Hindi, asked by arfas526, 1 year ago

ರಾಷ್ಟ್ರೀಯ ಹಬ್ಬಗಳು ಮಹತ್ವ essay

Answers

Answered by chandresh126
360

ಉತ್ತರ:

ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಮತ್ತು ರಿಪಬ್ಲಿಕ್ ಡೇ ಭಾರತದ ಮೂರು ರಾಷ್ಟ್ರೀಯ ಉತ್ಸವಗಳಾಗಿವೆ. ಈ ಉತ್ಸವಗಳಲ್ಲಿ ಪ್ರತಿಯೊಂದು ತನ್ನದೇ ಆದ ಪ್ರಾಮುಖ್ಯತೆಯನ್ನು ಮತ್ತು ಪ್ರಸ್ತುತತೆಯನ್ನು ಹೊಂದಿದೆ. ಇವುಗಳನ್ನು ವಿವಿಧ ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಇಲ್ಲಿ ಪ್ರತಿ ಹಬ್ಬಗಳು ಮತ್ತು ಅವುಗಳ ಪ್ರಾಮುಖ್ಯತೆ ಬಗ್ಗೆ ಸಂಕ್ಷಿಪ್ತ ವಿವರಣೆಯಾಗಿದೆ:

ಸ್ವಾತಂತ್ರ್ಯ ದಿನ

ಭಾರತವು 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಪಡೆಯಿತು. ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಆಚರಿಸಲಾಗುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥವಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಗೌರವಕ್ಕೆ ಈ ದಿನವನ್ನು ಆಚರಿಸಲಾಗುತ್ತದೆ. ಅವರ ವೀರರ ಕಾರ್ಯಗಳು ಈ ದಿನ ನೆನಪಿನಲ್ಲಿವೆ. ಸ್ವಾತಂತ್ರ್ಯ ಚಳವಳಿಗಳನ್ನು ವಿವರಿಸುವ ಭಾಷಣಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯವನ್ನು ಮಹಾನ್ ಆತ್ಮಗಳನ್ನು ಗೌರವಿಸಲು ಮತ್ತು ದೇಶದ ಯುವಕರನ್ನು ಸ್ಫೂರ್ತಿಗೊಳಿಸುತ್ತದೆ. ಫ್ಲಾಗ್ ಹೋಸ್ಟಿಂಗ್ ದೇಶದಾದ್ಯಂತದ ವಿವಿಧ ಸ್ಥಳಗಳಲ್ಲಿ ನಡೆಯುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಿಪಬ್ಲಿಕ್ ಡೇ

1950 ರ ಜನವರಿ 26 ರಂದು ಭಾರತದ ಸಂವಿಧಾನವು ರೂಪಕ್ಕೆ ಬಂದಿತು. ಇದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಸಂವಿಧಾನದ ರಚನೆಯೊಂದಿಗೆ ಭಾರತವು ಸಾರ್ವಭೌಮ ರಾಷ್ಟ್ರವಾಯಿತು. 26 ಜನವರಿ ನಂತರ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಮುಖ್ಯ ರಿಪಬ್ಲಿಕ್ ದಿನಾಚರಣೆಯನ್ನು ನವ ದೆಹಲಿಯ ರಾಜ್ಪಥ್ನಲ್ಲಿ ಆಯೋಜಿಸಲಾಗುತ್ತದೆ. ಈ ಸಮಾರಂಭದಲ್ಲಿ ಪರೇಡುಗಳು, ನೃತ್ಯಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇದು ಭಾರತದ ಸಂವಿಧಾನದ ಗೌರವದ ಸಂಕೇತವಾಗಿದೆ. ಈ ದಿನವನ್ನು ಆಚರಿಸಲು ಅನೇಕ ಸಣ್ಣ ಘಟನೆಗಳು ದೇಶದಾದ್ಯಂತ ನಡೆಯುತ್ತವೆ.

