India Languages, asked by jcxj, 12 days ago

ಸಮೂಹ ಮಾಧ್ಯಮಗಳು essay in kannada at least more than 150 words in kannada

answers which are inappropriate leads to suspension of brainly account​

Answers

Answered by Anonymous
17

Answer:

ಸಮೂಹ ಮಾಧ್ಯಮ’ ಎನ್ನುವುದೊಂದು ಅಪಾಯಕಾರಿ ಎನ್ನುವಷ್ಟು ಸರಳವಾಗಿ ಕಾಣುವ ಪದವಾದರೂ ಅದರ ಪರಿಧಿಯೊಳಗೆ ಅನೇಕಾನೇಕ ಭಿನ್ನ ಅಭಿಪ್ರಾಯ, ಭಿನ್ನ ಸಾಂಸ್ಕೃತಿಕ ಹಿನ್ನೆಲೆ, ಭಿನ್ನ ದೃಷ್ಟಿಕೋನ ಮತ್ತು ರಾಜಕೀಯ ನಿಲುವುಗಳಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇರುತ್ತವೆ. ಸಮೂಹ ಮಾಧ್ಯಮ ಎಂಬುದರೊಳಗೆ ಮಾಹಿತಿಯನ್ನು ನೀಡಬಲ್ಲ ಎಲ್ಲ ರೀತಿಯ ಪ್ರಾಕಾರಗಳು ಇವೆ. ಜನ ನೋಡುವಂತೆ ರಸ್ತೆಯ ಬದಿಯಲ್ಲಿ ತಗುಲಿ ಹಾಕಿದ ಯಾರದೋ ಮನೆಯ ಗೃಹಪ್ರವೇಶದ ಕೈಬರಹದ ಸಣ್ಣ ಬೋರ್ಡ್‌ನಿಂದ ಹಿಡಿದು, ಕಾಡಿನ ನಡುವೆ ಡ್ರಮ್ಮುಗಳ ಮೂಲಕವೇ ಸುದ್ದಿ ಹರಡುತ್ತಿದ್ದ ಜನಗಳವರೆಗೆ, ಅಂತಾರಾಷ್ಟ್ರೀಯ ಸುದ್ದಿಜಾಲ ಹೊಂದಿರುವ ಅಂತರ್ಜಾಲ, ದೂರದರ್ಶನ, ಪತ್ರಿಕೆಗಳವರೆಗೆ ಎಲ್ಲವೂ ಈ ಪ್ರಾಕಾರದಲ್ಲಿ ಸೇರುತ್ತವೆ. ಆದರೆ ಒಂದು ಪ್ರಾಕಾರವನ್ನು ‘ಸಮೂಹ ಮಾಧ್ಯಮ’ ಎಂದು ಗುರುತಿಸುವುದಕ್ಕೆ ಇಷ್ಟೇ ಸಂಖ್ಯೆಯ ಜನ ಅದನ್ನು ಗಮನಿಸಬೇಕು ಎಂದೇನೂ ಇಲ್ಲ. ಒಬ್ಬ ವ್ಯಕ್ತಿಯು ಸರ್ಕಲ್ಲಿನಲ್ಲಿ ನಿಂತು ತಾನು ಮಾರುತ್ತಿರುವ ಸರಕನ್ನು ವಿವರಿಸುತ್ತಾ ಇದ್ದು, ಆ ಕೂಗನ್ನು ಸುತ್ತ ಇದ್ದ ಸಾವಿರಾರು ಜನ ಕೇಳಿಸಿಕೊಳ್ಳದೆ ನಡೆಯುತ್ತಾ ಇದ್ದರೂ ಆ ವ್ಯಕ್ತಿಯ ಕೂಗನ್ನು ಸಮೂಹ ಮಾಧ್ಯಮದ ಪ್ರಾಕಾರಗಳ ಒಳಗೆ ಸೇರಿಸಬೇಕಾಗುತ್ತದೆ. ನಾವು ಕೊಳ್ಳಲಾಗದ ಭಾರೀ ಕಾರಿನ ಜಾಹೀರಾತಿಂದ ಹಿಡಿದು ವಿಶ್ವಸಂಸ್ಥೆಯ ಹೊಸ ನೀತಿಯವರೆಗೆ ಎಲ್ಲವೂ ಈ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ’ಮಾಧ್ಯಮ’ ಎಂಬುದರ ವ್ಯಾಪ್ತಿ ದೊಡ್ಡದು. ಇಂತಹುದರ ಬಗ್ಗೆ ಮಾತಿಗೆ ನಿಂತಾಗ ಅದಷ್ಟೂ ವಿವರವನ್ನು ಒಂದೆಡೆ ಹೇಳುವುದು ಸುಲಭ ಸಾಧ್ಯವಲ್ಲ. ಹಾಗಾಗಿ “ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಬೃಹತ್ ಬಂಡವಾಳದಾರರು ಹಣ ಹೂಡಿರುವ, ಬೃಹತ್ ಪ್ರಕಾಶನ ಸಂಸ್ಥೆಗಳ ತಯಾರಿಕೆಗಳನ್ನು ಮಾತ್ರ” ಎಂದು ಗುರುತಿಸಿಕೊಂಡು ಈ ಲೇಖನದಲ್ಲಿ ಸಮೂಹ ಮಾಧ್ಯಮಗಳು ಮತ್ತು ಸಮಾಜ ಎಂಬ ವಿಷಯದ ಬಗ್ಗೆ ಕೆಲವು ಮಾತುಗಳನ್ನು ಆಡುತ್ತೇನೆ. (ಈ ಮಾತಾಡುವಾಗ ಅನೇಕ ಸಣ್ಣ ಪತ್ರಿಕೆಗಳು ಮತ್ತು ಸಣ್ಣದು ಎಂದು ಕರೆಸಿಕೊಳ್ಳುತ್ತಲೇ ದೊಡ್ಡ ಕೆಲಸ ಮಾಡುತ್ತಿರುವ ಕೆಲವು ವಿವರಗಳನ್ನು ಸಹ ನೀಡುತ್ತೇನೆ. ಇಷ್ಟಾದರೂ ಇದು ಪೂರ್ಣ ಪ್ರಮಾಣದ ಸಮೂಹ ಮಾಧ್ಯಮಗಳ ವಿಶ್ಲೇಷಣೆ ಅಲ್ಲ ಎಂಬುದು ತಮಗೆ ತಿಳಿದಿರಲಿ.) ಮಾಧ್ಯಮದ ಬಗ್ಗೆ ಮಾತಾಡುವಾಗ ಮತ್ತೊಂದು ಗೊಂದಲ ಹುಟ್ಟಿಸುವ ಪದ ‘ಸುದ್ದಿ ಮಾಧ್ಯಮ’. ಇದರಡಿಯಲ್ಲಿ ಸುದ್ದಿ ನೀಡುವ ಎಲ್ಲಾ ಮಾಧ್ಯಮಗಳೂ ಬರುತ್ತವೆ. ಇದನ್ನು news media ಅನ್ನುವ ಹಾಗೆಯೇ press ಎಂತಲೂ ಕರೆಯುತ್ತಾರೆ.

ಮಾಧ್ಯಮದ ಪರಿಣಾಮ:

ಈಚೆಗಿನ ಮಾಧ್ಯಮದ ಪರಿಣಾಮವೊಂದನ್ನು ಸಿಎನ್‌ಎನ್ ಪರಿಣಾಮ ಎಂದು ಗುರುತಿಸುತ್ತಾರೆ. ಅಮೇರಿಕಾದ ಅತ್ಯಂತ ಪ್ರಭಾವಶಾಲಿ ದೂರದರ್ಶನ ವಾಹಿನಿಯಾದ ಸಿಎನ್‌ಎನ್ ಎಂಬ ವಾಹಿನಿಯಲ್ಲಿ ಪ್ರಸಾರವಾಗುವ ವಿವರಗಳನ್ನು ಅತ್ಯಂತ ‘ಜಾಗರೂಕತೆ’ಯಿಂದ ಜೋಡಿಸಲಾಗುತ್ತದೆ. ಅಂತಹ ಸುದ್ದಿಯೊಂದರ ಪ್ರಭಾವ ಸಾರ್ವಜನಿಕರ ಮೇಲೆ ಆಗುವುದಕ್ಕಿಂತ ಹೆಚ್ಚಾಗಿ ಸರ್ಕಾರದ ಮೇಲೆ ಆಗುತ್ತದೆ. ಇದರಿಂದಾಗಿ ಸರ್ಕಾರ ಸಿದ್ಧಪಡಿಸುವ ಅನೇಕ ಹೊಸ ಮಸೂದೆಗಳು ಬದಲಾಗಿರುವುದುಂಟು. ಸಿಎನ್‌ಎನ್ ತರಹದ ವಾಹಿನಿಗಳಲ್ಲಿ ಸೋಮಾಲಿಯದ ಕಡು ಬಡತನ ಕುರಿತ ಚಿತ್ರಗಳು ಪ್ರಸಾರವಾದಾಗ ಆ ದೇಶವೇ ಎದ್ದು ಸರ್ಕಾರ ಇದರಲ್ಲಿ ಭಾಗವಹಿಸಬೇಕು ಎಂದಿತ್ತು. ಅದರಿಂದಾಗಿ ಅಮೇರಿಕಾದ ಅನೇಕರು ಸೋಮಾಲಿಯಾದ ಜನರಿಗೆ ಸಹಾಯ ಮಾಡಲು ಹೊರಟರು. ಆನಂತರ ಸೋಮಾಲಿಯಾದಲ್ಲಿ ಏನಾಯಿತು ಎಂಬುದು ಇತಿಹಾಸ. ಅದೇ ರೀತಿಯಾಗಿ ವಿಯೆಟ್ನಾಮ್ ಯುದ್ಧ ತಪ್ಪು ಎಂಬ ಮಾಹಿತಿಯನ್ನು ಸಿಎನ್‌ಎನ್ ನೀಡಲಾರಂಭಿಸಿದಾಗ ಅಮೇರಿಕನ್ನರೆಲ್ಲರೂ ಒಟ್ಟಾಗಿ ಸರ್ಕಾರ ತನ್ನ ಸೇನೆಯನ್ನು ವಿಯೆಟ್ನಾಮಿನಿಂದ ಹಿಂದೆ ಬರುವಂತೆ ಮಾಡಿತ್ತು. ಅದೇ ವಾಹಿನಿಯೂ ೯/೧೧ ದುರಂತದ ನಂತರ ಬಿತ್ತರಿಸಿದ ಸುದ್ದಿಗಳ ಸಹಾಯ ಪಡೆದು ಅಮೇರಿಕಾದ ಬುಷ್ ಸರ್ಕಾರ ಆಫ್‌ಘಾನಿಸ್ಥಾನದ ಮೇಲೆ ಮುಗಿಬಿದ್ದದ್ದು ಸಹ ಈಗ ಇತಿಹಾಸ.

