ ಅರ್ಥ "ರಕ್ಷಣೆಯ ಗಂಟು" ಎಂಬುದು.

ಶಾಸ್ತ್ರೋಕ್ತವಾಗಿ ಸಹೋದರರು ಮತ್ತು ಅವರ ಸಹೋದರಿಯರ ನಡುವಿನ ಪ್ರೀತಿಯ ಬಂಧವನ್ನು ಆಚರಿಸುವ ಒಂದು ಪುರಾತನ ಹಿಂದೂ ಹಬ್ಬವಾಗಿದೆ. ಸಹೋದರಿ ತನ್ನ ಪ್ರೀತಿ ಮತ್ತು ತನ್ನ ಸಹೋದರನ ಒಳಿತನ್ನು ಬಯಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ರಾಖಿ ಸಮಾರಂಭವನ್ನು ಆಚರಿಸುತ್ತಾಳೆ. ಇದಕ್ಕೆ ಪ್ರತಿಯಾಗಿ, ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಮತ್ತು ಎಲ್ಲಾ ಸಂದರ್ಭಗಳಲ್ಲಿ ಆಕೆಯ ಆರೈಕೆಯನ್ನು ಮಾಡುವ ಶಾಸ್ತ್ರೋಕ್ತ ಶಪಥ ಮಾಡುತ್ತಾನೆ. ಕೌಟುಂಬಿಕವೆಂದು ದೃಢೀಕರಿಸಲಾಗುವ ಹಲವಾರು ಸಮಾರಂಭಗಳಲ್ಲಿ ಇದು ಕೂಡ ಒಂದಾಗಿದೆ.

ರಕ್ಷಾ ಬಂಧನ ಹಬ್ಬದ ಕೆಲವು ದಿನಗಳ ಮೊದಲು, ಮಹಿಳೆಯರು ರಾಖಿಗಳನ್ನು ಖರೀದಿಸಲು ಆರಂಭಿಸುತ್ತಾರೆ. ಕೆಲವು ಸಹೋದರಿಯರು ತಾವೇ ಸ್ವತಃ ರಾಖಿಯನ್ನು ತಯಾರಿಸಿದರೆ ಇತರರು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಅದೇನೇ ಇದ್ದರೂ ರಾಖಿಯನ್ನು ಸಹೋದರರಿಗೆ ಕಟ್ಟುವುದೇ ಈ ದಿನದ ವಿಶೇಷ. ರಾಖಿ ಕಟ್ಟುವ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಇತರ ಆಚರಣೆಗಳೂ ಇವೆ. ಅವುಗಳು ಯಾವುದೆಂದು ನೋಡೋಣ.

ಮುಂಜಾನೆಯ ಜಳಕ

ಮುಂಜಾನೆಯ ಜಳಕ

ಸಹೋದರ-ಸಹೋದರಿಯರು ರಕ್ಷಾ ಬಂಧನದ ದಿನದಂದು ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು.

ಉಪವಾಸ

ಉಪವಾಸ

ಸಹೋದರನಿಗೆ ರಾಖಿಯನ್ನು ಕಟ್ಟುವವರೆಗೂ ಸಹೋದರಿ ಆಹಾರವನ್ನು ಸೇವಿಸದೇ ಇರುವುದು ವಾಡಿಕೆ.

ರಾಖಿ ತಾಲಿ

ರಾಖಿ ತಾಲಿ

ಈ ತಾಲಿ ಎಲ್ಲಾ ಅಗತ್ಯ ವಸ್ತುಗಳಿಂದ ಅಲಂಕೃತವಾಗಿರಬೇಕು. ಈ ತಾಲಿಯಲ್ಲಿ ರಾಖಿ, ದೀಪ, ಸಿಹಿ ತಿನಿಸು, ತಿಲಕ/ಕುಂಕುಮ ಮತ್ತು ಅಕ್ಕಿ/ಅಕ್ಷತೆಯನ್ನು ಹೊಂದಿರಬೇಕು.

ರಾಖಿ ಕಟ್ಟುವುದು

ರಾಖಿ ಕಟ್ಟುವುದು

ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು ನೆತ್ತಿಯ ಮೇಲೆ ಅಕ್ಕಿ/ಅಕ್ಷತೆಯನ್ನು ಹಾಕಬೇಕು. ನಂತರ ಆರತಿ ಬೆಳಗಬೇಕು. ನಂತರ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು.

ಉಡುಗೊರೆ

ಉಡುಗೊರೆ

ಸಹೋದರನು ರಾಖಿ ಕಟ್ಟಿಸಿಕೊಂಡ ಮೇಲೆ ಸಹೋದರಿಗೆ ಉಡುಗೊರೆಯನ್ನು ನೀಡಬೇಕು. ಜೊತೆಗೆ ಸಹೋದರಿಯನ್ನು ಜೀವನದ ಯಾವುದೇ ಸಮಯದಲ್ಲಿ ಕಾಪಾಡುತ್ತೇನೆ ಎಂದು ವಚನ ನೀಡಬೇಕು.

ಭೂರಿ ಭೋಜನ

ಭೂರಿ ಭೋಜನ

ಈ ಎಲ್ಲಾ ವಿಧಿ ವಿಧಾನಗಳ ನಂತರ ಸಹೋದರಿ ಆಹಾರವನ್ನು ಸೇವಿಸಬಹುದು. ನಂತರ ಸಹೋದರಿ ತನ್ನ ಸಹೋದರನಿಗೆ ಇಷ್ಟವಾದ ಅಡುಗೆಯನ್ನು ಮಾಡಿ ರಸ ಭೋಜನವನ್ನು ಉಣಬಡಿಸಬೇಕು.

Similar questions