India Languages, asked by PrajnaLokesh, 4 days ago

essay about 1857 revolt in kannada​

Answers

Answered by keshav2150
1

ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಕೂಡಾ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಕೆಲವು ಭಾರತೀಯ ಇತಿಹಾಸಕಾರರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು ಸಿಪಾಯಿ ದಂಗೆ ಮಾತ್ರ ಎಂದಿದ್ದಾರೆ.[೧]

ವಿವಿಧ ವಿದ್ವಾಂಸರ ಪ್ರಕಾರ ಇದೊಂದು ಸಂಪೂರ್ಣ ಸಿಪಾಯಿ ದಂಗೆ ಹೊರತು ಮತ್ತೇನೂ ಅಲ್ಲ ಸ್ವಲ್ಪ ಮಟ್ಟಿನ ಜನತೆಯ ಹೋರಾಟವಾಗಿತ್ತು ಎಂದು ಆಂಗ್ಲ ವಿದ್ವಾಂಸರಾದ ವಿ.ಎ.ಸ್ಮಿತ್ ಹೇಳಿದ್ದಾರೆ. ಭಾರತೀಯ ಇತಿಹಾಸಕಾರ ಹಾಗು ವಿದ್ವಾಂಸ ವಿ. ಡಿ. ಸಾರ್ವಕರ್ ತಮ್ಮ 1857 'ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸೈನಿಕ ಮತ್ತು ಸಂಗ್ರಾಮದ ಹಿನ್ನೆಲೆಯಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಚರ್ಚೆಗಳು ಮುಂದಿನಂತೆ ಇವೆ

Similar questions