ಗಾಂಧಿ ಜಯಂತಿ

ಗಾಂಧಿ ಜಯಂತಿ ಪ್ರತಿವರ್ಷ ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ಮಹಾತ್ಮಾ ಗಾಂಧಿಯವರ ಹುಟ್ಟುಹಬ್ಬವಾಗಿದೆ. ಇವರು ಅತ್ಯಂತ ಪ್ರೀತಿಪಾತ್ರರಾದ ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು ಮತ್ತು ಬ್ರಿಟಿಷರನ್ನು ಓಡಿಸಲು ಹಲವಾರು ಭಾರತೀಯರು ಸೇರಿಕೊಂಡರು. ನಮ್ಮ ದೇಶದ ಸ್ವಾತಂತ್ರ್ಯದ ಕಡೆಗೆ ಅವರ ಸಿದ್ಧಾಂತಗಳನ್ನು ಮತ್ತು ಕೊಡುಗೆಗಳನ್ನು ಗೌರವಿಸಲು ದಿನವನ್ನು ಆಚರಿಸಲಾಗುತ್ತದೆ.

ತೀರ್ಮಾನ

ಹೀಗಾಗಿ, ಭಾರತದ ಎಲ್ಲಾ ಮೂರು ರಾಷ್ಟ್ರೀಯ ಉತ್ಸವಗಳು ಅದರ ಪ್ರಜೆಗಳಿಗೆ ವಿಶೇಷ ಮಹತ್ವವನ್ನು ಹೊಂದಿವೆ. ಇವುಗಳು ದೇಶದಾದ್ಯಂತ ಉತ್ಸಾಹದಿಂದ ಆಚರಿಸಲ್ಪಡುತ್ತವೆ.

Answered by sathishthapa63
70

ಹಬ್ಬವು (ಉತ್ಸವ) ಸಾಮಾನ್ಯವಾಗಿ ಒಂದು ಸ್ಥಳೀಯ ಸಮುದಾಯದಿಂದ ಏರ್ಪಡಿಸಲಾಗುವ, ಆ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಮತ್ತು ಅದನ್ನು ಆಚರಿಸುವ ಒಂದು ಸಂದರ್ಭ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ.

