Essay for environmental pollution in Kannada Wikipedia
Answers
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು.[೧] ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ‍್‌ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.
ಪ್ರಾಚೀನ ಸಂಸ್ಕೃತಿ
ಖನಿಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೈನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.[೨]
ಅಧಿಕೃತ ಸ್ವೀಕೃತಿ
ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು ಅರೇಬಿಕ್ ವ್ಯೆದ್ಯಕೀಯ ಗ್ರಂಥಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ. ಅಲ್-ಕಿಂಡಿ(ಆಲ್ಕಿಂಡಸ್), ಕ್ವೆಸ್ಟಾ ಇಬ್ನ್ ಲ್ಯುಕಾ (ಕೊಸ್ತಾ ಬೆನ್ ಲುಕಾ), ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ(ರಾಝೆಸ್), ಇಬ್ನ ಅಲ್ -ಜಝ್ಝಾರ್, ಅಲ್-ತಮಿಮಿ, ಅಲ್- ಮಸಿಹಿ, ಇಬ್ನ ಸಿನ(ಅವಿಸಿನ್ನ), ಅಲಿ ಇಬ್ನ್ ರಿದ್ವಾನ್, ಇಬ್ನ ಜುಮಯ್, ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್, ಅಬ್ದ-ಎಲ್-ಲತಿಫ್, ಇಬ್ನ ಅಲ್-ಖಫ್ ಮತ್ತು ಇಬ್ನ್ ಅಲ್-ನಫೀಸ್ ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ವಾಯುಮಾಲಿನ್ಯ, ನೀರು ಮಲಿನಗೊಳ್ಳುವಿಕೆ, ಮಣ್ಣು ಮಾಲಿನ್ಯ, ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ ಪರಿಸರಕ್ಕೆ ಕುರಿತಾದಂತೆ ತಿಳಿಸುತ್ತವೆ.[೩] ಸಮುದ್ರ ಕಲ್ಲಿದ್ದಲನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿ ಇಂಗ್ಲಂಡ್‌ನ ಕಿಂಗ್ ಎಡ್ವರ್ಡ್ Iಲಂಡನ್‌ನಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.[೪][೫] ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.
ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ 1952ರ ಗ್ರೇಟ್ ಸ್ಮಾಗ್‌ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ ಥೇಮ್ಸ್ ನದಿಯಲ್ಲಿನ ’ಗ್ರೇಟ್ ಸ್ಟಿಂಕ್’ ಘಟನೆಯಿಂದಾಗಿ ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು ಕಲ್ಲಿದ್ದಲು ಮತ್ತು ಭೂಗರ್ಭದಲ್ಲಿ ದೊರೆಯುವ ಇತರ ಇಂಧನಗಳ ಬಳಕೆಯು ಹಿಂದೆಂದೂ ಕಂಡಿರದ ವಾಯುಮಾಲಿನ್ಯ ಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾ ರಾಸಾಯನಿಕಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದ ಚಿಕಾಗೊ ಮತ್ತು ಸಿನ್ಸಿನ್ನಾಟಿ ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿ ಲಾಸ್‌ಏಂಜಲೀಸ್ ಮತ್ತು ಪೆನ್‌ಸಿಲ್ವೇನಿಯಾದ ಡೊನೊರಾದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.[೬]
ಆಧುನಿಕ ಅರಿವು
ಆಧುನಿಕ ಜಾಗೃತಿಗೆ ಮೊದಲು, ಹಿಂದಿನ ಸೋವಿಯತ್‌ನ ಭಿತ್ತಿ ಚಿತ್ರ, : "ಹೊಗೆ ಕೊಳವೆಯ ಹೊಗೆಯು ಸೋವಿಯತ್ ರಷ್ಯಾದ ಉಸಿರಿದ್ದಂತೆ"
ಎರಡನೇ ವಿಶ್ವಯುದ್ಧದ ನಂತರದಲ್ಲಿ ಮಾಲಿನ್ಯವು ಹೆಚ್ಚಿನ ಚರ್ಚೆಯ ವಿಷಯವಾಯಿತು, ಅಣುಯುದ್ಧ ಹಾಗೂ ಅಣುಪರೀಕ್ಷೆಯ ನಂತರದಲ್ಲಿ ವಿಕಿರಣಗಳ ವಿಸರ್ಜನೆಯಿಂದ ಉಂಟಾದ ತೊಂದರೆಗಳಿಂದ ಅಪಾಯವು ಹೆಚ್ಚು ನಿಚ್ಚಳವಾಯ್ತು. 1952ರಲ್ಲಿ ಲಂಡನ್ ನಲ್ಲಿ ತಲೆದೋರಿದ್ದ ಗ್ರೇಟ್ ಸ್ಮಾಗ್ನಿಂದಾಗಿ ಸುಮಾರು 8000 ಜನರು ಸಾವೀಗೀಡಾದರು. ಈ ಘಟನೆಯಿಂದಾಗಿ ಪ್ರಬಲ ಆಧುನಿಕ ಪರಿಸರ ಕಾನೂನು 1956ರ ದಿ ಕ್ಲೀನ್ ಏರ್ ಆಕ್ಟ್ ಕಾರ್ಯಪ್ರವೃತ್ತವಾಯಿತು. ಕಾಂಗ್ರೆಸ್ ಜಾರಿಗೊಳಿಸಿದNoise Control Actದಿ ನೊಯ್ಸ್ ಕಂಟ್ರೋಲ್ ಆಕ್ಟ್, ದಿ ಕ್ಲೀನ್ ಏರ್ ಆಕ್ಟ್, ದಿ ಕ್ಲೀನ್ ವಾಟರ್ ಆಕ್ಟ್, ಅಂಡ್ ನ್ಯಾಶನಲ್ ಎನ್ ವೈರನ್ ಮೆಂಟಲ್ ಪಾಲಿಸಿ ಆಕ್ಟ್ಗಳಿಂದಾಗಿ ಒಕ್ಕೂಟ ರಾಜ್ಯಗಳು 1950ರ ಮಧ್ಯೆ ಹಾಗು 1970ಕ್ಕೂ ಮುಂಚೆ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸಾರ್ವತ್ರಿಕವಾಗಿ ಜಾಗೃತವಾದವು. ಈಗ ಪರಿಸರದ ಬಗ್ಗೆ ಯಾರೂ ಯೊಚಿಸುವುದಿಲ್ಲ.
