ಬಾಹ್ಯಾಕಾಶ ವಿಜ್ಞಾನ: essay
Answers
Answer:
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಅವುಗಳ ಅನ್ವಯ ಕುರಿತ ವಲಯಗಳಲ್ಲಿ ಭಾರತ ಮತ್ತು ಅಲ್ಜೀರಿಯಾ ನಡುವಿನ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿತು. ಈ ಒಪ್ಪಂದಕ್ಕೆ 2018ರ ಸೆಪ್ಟೆಂಬರ್ 19ರಂದು ಬೆಂಗಳೂರಿನಲ್ಲಿ ಸಹಿ ಹಾಕಲಾಗಿತ್ತು.
ಪ್ರಮುಖಾಂಶ:-
• ಈ ಒಪ್ಪಂದದಿಂದಾಗಿ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ದೂರಸಂವೇದಿ ಸೇರಿದಂತೆ ಇತರೆಡೆ ಅವುಗಳನ್ನು ಬಳಕೆ ಕುರಿತಂತೆ, ಪರಸ್ಪರ ಹಿತಾಸಕ್ತಿ ವಲಯಗಳಲ್ಲಿ ಸಹಕಾರ ಸಾಧಿಸಲು ನೆರವಾಗುತ್ತದೆ. ಸಂವಹನ ಉಪಗ್ರಹ ಆಧಾರಿತ ನೌಕೆ, ಬಾಹ್ಯಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ, ಗಗನಯಾನ ಮತ್ತು ಬಾಹ್ಯಾಕಾಶ ವ್ಯವಸ್ಥೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಅನ್ವಯಿಸುವ ಅಂಶಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
• ಈ ಒಪ್ಪಂದದನ್ವಯ ಜಂಟಿ ಕಾರ್ಯಕಾರಿ ಸಮಿತಿ ರಚನೆಯಾಗಲಿದೆ. ಅದಕ್ಕೆ ಭಾರತೀಯ ಬಾಹ್ಯಾಕಾಶ ಇಲಾಖೆ – ಇಸ್ರೋ ಮತ್ತು ಅಲ್ಜೀರಿಯಾ ಬಾಹ್ಯಾಕಾಶ ಏಜೆನ್ಸಿ – ಎ.ಎಸ್.ಎ.ಎಲ್ ನಿಂದ ಸದಸ್ಯರನ್ನು ಸೇರಿಸಿಕೊಳ್ಳಲಾಗುವುದು. ಇದರಿಂದಾಗಿ ಒಪ್ಪಂದದ ಅನುಷ್ಠಾನದ ವಿಧಾನಗಳು ಮತ್ತು ಕಾಲಮಿತಿ ಸೇರಿದಂತೆ ಸಮಗ್ರ ಕ್ರಿಯಾ ಯೋಜನೆ ರೂಪಿಸಲು ನೆರವಾಗುತ್ತದೆ.
ಪರಿಣಾಮ :-
ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಭಾರತ ಮತ್ತು ಅಲ್ಜೀರಿಯಾ ನಡುವಿನ ಸಹಕಾರ ಸಂಬಂಧ ಮತ್ತಷ್ಟು ಬಲವರ್ಧನೆಯಾಗಲಿದೆ ಮತ್ತು ಹೊಸ ಬಗೆಯ ಸಂಶೋಧನಾ ಚಟುವಟಿಕೆಗಳ ಅನ್ವೇಷಣೆಗೆ ಅವಕಾಶ ಸಿಗುವುದಲ್ಲದೆ, ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ನೌಕೆ, ದೂರಸಂವೇದಿ ತಂತ್ರಜ್ಞಾನ ವಲಯಗಳಲ್ಲಿನ ಸಾಧ್ಯತೆಗಳ ಅವಕಾಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಜೊತೆಗೆ ಮನುಕುಲದ ಒಳಿತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಅನ್ವಯಿಸಲು ಜಂಟಿಯಾಗಿ, ಕಾರ್ಯಯೋಜನೆಗಳನ್ನು ಕೈಗೊಳ್ಳಲು ಒಪ್ಪಂದ ನೆರವಾಗಲಿದೆ. ಹಾಗಾಗಿ ಎರಡೂ ದೇಶಗಳ ಎಲ್ಲ ವರ್ಗದ ಜನರಿಗೂ ಇದು ಅನುಕೂಲ ಕಲ್ಪಿಸಲಿದೆ.