ಉತ್ಸವಗಳು: ಬಹು ಜನ ವಿಶೇಷ ಉತ್ಸಾಹದಿಂದ ನಡೆಸುವ ಕಲಾಪಗಳು. ಜೀವನದ ಮುಖ್ಯ ಆಶಯಗಳು ಈಡೇರಿದಾಗ ಉತ್ಸಾಹ ತೋರಿಸುವುದು ಮಾನವರ ಸಹಜವಾದ ಪ್ರವೃತ್ತಿ. ಉತ್ಸಾಹಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಹಲವು ಜನ ಸೇರುತ್ತಾರೆ. ಹೀಗೆ ಜನ ಸೇರಿದಾಗ ಈ ಉತ್ಸಾಹ ಹತ್ತುಪಟ್ಟು ಹೆಚ್ಚಿ ಅದು ಉತ್ಸವದಲ್ಲಿ ಪರಿಣಾಮಗೊಳ್ಳು ತ್ತದೆ. ಉತ್ಸವಗಳು ಎಲ್ಲ ಬಗೆಯ ಜನರಲ್ಲೂ ಎಲ್ಲ ದರ್ಜೆಯ ಜನರಲ್ಲೂ-ಅನಾಗರಿಕರಲ್ಲೂ ನಾಗರಿಕರಲ್ಲೂ ಅನಾದಿ ಕಾಲದಿಂದ ಕಂಡುಬಂದಿರುವ ಸಾಮಾಜಿಕ ಸಂಪ್ರದಾಯಗಳಾಗಿವೆ. ಉತ್ಸವಗಳಲ್ಲಿ ಭಾಗವಹಿಸುವ ಜನರ ಸಂಖ್ಯೆ ಹತ್ತಿಪ್ಪತ್ತರಿಂದ ಹಿಡಿದು ಲಕ್ಷಾಂತರದವರೆಗೆ ಇರುತ್ತದೆ. ಉತ್ಸವ ಸಂದರ್ಭಗಳೂ ಅನೇಕವಾಗಿವೆ. ಹುಟ್ಟು ಹಬ್ಬ, ನಾಮಕರಣ, ಚೌಲ, ಮುಂಜಿ, ಮದುವೆ ಮುಂತಾದವು ಕುಟುಂಬಗಳ ಉತ್ಸವಗಳು. ಯುದ್ಧದಲ್ಲಿ ಜಯ, ಸಾಮಾಜಿಕ ಉದ್ಯಮಗಳ ಮುನ್ನಡೆ, ಕೆರೆ ಕಟ್ಟೆ ಕೋಟೆ ಕೊತ್ತಳಗಳ ನಿರ್ಮಾಣ, ಹೊಸ ಸಂಸ್ಥೆಗಳ ಸ್ಥಾಪನೆ, ಕಲೆಗಾರರ ಮತ್ತು ಮಹಾತ್ಮರ ಸನ್ಮಾನ ಮುಂತಾದ ಸಂದರ್ಭಗಳಲ್ಲಿ ನಡೆಯುವ ಉತ್ಸವಗಳು ಸಾರ್ವಜನಿಕ ಉತ್ಸವಗಳು. ಇವುಗಳಲ್ಲದೆ ಮತಕ್ಕೆ ಸಂಬಂಧಪಟ್ಟ ಉತ್ಸವಗಳು ವಿಶೇಷವಾಗಿ ಇವೆ. ಉತ್ಸವಗಳನ್ನು ಲೌಕಿಕ ಉತ್ಸವಗಳು, ಮತಕ್ಕೆ ಸಂಬಂಧಪಟ್ಟ ಉತ್ಸವಗಳು, ರಾಜಕೀಯ ಸಂಬಂಧವುಳ್ಳ ಉತ್ಸವಗಳು-ಎಂದು ಸಾಮಾನ್ಯವಾಗಿ ವಿಭಾಗಮಾಡ ಬಹುದು. (ನೋಡಿ - ರಾಷ್ಟ್ರೀಯ ಉತ್ಸವಗಳು, ಲೌಕಿಕ ಉತ್ಸವಗಳು) ಹಿಂದಿನ ಕಾಲದಲ್ಲಿ ಎಲ್ಲ ಉತ್ಸವಗಳ ಹಿಂದೆ ಮತಭಾವನೆ ಇದ್ದೇ ಇತ್ತು. ಭಾರತೀಯ ಸಮಾಜದಲ್ಲಿ ಮದುವೆ, ನಾಮಕರಣ, ಚೌಲ ಮುಂತಾದ ಕುಟುಂಬಗಳ ಉತ್ಸವಗಳೂ ರಾಜನ ಪಟ್ಟಾಭಿಷೇಕ, ರಾಜಕೀಯ ವಿಜಯೋತ್ಸವಗಳೂ ಮತಸಂಸ್ಕಾರಗಳಾಗಿಯೇ ಇದ್ದುವು. ಬಹಳ ಕಾಲದವರೆಗೂ ಸಾಮಾನ್ಯವಾಗಿ ರಾಜಕೀಯಕ್ಕೂ ಮತಕ್ಕೂ ನಿಕಟಸಂಬಂಧ ಇತ್ತು. ಇಲ್ಲಿ ಮತಸಂಸ್ಥೆಗಳ ಉತ್ಸವಗಳನ್ನು