essay about tiger in kannada
Answers
Answer:
hope this will be helpful.
please mark me as the brainliest.
Explanation:
ಹುಲಿ ( ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.
ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು
ಕೆಲವು ವೈಶಿಷ್ಟ್ಯಗಳು ಸಂಪಾದಿ
ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಜೀವಿಸುವ ಹುಲಿಗಳು ಸೈಬೀರಿಯಾದ ಟೈಗಾ ಕಾಡುಗಳಲ್ಲಿ, ತೆರೆದ ಹುಲ್ಲುಗಾವಲುಗಳಲ್ಲಿ ಮತ್ತು ಉಷ್ಣವಲಯದ ಕಾಡುಗಳಲ್ಲಿ ನೆಲೆಸಿವೆ. ಹುಲಿಗಳು ತಮ್ಮ ತಮ್ಮ ಭೂಮಿತಿಯೊಳಗೆಯೇ ಜೀವಿಸುವ ಪ್ರಾಣಿ ಗಳು. ಸಾಮಾನ್ಯವಾಗಿ ಅವು ಒಂಟಿಜೀವಿ ಸಹ. ತನ್ನ ಪರಿಸರದಲ್ಲಿ ಲಭ್ಯವಿರುವ ಆಹಾರದ ಪ್ರಾಣಿಗಳ ಸಂಖ್ಯೆಗನುಗುಣವಾಗಿ ಪ್ರತಿ ಹುಲಿಯು ತನ್ನ ಸರಹದ್ದನ್ನು ಗುರುತಿಸಿಟ್ಟುಕೊಳ್ಳುತ್ತದೆ.
ವಿಶಾಲ ಪ್ರದೇಶದ ಮೇಲೆ ಒಡೆತನ ಸಾಧಿಸಬಯಸುವ ಮತ್ತು ಕೆಲ ಪ್ರದೇಶಗಳಲ್ಲಿ ಅಲ್ಪ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಹುಲಿಗಳು ಬಹಳಷ್ಟು ಬಾರಿ ಮಾನವನೊಡನೆ ಸಂಘರ್ಷಕ್ಕಿಳಿಯುತ್ತವೆ. ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ. ನೆಲೆಗಳ ನಾಶ ಮತ್ತು ಬೇಟೆಯಾಡುವಿಕೆಗಳು ಹುಲಿಗೆ ದೊಡ್ಡ ಕುತ್ತಾಗಿವೆ.
ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ.ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯು ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.
ವ್ಯಾಪ್ತಿ ಸಂಪಾದಿ
ಐತಿಹಾಸಿಕ ಕಾಲದಲ್ಲಿ ಹುಲಿಗಳು ಕಾಕಸಸ್ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಸೈಬೀರಿಯಾ ಮತ್ತು ಇಂಡೋನೇಷ್ಯಾ ವರೆಗೆ ಏಷ್ಯಾದ ಎಲ್ಲಾ ಭಾಗಗಳಲ್ಲಿ ಜೀವಿಸಿದ್ದವು. ೧೯ನೆಯ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷ್ಯಾದಿಂದ ಸಂಪೂರ್ಣವಾಗಿ ಕಣ್ಮರೆಯಾದವು. ಅಲ್ಲದೆ ಖಂಡವ್ಯಾಪ್ತಿಯನ್ನು ಹೊಂದಿದ್ದ ಹುಲಿಗಳ ನೆಲೆಗಳು ಬಹುವಾಗಿ ಕುಗ್ಗಿ ಇಂದು ಹುಲಿಗಳು ಕೆಲ ಪ್ರದೇಶಗಳಿಗ ಮಾತ್ರ ಸೀಮಿತವಾಗಿವೆ.
ಇಂದು ಸೈಬೀರಿಯಾದ ಆಮೂರ್ ನದಿಯ ದಕ್ಷಿಣಭಾಗದಿಂದ ಹುಲಿಗಳ ನೆಲೆ ಆರಂಭ. ದ್ವೀಪಗಳ ಪೈಕಿ ಸುಮಾತ್ರಾದಲ್ಲಿ ಮಾತ್ರ ಹುಲಿಗಳು ಕಾಣುತ್ತವೆ. ೨೦ನೆಯ ಶತಮಾನದಲ್ಲಿ ಜಾವಾ ಮತ್ತು ಬಾಲಿ ದ್ವೀಪಗಳಿಂದ ಹುಲಿಗಳು ಶಾಶ್ವತವಾಗಿ ಮರೆ ಯಾದವು.