ಸ್ಥಳೀಯವಾಗಿ ಉಂಟಾದ ಮಾಲಿನ್ಯದ ಕೆಟ್ಟ ಪ್ರಭಾವವು ಮಾಲಿನ್ಯದ ಕುರಿತು ಜನರಲ್ಲಿ ಅರಿವು ಹೆಚ್ಚಿಸಲು ಸಹಾಯವಾಯಿತು. 1974 ರಲ್ಲಿಪಿಸಿಬಿಯು ಹಡ್ಸ್ ನ್ ನದಿಗೆ ಸೇರಿದ್ದರ ಪರಿಣಾಮವಾಗಿ, ಈ ನದಿಯ ಮೀನಿನ ಬಳಕೆಯನ್ನು ಇಪಿಎ ನಿಷೇಧಿಸಿತು. 1947ರಲ್ಲಿ ಲವ್ ಕೆನಲ್ಗೆ ದೀರ್ಘಾವಧಿಯ ತನಕ ಡೈಆಕ್ಸೈನ್ ಮಲಿನಕಾರಕವನ್ನು ಸೇರಿಸಿದ ವಿಷಯವು 1978ರಲ್ಲಿ ದೊಡ್ಡ ರಾಷ್ಟ್ರೀಯ ಸುದ್ದಿಯಾಗಿತ್ತು ಹಾಗು ಇದು 1980ರ ದಿ ಸೂಫರ್ ಫಂಡ್ ಕಾನೂನು ರಚನೆಗೆ ಕಾರಣವಾಯಿತು. 1990ರಲ್ಲಿ ನಯ್ಡೆದ ನ್ಯಾಯಾಂಗ ತನಿಖೆಯುಕ್ರೋಮಿಯಮ್-6ಅನ್ನು ಕ್ಯಾಲಿಪೋರ್ನಿಯಾದ ಕೆಲವು ಪ್ರದೇಶಗಳಲ್ಲಿ ವಿಸರ್ಜನೆ ಮಾಡಿದ ಸಂಗತಿ ಬೆಳಕಿಗೆ ಬಂದಿತು. ಈ ಘಟನೆಗೆ ಕಾರಣರಾದವರು ಇದರಿಂದ ಬೆಳಕಿಗೆ ಬರುವಂತಾಯ್ತು. ಈಗ ನಗರ ಯೋಜನೆಗಳಲ್ಲಿ ಕೈಗಾರಿಕ ಪ್ರದೇಶಗಳಿಂದ ಉಂಟಾಗುವ ಮಾಲಿನ್ಯವನ್ನು ಪರಿಗಣಿಸಿ ಅಂತಹ ಪ್ರದೇಶಗಳನ್ನು ಕಂದು ಪ್ರದೇಶಗಳು ಎಂದು ಹೆಸರಿಸುವುದು ಸಾಮಾನ್ಯವಾಗಿದೆ. ರಾಕೇಲ್ ಕಾರ್ಸನ್ ಅವರ ಸೈಲೆಂಟ್ ಸ್ಪ್ರಿಂಗ್ ಪ್ರಕಟಣೆ ನಂತರ ಅಭಿವೃದ್ದಿ ಹೊಂದಿದ್ದ ವಿಶ್ವದಲ್ಲಿ ಡಿಡಿಟಿಯನ್ನು ನಿಷೇಧಿಸಲಾಯಿತು.
Answer:
Explanation:
ಪರಿಸರ ಮಾಲಿನ್ಯವು ಪ್ರಪಂಚದಾದ್ಯಂತ ಒಂದು ಕಳವಳಕಾರಿ ವಿಷಯವಾಗಿದೆ. ಪರಿಸರ ಮಾಲಿನ್ಯವು ಗಾಳಿ, ನೀರು ಮತ್ತು ಭೂ ಮಾಲಿನ್ಯವನ್ನು ಒಳಗೊಂಡಿದೆ. ಮಾಲಿನ್ಯವು ಮಾನವನ ಚಟುವಟಿಕೆಗಳಾದ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಉಂಟಾಗುತ್ತದೆ, ದಹನದ ಮೇಲೆ ವಿಷಕಾರಿ ಅನಿಲಗಳನ್ನು ಮರುಕಳಿಸುವ ಮೂಲಕ ಗಾಳಿಯ ಗುಣಮಟ್ಟವನ್ನು ಪರಿಣಾಮ ಬೀರುತ್ತದೆ. ಕಾರ್ಖಾನೆಯ ತ್ಯಾಜ್ಯ, ಪ್ರಾಣಿಗಳ ಸಗಣಿ ಮತ್ತು ಮನೆಯ ತ್ಯಾಜ್ಯಗಳನ್ನು ಪೋರ್ಟಬಲ್ ನೀರನ್ನು ಕಲುಷಿತಗೊಳಿಸುವ ಜಲಮೂಲಗಳಲ್ಲಿ ವಿಲೇವಾರಿ ಮಾಡುವುದು. ಕೈಗಾರಿಕೆಗಳಿಂದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಕೃಷಿ ರೂಫೇಜ್, ಮನೆಯ ತ್ಯಾಜ್ಯ ಮತ್ತು ಅರಣ್ಯನಾಶವು ಭೂಮಿಯನ್ನು ಕಲುಷಿತಗೊಳಿಸುತ್ತದೆ. ಹೀಗಾಗಿ ಪರಿಸರ ಮಾಲಿನ್ಯದಿಂದ ತಡೆಯಲು ಉಪಕ್ರಮ ತೆಗೆದುಕೊಳ್ಳಬೇಕು.