ಮಾತ್ರ ಕುರಿತು ಪ್ರಸ್ತಾಪ ಮಾಡಲಾಗುತ್ತದೆ. ಪ್ರಪಂಚದ ಎಲ್ಲ ಮತಗಳವರು ತಂತಮ್ಮ ಮತಗಳಿಗೆ ಸಂಬಂಧಿಸಿದಂತೆ ಉತ್ಸವಗಳನ್ನು ಏರ್ಪಡಿಸುತ್ತಾರೆ. ಯೆಹೂದ್ಯರು, ಕ್ರೈಸ್ತರು, ಮುಸ್ಲಿಮರು ವರ್ಷದ ಕೆಲವು ದಿನಗಳಲ್ಲಿ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇವು ಜಾತ್ರೆಗಳು. ಇಂಥ ಸಂದರ್ಭಗಳಲ್ಲೂ ಉತ್ಸವಗಳು ನಡೆಯುವುದುಂಟು. ಭಾರತದಲ್ಲಿ ಯೆಹೂದ್ಯರು, ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ. ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಮುಖ್ಯವಾದ ಮಹಾಪುರುಷರ ಜಯಂತಿಗಳು, ನಾನಕ್ ಜಯಂತಿ, ಬಸವಜಯಂತಿ, ಮಹಾವೀರಜಯಂತಿ, ಶಂಕರಜಯಂತಿ, ಆಳ್ವಾರುಗಳ ತಿರುನಕ್ಷತ್ರಗಳು ಇವು ಒಂದು ಬಗೆಯವು. ಶಿವರಾತ್ರಿ, ಕೃಷ್ಣಜನ್ಮಾಷ್ಟಮಿ, ಶ್ರೀರಾಮನವಮಿ, ಹಳ್ಳಿಯ ಜನರು ನಡೆಸುವ ಮಾರಮ್ಮನ ಉತ್ಸವ ಮುಂತಾದವು ಎರಡನೆಯ ಬಗೆಯವು. ಇಲ್ಲಿ ಮುಖ್ಯವಾಗಿ ಲಕ್ಷಿಸಬೇಕಾದವು ಶಿವ, ವಿಷ್ಣು ದೇವಾಲಯಗಳಲ್ಲಿ ನಡೆಸುವ ಉತ್ಸವಗಳು. ಇವು ನಿತ್ಯೋತ್ಸವ, ಪಕ್ಷೋತ್ಸವ, ಮಾಸೋತ್ಸವ, ಸಂವತ್ಸರೋತ್ಸವಗಳೆಂದು ಪ್ರಸಿದ್ಧವಾಗಿವೆ. ಪ್ರತಿನಿತ್ಯವೂ ಉತ್ಸವಗಳು ನಡೆಯುವುದು ತಿರುಪತಿ, ಮೇಲುಕೋಟೆ, ನಂಜನಗೂಡು, ಶ್ರೀರಂಗ ಮುಂತಾದ ದೊಡ್ಡ ದೇವಸ್ಥಾನಗಳಲ್ಲಿ. ಮಧ್ಯ ದರ್ಜೆಯ ದೇವಸ್ಥಾನಗಳಲ್ಲಿ ಪಕ್ಷೋತ್ಸವಗಳು ನಡೆಯುತ್ತವೆ. ಸಂವತ್ಸರೋತ್ಸವಗಳು ಬಹುಶಃ ಎಲ್ಲ ದೇವಾಲಯಗಳಲ್ಲೂ ನಡೆಯುತ್ತವೆ. ದೇವಸ್ಥಾನಗಳ ಪೂಜೆಗಳಲ್ಲಿ ನಿತ್ಯಪೂಜೆ, ನೈಮಿತ್ತಿಕಪೂಜೆ, ಉತ್ಸವಪೂಜೆ ಎಂದು ಮೂರು ಬಗೆಗಳಿವೆ. ಸಾಧಾರಣವಾಗಿ ನಿತ್ಯವೂ ಒಂದು ಸಲವಾದರೂ ದೇವರಿಗೆ ಪೂಜೆ ಸಲ್ಲಿಸುವುದು ನಿತ್ಯಪೂಜೆ. ನಿತ್ಯಪೂಜೆ ದಿನಕ್ಕೆ ಎರಡು ಸಲ ನಡೆಯುವ ದೇವಾಲಯಗಳೂ ಇವೆ. ತಿರುಪತಿ ವೆಂಕಟೇಶ್ವರ ದೇವಾಲಯದಂಥ ತುಂಬ ಅಭಿವೃದ್ದಿ ಸ್ಥಿತಿಯಲ್ಲಿರುವ ದೇವಾಲಯಗಳಲ್ಲಿ ಕ್ರಮವಾಗಿ ಸೂರ್ಯೋದಯಕ್ಕೆ ಮುಂಚೆ, ಸೂರ್ಯೋದಯಾನಂತರ, ಪುರ್ವಾಹ್ನ, ಮಧ್ಯಾಹ್ನ, ಸಂಜೆ, ರಾತ್ರಿ, ಅರ್ಧಯಾಮದಲ್ಲಿ-ಹೀಗೆ ಆರು ಸಲ ನಿತ್ಯಪೂಜೆ ನಡೆಯುತ್ತದೆ. ಒಂದೊಂದು ಪೂಜೆಯ ಸಮಯದಲ್ಲೂ ದೇವರ ಅಲಂಕಾರಗಳು ಬೇರೆಯಾಗು ತ್ತವೆ. ನಿತ್ಯಪೂಜೆಯ ಜೊತೆಗೆ ಕೆಲವು ದೊಡ್ಡ ದೇವಸ್ಥಾನಗಳಲ್ಲಿ ನೈಮಿತ್ತಿಕಪೂಜೆಯೂ ಉಂಟು. ಈ ನೈಮಿತ್ತಿಕ ಪೂಜೆಗಳು ಉತ್ಸವಗಳಾಗಿ ಪರಿಣಮಿಸುತ್ತವೆ. ಇವೇ ನಿತ್ಯೋತ್ಸವಗಳು. ಇವು ಸಾಮಾನ್ಯವಾಗಿ ದೇವಸ್ಥಾನದ ಒಳಪ್ರಾಕಾರದಲ್ಲಿ ನಡೆಯುತ್ತವೆ. ಆಗ ದೇವರ ಉತ್ಸವಕ್ಕಾಗಿ ಸಣ್ಣಪಲ್ಲಕ್ಕಿಯನ್ನು ಉಪಯೋಗಿಸುತ್ತಾರೆ. ದೇವಸ್ಥಾನದ ಸುತ್ತ ಅಥವಾ ಊರ ಸುತ್ತ, ನಡೆಯುವ ಉತ್ಸವಗಳಲ್ಲಿ ದೊಡ್ಡ ಪಲ್ಲಕ್ಕಿಯನ್ನೂ ಉಪಯೋಗಿಸುತ್ತಾರೆ. ಆಳ್ವಾರುಗಳ ತಿರುನಕ್ಷತ್ರ, ಗಣೇಶ ಚತುರ್ಥಿ, ಶಿವರಾತ್ರಿ, ರಾಮನವಮಿ, ಕೃಷ್ಣಜನ್ಮಾಷ್ಟಮಿ ಇತ್ಯಾದಿ ದಿನಗಳಲ್ಲೂ ಉತ್ಸವಗಳು ನಡೆಯುತ್ತವೆ. ಕೆಲವು ದೇವಾಲಯಗಳಲ್ಲಿ ಉದಾಹರಣೆಗೆ ಗಣೇಶನ ಗುಡಿಯಲ್ಲಿ ಗಣೇಶ ಚತುರ್ಥಿ ವಿಶೇಷೋತ್ಸವ. ಸ್ಕಾಂದ ಷಷ್ಠಿದಿವಸ ಸುಬ್ರಹ್ಮಣ್ಯ ಗುಡಿಯಲ್ಲಿ ವಿಶೇಷೋತ್ಸವ, ರಾಮದೇವರ ಗುಡಿಯಲ್ಲಿ ರಾಮನವಮಿಯಂದು ಉತ್ಸವ, ದುರ್ಗಿ ದೇವಸ್ಥಾನದಲ್ಲಿ ದುರ್ಗಾಷ್ಟಮಿಯಂದು ವಿಶೇಷೋತ್ಸವ, ಕೃಷ್ಣಜಯಂತಿಯ ದಿನ ಕೃಷ್ಣದೇವರ ವಿಶೇಷೋತ್ಸವ. ಆ ದಿವಸ ಸಾಮಾನ್ಯವಾಗಿ ಊರಿನ ಮುಖ್ಯ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯುತ್ತದೆ. ಈ ಉತ್ಸವಗಳಲ್ಲಿ ದೇವರ ಮೆರವಣಿಗೆಗಾಗಿ ಶಾಸ್ತ್ರೀಯವಾಗಿಯೂ ಕಲಾತ್ಮಕವಾಗಿಯೂ ಮಾಡಿದ ಲೋಹದ ವಿಗ್ರಹಗಳಿರುತ್ತವೆ. ಅವಕ್ಕೆ ಅಗತ್ಯವಾದ ಅನೇಕಾನೇಕ ಬೆಲೆ ಬಾಳುವ ಆಭರಣಗಳೂ ವಸ್ತ್ರಗಳೂ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಉತ್ಸವ ವಿಗ್ರಹಗಳನ್ನು ವಾಹನಗಳ ಮೇಲೆ ಕೂಡಿಸಿ ಮೆರವಣಿಗೆ ಮಾಡುವುದೂ ಉಂಟು.

Similar questions