ಇದನ್ನು ನಾವು ನಮ್ಮ ದೇಶದಲ್ಲಿಯೂ ಕಳೆದ ಹತ್ತು – ಹದಿನೈದು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇವೆ. ಭಾರತದ ಮಟ್ಟಿಗೆ ‘ಟೈಂಸ್ ನವ್’, ‘ಎನ್‌ಡಿಟಿವಿ’, ಕನ್ನಡದ ಟಿವಿ೯, ಉದಯ ನ್ಯೂಸ್, ಸುವರ್ಣ ನ್ಯೂಸ್‌ನಂತಹ ಸುದ್ದಿ ಸಂಸ್ಥೆಗಳು ಬಹುಮಟ್ಟಿಗೆ ಅಮೇರಿಕಾದಲ್ಲಿ ಸಿಎನ್‌ಎನ್ ಮಾಡುತ್ತಿರುವ ಕೆಲಸವನ್ನೇ ಮಾಡುತ್ತಿವೆ. ಈ ವಾಹಿನಿಗಳಲ್ಲಿ ಬರುವ ಮಾತುಗಳನ್ನೇ ವೇದ ವಾಕ್ಯ ಎಂದುಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಿಂದ ಹಿಡಿದು, ಈಚೆಗಿನ ಮಹಿಳಾ ಮಸೂದೆಗೆ ಗೆಲುವು ದೊರಕುವುದಕ್ಕೂ ಈ ವಾಹಿನಿಗಳು ಕಾರಣವಾಗಿರುವುದನ್ನು ನಾವು ನೋಡುತ್ತಾ ಇದ್ದೇವೆ.

Answered by kunalrgowda246
5

ಪತ್ರಿಕೆಯಲ್ಲಿ ಸುದ್ದಿಯನ್ನು ಅಕ್ಷರಗಳ ಮೂಲಕ ಓದುತ್ತೇವೆ. ಟಿ.ವಿ.ವಾಹಿನಿಗಳಲ್ಲಿ ದೃಶ್ಯಗಳ ಮೂಲಕ ನೋಡುತ್ತೇವೆ.ಆದರೆ ಅಂತರಜಾಲದಲ್ಲಿ ದೃಶ್ಯ ಮತ್ತು ಶ್ರವ್ಯ ಎರಡನ್ನೂ ಪಡೆಯಬಹುದು.ಶಬ್ದವನ್ನು ಸೇರಿಸಬಹುದು,ದೃಶ್ಯಗಳನ್ನು ಹಾಕಬಹುದು. ರೇಡಿಯೋ, ಟಿ.ವಿ, ಸಿನಿಮಾ ಈ ಮೂರು ಮಾದ್ಯಮಗಳ ತ್ರಿವೇಣಿ ಸಂಗಮ ಈ ಅಂತರಜಾಲ. ಸಂವಹನ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾದವು.ಅಂತರಜಾಲ ಪತ್ರಿಕೋದ್ಯಮ ಭಾರತಕ್ಕೆ ಕಾಲಿಟ್ಟಿದ್ದು 2000 ನೇ ಎಸವಿಯಲ್ಲಿ. ಈಗಾಗಲೇ ಎಂಟು ವರ್ಷಗಳನ್ನು ಪೂರೈಸಿದ ಅಂತರಜಾಲ ಪತ್ರಿಕೋದ್ಯಮ ಹಲವಾರು ಏಳುಬೀಳುಗಳನ್ನು ಕಂಡಿದೆ. ಈಗ ಕ್ರಮೇಣವಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.

Similar questions