ಹಿನ್ನೆಲೆ:-
• ಭಾರತ ಮತ್ತು ಅಲ್ಜೀರಿಯಾ ದೇಶಗಳು ಬಾಹ್ಯಾಕಾಶ ವಲಯದಲ್ಲಿ ವಾಣಿಜ್ಯ ಸಮಾಲೋಚನೆಗಳನ್ನು ನಡೆಸುತ್ತಿವೆ. ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್, ಅಲ್ಜೀರಿಯಾ ಅಧಿಕಾರಿಗಳೊಂದಿಗೆ ಉಪಗ್ರಹಗಳ ಉಡಾವಣೆಗೆ ನೆಲೆ ನಿರ್ಮಾಣ (ಪಿ.ಎಸ್.ಎಲ್.ವಿ 2010 ರಿಂದ 2016ರ ನಡುವೆ ಅಲ್ಜೀರಿಯಾದ ಮೂರು ಸಣ್ಣ ಉಪಗ್ರಹಗಳು ಮತ್ತು ಒಂದು ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು)ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದವು. ಅಲ್ಜೀರಿಯಾ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತದೊಂದಿಗೆ ಬಾಹ್ಯಾಕಾಶ ಸಹಕಾರ ಸಾಧಿಸುವ ಆಸಕ್ತಿ ವ್ಯಕ್ತಪಡಿಸಿತ್ತು. 2014ರ ಡಿಸೆಂಬರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಸ್ರೋ ಮತ್ತು ಡಿಒಎಸ್ ಗಳನ್ನು ಅಲ್ಜೀರಿಯಾ ಮುಂದಿಟ್ಟಿದ್ದ ಬಾಹ್ಯಾಕಾಶ ಸಹಕಾರ ಕುರಿತ ಅಂತರ ಸರ್ಕಾರ ಒಪ್ಪಂದದ ಪ್ರಸ್ತಾವವನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು ಮತ್ತು ಅಲ್ಜೀರಿಯಾ ನೀಡಿದ್ದ ಒಪ್ಪಂದದ ಕರಡನ್ನು ಕಳುಹಿಸಿತ್ತು.
• ಇಸ್ರೋ ಹಾಗೂ ಅಲ್ಜೀರಿಯಾ ಬಾಹ್ಯಾಕಾಶ ಏಜೆನ್ಸಿ ಅಂತರ ಸರ್ಕಾರ ಒಪ್ಪಂದದ ಕರಡನ್ನು ಪರಾಮರ್ಶಿಸಿ, ಅವುಗಳ ಕುರಿತ ವಿಮರ್ಶಾ ಅಂಶಗಳನ್ನು ಇ-ಮೇಲ್ ಮೂಲಕ ವಿನಿಮಯ ಮಾಡಿಕೊಂಡಿದ್ದವು. ಹಲವು ಬಾರಿ ಸಮಾಲೋಚನೆಗಳ ನಂತರ, ಎರಡೂ ಕಡೆ ಬಾಹ್ಯಾಕಾಶ ಸಹಕಾರ ಒಪ್ಪಂದವನ್ನು ಏಜೆನ್ಸಿಗಳ ಹಂತದಲ್ಲಿ ಕಾರ್ಯಸಾಧುವಾಗುವಂತೆ ಅಳವಡಿಸಿಕೊಳ್ಳುವ ನಿರ್ಧಾರ ಕೈಗೊಂಡವು