ಆನೆ essay in kannada
Answers
Answer:
ರಾಮಾಯಣ, ಮಹಾಭಾರತ ಕಾಲದಿಂದ ಹಿಡಿದು ಇಂದಿನವರೆಗೆ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಏಕೈಕ ವನ್ಯಜೀವಿಯೆಂದರೆ ಅದು ಆನೆ. ಸ್ನೇಹ ಮತ್ತು ಪರಾಕ್ರಮದ ವಿಷಯದಲ್ಲೂಇದನ್ನು ಮೀರಿಸುವ ಇನ್ನೊಂದು ಪ್ರಾಣಿಯಿಲ್ಲ ಎನ್ನಬಹುದು. ಆದರೆ ಕಾಡೊಳಗೆ ಹಾಯಾಗಿದ್ದ ಆನೆಗಳು ಈಗೀಗ ನಾಡಿಗೆ ಲಗ್ಗೆ ಇಡುವುದು ಹೆಚ್ಚುತ್ತಿದೆ. ಅರಣ್ಯ ನಾಶ, ಆಹಾರ ಕೊರತೆ ಇದಕ್ಕೆ ಕಾರಣ. ಆನೆಗಳು ಶಾಂತ ಸ್ವಭಾವದ ಪ್ರಾಣಿಗಳಾಗಿದ್ದು, ಮನುಷ್ಯರೊಂದಿಗೆ ಮುಖಾಮುಖಿಯಾಗಲು ಬಯಸುವುದಿಲ್ಲ. ಮನುಷ್ಯರ ಸುಳಿವು ಸಿಗುತ್ತಿದ್ದಂತೆ ಇದ್ದಲ್ಲೇ ಕಲ್ಲಿನಂತೆ ಸ್ತಬ್ಧವಾಗಿ ನಿಂತು, ಸದ್ದಿಲ್ಲದೇ ಹಿಂದೆ ಸರಿಯುತ್ತವೆ. ಮರಿಗಳು ಜತೆಯಲ್ಲಿದ್ದರೆ, ಅಪಾಯದ ಸುಳಿವು ಸಿಕ್ಕರೆ ಮಾತ್ರ ಆನೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ದೇಶದಲ್ಲಿವೆ 30 ಸಾವಿರ ಆನೆಗಳು: 2017ರಲ್ಲಿನಡೆದ ಏಳನೇ ಆನೆ ಗಣತಿ ಪ್ರಕಾರ ದೇಶದಲ್ಲಿಒಟ್ಟು 27,312 ಆನೆಗಳಿವೆ. ಅವುಗಳ ಪೈಕಿ ದಕ್ಷಿಣ ಭಾರತದಲ್ಲಿ11,960 ಆನೆಗಳಿದ್ದರೆ, ಈಶಾನ್ಯ ಭಾರತದಲ್ಲಿ10,139, ಮಧ್ಯ ಪೂರ್ವ ಭಾಗದಲ್ಲಿ3,128 ಮತ್ತು ಉತ್ತರ ಭಾಗದಲ್ಲಿ2,085 ಆನೆಗಳಿವೆ. ಮಂಗಳವಾರವಷ್ಟೇ ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿರುವ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ದೇಶದಲ್ಲಿಅಂದಾಜು 30,000 ಆನೆಗಳಿವೆ ಎಂದಿದ್ದಾರೆ. ದೇಶದಲ್ಲಿಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಆನೆಗಳಿವೆ. 6,049 ಆನೆಗಳು ಕರ್ನಾಟಕದಲ್ಲಿದ್ದರೆ, ಅಸ್ಸಾಂನಲ್ಲಿ 5,719, ಕೇರಳದಲ್ಲಿ 3,504 ಆನೆಗಳಿವೆ. ಆಫ್ರಿಕಾ ಖಂಡದಲ್ಲಿ4.70 ಲಕ್ಷ ಹಾಗೂ ಏಷ್ಯಾದಲ್ಲಿ50 ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ.
ವಿಶ್ವದಲ್ಲಿ ಏಷ್ಯನ್ ಹಾಗೂ ಆಫ್ರಿಕನ್ ಆನೆಗಳು ಎಂಬ 2 ವರ್ಗಗಳಿವೆ. ಭಾರತದಲ್ಲಿರುವ ಏಷ್ಯನ್ ಆನೆಗಳು ಆಫ್ರಿಕನ್ ಆನೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಇವುಗಳ ತಲೆಭಾಗದಲ್ಲಿಯೇ ಅತ್ಯಂತ ಹೆಚ್ಚಿನ ಶಕ್ತಿ ಹೊಂದಿದ್ದು, ಬೆನ್ನಿನ ಭಾಗ ಉಬ್ಬಿದಂತೆ ಅಥವಾ ಒಂದೇ ಸಮನಾಗಿ ಇರುತ್ತದೆ. 6.6 ಅಡಿಯಿಂದ 11.5 ಅಡಿಯಷ್ಟು ಎತ್ತರ ಬೆಳೆಯುತ್ತವೆ. ಆನೆ, ಕನಿಷ್ಠ 2 ಸಾವಿರದಿಂದ ಗರಿಷ್ಠ 5 ಸಾವಿರ ಕೆಜಿ ತೂಕ ಇರುತ್ತದೆ. ಇಂದಿನ ಜಿಪಿಎಸ್ ವ್ಯವಸ್ಥೆಗಿಂತ ಆನೆಗಳಲ್ಲಿನ ಮ್ಯಾಪಿಂಗ್ ವ್ಯವಸ್ಥೆ ಹೆಚ್ಚು ನಿಖರವಾಗಿದೆ. ಎಲ್ಲಿಗೆ ಹೋಗಬೇಕು. ಎಲ್ಲಿಗೆ ಹೋಗಬಾರದು . ಈ ಮಾರ್ಗ ಎಲ್ಲಿಗೆ ಸೇರುತ್ತದೆ ಎಂಬ ಬಗ್ಗೆ ಭೂಮಿಯೊಳಗಿನ ಜಲಮೂಲ ಹರಿಯುವ ದಿಕ್ಕಿನ ಆಧಾರದ ಮೇಲೆಯೇ ನಿರ್ಣಯಿಸುವಷ್ಟು ಚುರುಕುಮತಿಗಳು ಈ ಆನೆಗಳು. ಶರೀರದಲ್ಲಿರುವ ಸಂವೇದಕಗಳ ಮೂಲಕ ಆನೆಗಳು ಪರಸ್ಪರ ಸಂಭಾಷಣೆ ನಡೆಸಬಲ್ಲವು.