ಶಾರೀರಿಕ ಲಕ್ಷಣಗಳು ಮತ್ತು ತಳಿಗಳು ಸಂಪಾದಿ
ಹುಲಿಗಳು ತುಕ್ಕಿನ ಬಣ್ಣದ ಇಲ್ಲವೆ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಮುಖದ ಪರಿಧಿಯಲ್ಲಿ ಬಿಳಿ ಬಣ್ಣವನ್ನು ಪಡೆದಿರುತ್ತವೆ. ಪಟ್ಟೆಗಳ ಆಕಾರ ಹಾಗೂ ಸಾಂದ್ರತೆಯು ಜಾತಿಯಿಂದ ಜಾತಿಗೆ ಬದಲಾಗುತ್ತವೆ. ಹೆಚ್ಚಿನ ಹುಲಿಗಳು ನೂರಕ್ಕೂ ಹೆಚ್ಚು ಪಟ್ಟೆಗಳನ್ನು ಹೊಂದಿರುತ್ತವೆ. ಪಟ್ಟೆಗಳ ವಿನ್ಯಾಸವು ಪ್ರತಿ ಹುಲಿಗೂ ಬದಲಾಗುತ್ತದೆ. ಬೇಟೆಗಾಗಿ ಹೊಂಚು ಹಾಕುತ್ತಿರುವಾಗ ಹುಲಿಯು ಸುತ್ತಲಿನ ಪರಿಸರದೊಂದಿಗೆ ಸೇರಿಹೋಗಲು ಈ ಪಟ್ಟೆಗಳು ಅನುವಾಗುವುವೆಂದು ನಂಬಲಾಗಿದೆ.
ಬೆಕ್ಕಿನ ಜಾತಿಯ ಇತರ ಪ್ರಾಣಿಗಳಿಗಿರುವಂತೆ ಹುಲಿಗೆ ಸಹ ಕಿವಿಯ ಹಿಂಭಾಗದಲ್ಲಿ ದೊಡ್ಡ ಬಿಳಿ ಮಚ್ಚೆಯಿರುವುದು. ಬೆಕ್ಕುಗಳಲ್ಲಿ ಹುಲಿಯ ದೇಹತೂಕ ಅತಿ ಅಧಿಕ. ಹುಲಿಯ ಭುಜಗಳು ಮತ್ತು ಕಾಲುಗಳು ಬಲವಾಗಿ ರೂಪುಗೊಂಡಿದ್ದು ಇವುಗಳ ಸಹಾಯದಿಂದ ಹುಲಿಯು ತನಗಿಂತ ದೊಡ್ಡ ಗಾತ್ರದ ಬೇಟೆಯ ಪ್ರಾಣಿಯನ್ನು ಸುಲಭವಾಗಿ ನೆಲಕ್ಕೆ ಕೆಡವಬಲ್ಲುದು.
ಜಗತ್ತಿನ ಉತ್ತರಭಾಗದಲ್ಲಿರುವ ಹುಲಿಗಳು ದಕ್ಷಿಣದಲ್ಲಿರುವುವಕ್ಕಿಂತ ಗಾತ್ರದಲ್ಲಿ ದೊಡ್ಡವು. ಹೆಣ್ಣು ಹುಲಿಯು ಗಾತ್ರದಲ್ಲಿ ಗಂಡಿಗಿಂತ ಚಿಕ್ಕದು. ಗಂಡು ಹುಲಿಗಳ ಮುಂಪಾದ ಹೆಣ್ಣಿನದಕ್ಕಿಂತ ಹೆಚ್ಚು ಅಗಲವಾಗಿರುತ್ತದೆ. ಈ ಲಕ್ಷಣದ ಸಹಾಯದಿಂದ ತಜ್ಞರು ಹೆಜ್ಜೆ ಗುರುತಿನ ಆಧಾರದ ಮೇಲೆ ಹುಲಿಯ ಲಿಂಗವನ್ನು ಗುರುತಿಸುತ್ತಾರೆ.