essay about mother in kannada
Answers
Answer:
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ ಕೆಟ್ಟ ತಾಯಿ ಇರಲೂ ಸಾಧ್ಯವಿಲ್ಲ ಎಂಬುದಾಗಿ ಶಾಸ್ತ್ರಜ್ಞರು ಹೇಳುತ್ತಾರೆ. ಅದುವೇ ತಾಯಿಯ ಶ್ರೇಷ್ಠತೆ. ತನ್ನ ಕನಸುಗಳನ್ನು ಮರೆತು ಸುಖವನ್ನು ತ್ಯಾಗ ಮಾಡಿ ಆಕೆ ಮಕ್ಕಳ ಸಂತೋಷವನ್ನೇ ತನ್ನದಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ಅಮ್ಮಂದಿರ ದಿನದ ವಿಶೇಷವಾಗಿ ಇಂದಿನ ನಮ್ಮ ಲೇಖನದಲ್ಲಿ ಅಮ್ಮನನ್ನು ಹೊಗಳುವ ಅಸದಳ ವ್ಯಾಖ್ಯೆಗಳನ್ನು ನಾವು ನೀಡುತ್ತಿದ್ದು ಇದನ್ನು ನೀವೂ ಕಂಡುಕೊಳ್ಳಿ. ಇದು ಪ್ರಖ್ಯಾತ ಪಂಡಿತರು ಹೇಳಿರುವ ಮಾತಾಗಿದ್ದು ಅಮ್ಮ ಎಷ್ಟು ಮಹತ್ವದವರು ಎಂಬುದನ್ನು ತಿಳಿದುಕೊಳ್ಳೋಣ.
1."ನಾನು ಹಿಂದೆಂದೂ ನೋಡಿರುವುದಕ್ಕಿಂತಲೂ ನಮ್ಮಮ್ಮ ಹೆಚ್ಚು ಸುಂದರಿ. ನಾನು ಆಕೆಯಿಂದ ದೈಹಿಕ ಶಿಕ್ಷಣ, ನೀತಿಪಾಠವನ್ನು ಕಲಿತುಕೊಂಡಿದ್ದೇನೆ" - ಜಾರ್ಜ್ ವಾಶಿಂಗ್ಟನ್
2. ತಾಯಿ ತನ್ನ ಮಕ್ಕಳ ಕೈಯನ್ನು ಸ್ವಲ್ಪ ಸಮಯ ಮಾತ್ರ ಹಿಡಿದುಕೊಳ್ಳುತ್ತಾಳೆ ಆದರೆ ಅವರ ಹೃದಯವನ್ನು ಸದಾಕಾಲ ಹಿಡಿದುಕೊಂಡಿರುತ್ತಾಳೆ. ಮಕ್ಕಳ ಯೋಗಕ್ಷೇಮವನ್ನೇ ಆಕೆ ಸದಾ ಕಾಲ ಬಯಸುತ್ತಾಳೆ - ಅಜ್ಞಾತ ಮೂಲ
3. ನನ್ನ ಅಮ್ಮನ ಪ್ರಾರ್ಥನೆಗಳನ್ನು ನಾನು ನೆನೆಪಿಸಿಕೊಳ್ಳುತ್ತೇನೆ ಮತ್ತು ಅದು ಸದಾಕಾಲವೂ ನನ್ನನ್ನು ಹಿಂಬಾಲಿಸುತ್ತದೆ. ನನ್ನ ಜೀವನದಲ್ಲಿ ಆ ಪ್ರಾರ್ಥನೆಗಳೇ ಬೆಂಗಾವಲು - ಅಬ್ರಹಾಂ ಲಿಂಕನ್. ಪ್ರೀತಿಯ ಅಮ್ಮನಿಗಾಗಿ ಆರೋಗ್ಯ ಕಾಳಜಿ
4. ನಿಮ್ಮಲ್ಲಿ ಹೇಳಲೂ ಸಾಧ್ಯವಾಗದ ಸಂಪತ್ತು ಇರಬಹುದು
ಮಣಗಟ್ಟಲೆ ಚಿನ್ನ ಮತ್ತು ಆಭರಣಗಳು ಇದ್ದಿರಬಹುದು
ನಾನು ನಿಮಗಿಂತಲೂ ಶ್ರೀಮಂತ
ನನ್ನ ಬಳಿ ತಾಯಿ ಇದ್ದಾರೆ - ಸ್ಟಿಕ್‌ಲ್ಯಾಂಡ್ ಗಿಲಿನ್
5. ನನ್ನ ತಾಯಿ ಶ್ರಮ ಜೀವಿ. ತನ್ನ ತಲೆಯನ್ನು ಕೆಳಗೆ ಹಾಕಿ ಆಕೆ ಕೆಲಸವನ್ನು ಪೂರೈಸುತ್ತಾಳೆ. ಮತ್ತು ಸಂತಸಕ್ಕಾಗಿ ಆಕೆ ತನ್ನದೇ ವಿಧಾನವನ್ನು ಕಂಡುಕೊಳ್ಳುತ್ತಾಳೆ. ಆಕೆ ಯಾವಾಗಲೂ ಹೇಳುತ್ತಾಳೆ - 'ಸಂತೋಷ ಎಂಬುದು ನಿಮ್ಮದೇ ಜವಬ್ದಾರಿಯಾಗಿದೆ' - ಜೆನ್ನಿಫರ್ ಗಾರ್ನರ್