India Languages, asked by vathsak2162, 5 months ago

Essay about my family in kannada language

Answers

Answered by Anonymous
2

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆಎಂ. ಶ್ರೀನಿವಾಸ್ ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 02.02.1951ರಲ್ಲಿ ಜನನ. ತಂದೆ ಮೆಣಸೇಗೌಡ ಹಾಗೂ ತಾಯಿ ಅರಸಮ್ಮ. ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದ ಶ್ರೀಯುತರು ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದರು. ಪ್ರಸಿದ್ಧ ವಕೀಲರಾಗಿದ್ದ ಶ್ರೀಯುತ ಹನುಮೇಗೌಡರ ಬಳಿಯಲ್ಲಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿಯಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ರೀಯುತರು ಜೊತೆಜೊತೆಗೆ ಸಮಾಜಿಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದರ ಫಲವಾಗಿ ಮಂಡ್ಯ ಜಿಲ್ಲಾ ರೈತಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಂದಿನ ಕಾಲದಲ್ಲಿ ಪ್ರಬಲವಾಗಿದ್ದ ರೈತಚಳುವಳಿಯ ಸಕ್ರಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ಈ ರೈತ ಚಳುವಳಿಯಿಂದ ರೈತಾಪಿ ವರ್ಗದ ಕಷ್ಟನಿಷ್ಠುರಗಳು ಅರಿವಾದವು. ಜೊತೆಗೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅನೇಕ ನಾಯಕರ, ಕಾರ್ಯಕರ್ತರ ಸಂಪರ್ಕ ಒದಗಿಬಂತು. ಓದುತ್ತಿದ್ದಾಗಲೇ ಅಂದಿನ ಮಹಾನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ರಚನಾತ್ಮಕ ಚಟುವಟಿಕೆಗಳಿಂದ ಪ್ರಭಾವಿತರಾಗಿದ್ದ ಶ್ರೀಯುತರು ಮುಂದೆ ಶಂಕರಗೌಡರಂತೆ ಜನಮುಖಿ ಕೆಲಸಗಳನ್ನು ಮಾಡಬೇಕೆಂಬ ಆದರ್ಶವನ್ನಿಟ್ಟು ಮುನ್ನಡೆದರು. ಸಕ್ರಿಯ ರಾಜಕಾರಣವನ್ನು ಕುರಿತು ಯೋಚಿಸುತ್ತಿರುವಾಗಲೇ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯುತ್ತದೆ. ಆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗುತ್ತಾರೆ. ಅಲ್ಲಿಂದ ಮುಂದೆ ಆರು ಸಲ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡು ಆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಒಕ್ಕಲಿಗರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿನ ಅವರ ಸೇವೆಯನ್ನು ಇಂದಿಗೂ ಅಲ್ಲಿಯ ಉದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ. ತನ್ನ ಜಿಲ್ಲೆಯ ಹಲವಾರು ಮಂದಿ ಯುವಕರಿಗೆ ಆ ಸಂಸ್ಥೆಯಲ್ಲಿ ಕೆಲಸ ಕೊಡಿಸಿ ಜೀವನ ನಿರ್ವಹಣೆಗೆ ಅವಕಾಶಮಾಡಿಕೊಡುತ್ತಾರೆ.

Similar questions