election essay kannada
language
Answers
Answer:
Explanation:
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು[೧] ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. [೧]ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಈ ಚುನಾವಣೆ ಪ್ರಕ್ರಿಯೆಯನ್ನು,ಖಾಸಗಿ ಮತ್ತು ವ್ಯಾಪಾರದ ಸಂಘಟನೆಗಳಲ್ಲಿ, ಕ್ಲಬ್‌ಗಳಿಂದ ಹಿಡಿದು ಸ್ವಯಂ ಸೇವಾ ಸಂಘಟನೆ ಮತ್ತು ಪಾಲಿಕೆಗಳವರೆಗೂ ಬಳಸಲಾಗುತ್ತದೆ.
ಆಧುನಿಕ ಪ್ರಜಾತಂತ್ರದಲ್ಲಿ ಈ ಚುನಾವಣಾ ಪ್ರಕ್ರಿಯೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಗೆ ಅಸ್ತ್ರವಾಗಿ ವಿಶ್ವವ್ಯಾಪಿ ಬಳಸಲಾಗುತ್ತದೆ. ಆದರೆ ಪುರಾತನ ಅಥೆನ್ಸರಲ್ಲಿ ರೂಢಿಯಲ್ಲಿರುವ ಮೂಲಮಾದರಿಯ ಪ್ರಜಾಪ್ರಭುತ್ವಕ್ಕಿಂತ ಭಿನ್ನವಾಗಿದೆ. ಚುನಾವಣೆಗಳನ್ನು ಕೆಲಜನರ ಗುಂಪಿನ ವ್ಯವಸ್ಥೆಯೆಂದು ಪರಿಗಣಿಸಲಾಗುತ್ತಿತ್ತು ಮತ್ತು ಬಹುತೇಖ ರಾಜಕೀಯ ಕಛೇರಿಗಳಲ್ಲಿ ಪದಾಧಿಕಾರಿಗಳನ್ನು ವಿಂಗಡಿಸುವ ರೀತಿಯಲ್ಲಿ,ವಿತರಣೆ ಎಂದೂ ಕರೆಯುಬಹುದಾದ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು.
ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವುದೆಂದರೆ, ಕ್ರಮಬದ್ಧ ಚುನಾವಣೆ ವ್ವವಸ್ಥೆ ಎಲ್ಲಿ ಇಲ್ಲವೋ ಮತ್ತು ಪ್ರಚಲಿತ ಚುನಾವಣೆ ಎಲ್ಲಿ ಸುಧಾರಿಸಬೇಕೋ ಅಂಥ ಕಡೆಗಳಲ್ಲಿ ಕ್ರಮಬದ್ಧ ಚುನಾವಣಾ ವ್ಯವಸ್ಥೆಯನ್ನು ಅಳವಡಿಸುವುದು. ಸೆಫಾಲಜಿ ಅಂದರೆ ಚುನಾವಣಾ ಫಲಿತಾಂಶಗಳನ್ನು ಮತ್ತು ಅದಕ್ಕೆ ಸಂಬಂದ್ಧ ಪಟ್ಟ ಅಂಕಿ ಅಂಶಗಳನ್ನು ಅಧ್ಯಯನ ಮಾಡುವುದು.(ವಿಶೇಷವಾಗಿ ಇವುಗಳ ಆಧಾರದ ಮೇಲೆ ಚುನಾವಣಾ ಫಲಿತಾಂಶಗಳ ಭವಿಷ್ಯ ನುಡಿಯುವುದು).
ಚುನಾಯಿಸು ವುದೆಂದರೆ,"ಆಯ್ಕೆ ಮಾಡುವುದು ಅಥವಾ ನಿರ್ಧರಿಸುವುದು[೨]",ಮತ್ತು ಕೆಲವು ಸಾರಿ ಬ್ಯಾಲೆಟ್ ಅನ್ನು ಬೇರೆ ರೀತಿಯಲ್ಲಿ ಕರೆಯುವುದೂ ಇದೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸನಲ್ಲಿ ಚುನಾವಣೆಯನ್ನು ರೆಫೆರಂಡಂ ಅಂತ ಉಲ್ಲೇಖಿಸುವುದೂ ಇದೆ.