Essay about coronavirus in kannada
Answers
Answer:
ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ..
ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು.
ಕೊರೊನಾ ವೈರಸ್ ಸೋಂಕು ಎಂದರೇನು?
ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.
ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು.ಇನ್ನು ಕೆಲವು ವೈರಸ್ ಗಳು ಮನುಷ್ಯರ ಮೇಲೆ ಕೂಡ ಪರಿಣಾಮ ಬೀರುವುದು.
ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು.
ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ.
ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.
ಕರುಳಿನ ಕ್ಯಾನ್ಸರ್ ತಡೆಯುವ ಶಕ್ತಿ ಈ 5 ಆಹಾರಗಳಲ್ಲಿ ಅಡಗಿದೆ
ಕೊರೊನಾ ವೈರಸ್ ಹಬ್ಬುವುದು ಹೇಗೆ?
*ಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಹಬ್ಬುವುದು.
*ಶೀನು ಮತ್ತು ಕೆಮ್ಮಿನ ಗಾಳಿಯಿಂದ.
*ತುಂಬಾ ಹತ್ತಿರ ದೈಹಿಕ ಸಂಪರ್ಕದಿಂದ. ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಘವ
*ವೈರಸ್ ಇರುವ ವಸ್ತುವನ್ನು ಮುಟ್ಟುವುದು, ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದರೆ.
*ಅಪರೂಪದಲ್ಲಿ ಮಲದ ಮೂಲಕ
ಕೊರೊನಾ ವೈರಸ್ ಸೋಂಕಿನಿಂದ ಆಗುವ ಅಪಾಯಗಳು?
ಯಾರಿಗೂ ಕೊರೊನಾ ವೈರಸ್ ಬರಬಹುದು. ಆದರೆ ಸಣ್ಣ ಮಕ್ಕಳಿಗೆ ಇದು ಬೇಗನೆ ಹರಡುವುದು. ಅಮೆರಿಕಾದಲ್ಲಿ ಇದು ಚಳಿಗಾಲದಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ.
ಕೊರೊನಾ ವೈರಸ್ ನ ಕೆಲವು ಲಕ್ಷಣಗಳು ಯಾವುದು?
ಕೊರೊನಾ ವೈರಸ್ ಯಾವ ರೀತಿಯದ್ದು ಮತ್ತು ಸೋಂಕು ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇದರ ಲಕ್ಷಣವು ಅವಲಂಬಿಸಿದೆ. ಶೀತದಂತಹ ಶ್ವಾಸಕೋಶದ ಮೇಲ್ಬಾಗದ ಸೋಂಕಿಗೆ ಒಳಗಾಗಿದ್ದರೆ ಆಗ ನಿಮ್ಮಲ್ಲಿ ಈ ರೀತಿಯ ಕೆಲವು ಲಕ್ಷಣಗಳೂ ಕಾಣಿಸಿಕೊಳ್ಳುವುದು.
*ಮೂಗು ಸೋರುವುದು
*ತಲೆನೋವು
*ಕೆಮ್ಮು
*ಗಂಟು ನೋವು
*ಜ್ವರ
*ಸಂಪೂರ್ಣವಾಗಿ ಅನಾರೋಗ್ಯ
ಕೆಮ್ಮಿಗೆ ತ್ವರಿತ ಪರಿಹಾರ ನೀಡುವ ಪವರ್‌ಫುಲ್ ಮನೆಮದ್ದುಗಳು
ಈ ರೋಗದ ವೈರಸ್‌ಗಳು ತುಂಬಾನೇ ಡೇಂಜರಸ್