World Languages, asked by abhaygowda23, 6 months ago

essay in Kannada on clock
TELL ME FAST .
I WILL PUT AS BRAINLIEST.

Answers

Answered by msangita354
0

Answer:

essay ಸ್ಮಾರ್ಟ್‌ಫೋನ್‌ ಯುಗದಲ್ಲಿ ಗಡಿಯಾರ ಮನೆಯಿಂದ ಬಹುತೇಕ ಕಣ್ಮರೆಯಾಗಿದೆ ಎಂದೇ ನಂಬಲಾಗಿದೆ. ಆದರೆ ಹೊಸ ಟ್ರೆಂಡ್‌ ಪ್ರಕಾರ ಈಗ ಹಳೆಯ ಗೋಡೆ ಗಡಿಯಾರಗಳು ಮತ್ತೆ ಕೊಠಡಿಯ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಜನಪ್ರಿಯವಾಗುತ್ತಿವೆ.



ಒಂದು ಕಾಲದಲ್ಲಿ ಮನೆಯಲ್ಲಿ ಗಡಿಯಾರ ಇರಲೇಬೇಕಾದ ಅವಶ್ಯಕ ವಸ್ತುವಾಗಿತ್ತು. ಈಗ ಹಳೆಯ ಕಾಲದ ಗೋಡೆ ಗಡಿಯಾರಗಳಿಗೆ ಬೇಡಿಕೆ ಬಂದಿದೆ. ಇವು ಕೊಠಡಿಯ ಅಂದವನ್ನು ಹೆಚ್ಚಿಸಲು ನೆರವಾಗುತ್ತಿವೆ. ಹೀಗಾಗಿ ಇಂತಹ ದೊಡ್ಡ ಗೋಡೆ ಗಡಿಯಾರಗಳನ್ನು ಮನೆಯಲ್ಲಿಡುವ ಟ್ರೆಂಡ್‌ ಜನಪ್ರಿಯವಾಗುತ್ತಿದೆ.

ಹಳೆಯ ನೆನಪು: 1800 ದಶಕದಲ್ಲಿ ದೊಡ್ಡ ದೊಡ್ಡ ಗೋಡೆ ಗಡಿಯಾರಗಳು ಜನಪ್ರಿಯವಾಗಿದ್ದವು. ಕಂಚು, ಸ್ಟೀಲ್‌ನಿಂದ ಕಂಗೊಳಿಸುತ್ತಿದ್ದ ಇಂತಹ ಗಡಿಯಾರಗಳು ಮನೆಯ ಅವಿಭಾಜ್ಯ ಅಂಗವಾಗಿದ್ದವು. ಆದರೆ ವರ್ಷಗಲು ಉರುಳಿದಂತೆ ಡಿಜಿಟಲ್‌ ಗಡಿಯಾರಗಳು ಈ ಜಾಗವನ್ನು ಆಕ್ರಮಿಸಿದವು. ಆದರೆ ಈಗ ಮತ್ತೆ ಮನೆಗೆ ವಿಂಟೇಜ್‌ ಲುಕ್‌ ನೀಡಲು ಜನರು ಮುಂದಾಗುತ್ತಿದ್ದಾರೆ. ಹೀಗಾಗಿ ಆಧುನಿಕವಾದರೂ ಸಾಂಪ್ರದಾಯಿಕವಾಗಿ ಕಾಣುವ ಇಂತಹ ಗಡಿಯಾರಗಳಿಗೆ ಬೇಡಿಕೆ ಹೆಚ್ಚಿದೆ.

ರೋಮನ್‌ ನಂಬರ್‌ಗಳು ಮತ್ತು ಪೆಂಡೂಲಂ ಹೊಂದಿರುವ ಇಂತಹ ಗಡಿಯಾರಗಳು ಕೇವಲ ಟೈಂಪೀಸ್‌ಗಳಲ್ಲ ಎಂದು ಡಿಸೈನರ್‌ ಲಿಪಿಕಾ ಹೇಳುತ್ತಾರೆ.

ಇದು ಕೇವಲ ಗಂಟೆಯನ್ನು ಮಾತ್ರ ತೋರಿಸುವುದಕ್ಕಿರುವುದಲ್ಲ. ಜತಗೆ ತುಂಬಾ ಕಲಾತ್ಮಕವಾದ ಕಲಾಕೃತಿಯಾಗಿ ಇಡೀ ಕೊಠಡಿಗೆ ಹೊಸ ಲುಕ್‌ ನೀಡಲು ನೆರವಾಗುತ್ತದೆ. ಒಂದಿಷ್ಟು ಜಾಗವನ್ನು ಹೊಂದಾಣಿಕೆ ಮಾಡಿಕೊಂಡರೆ ಇಂತಹ ಗಡಿಯಾರವನ್ನು ಮನೆಯಲ್ಲಿ ಇಟ್ಟು ಒಟ್ಟಾರೆ ಮೆರುಗು ಹೆಚ್ಚಿಸಲು ಸಾಧ್ಯ ಎಂದವರು ಸಲಹೆ ನೀಡಿದರು.

ಅಂದಕ್ಕೆ ಮೆರುಗು: ಈಗ ಮಾರುಕಟ್ಟೆಯಲ್ಲಿ ನಾವು ಬಯಸಿದ ಗಡಿಯಾರವನ್ನು ತಯಾರಿಸಿಕೊಡುತ್ತಾರೆ. ಹೀಗಾಗಿ ಇಂತಹ ಗೋಡೆ ಗಡಿಯಾರ ಬೇಕಾದರೆ ಮೊದಲೇ ಪ್ಲಾನ್‌ ಮಾಡಬೇಕು. ಇದರ ಮೇಲೆ ನಿಮ್ಮ ನೇಮ್‌ ಪ್ಲೇಟ್‌ ಹಿತ್ತಾಳೆ ಫಲಕದಲ್ಲಿ ಕೆತ್ತಿಸಬಹುದು. ಇವುಗಳ ಟಿಕ್‌ ಟಿಕ್‌ ಶಬ್ದ ಕೂಡ ಸ್ವಲ್ಪ ಜೋರಾಗಿ ಕೇಳಿಸುವುದರಿಂದ ಮನೆಯಲ್ಲಿ ಜೀವ ಕಳೆ ಸದಾ ನಲಿದಾಡುತ್ತಿರುತ್ತದೆ. ಇನ್ನು ಗಂಟೆಗೊಮ್ಮೆ ಅದು ಮಾಡುವ ಶಬ್ದವಂತೂ ತುಂಬಾ ಚೆನ್ನಾಗಿರುತ್ತದೆ. ಆದರೆ ನಿದ್ರೆ ಕಡಿಮೆ ಬರುವವರು ಅಥವಾ ಸ್ವಲ್ಪ ಶಬ್ದವಾದರೂ ಎಚ್ಚರವಾಗುವ ಗುಣವುಳ್ಳವರಿಗೆ ಇಂತಹ ಗಡಿಯಾರ ಹೇಳಿ ಮಾಡಿಸಿದ್ದಲ್ಲ.

ವಾಸ್ತು ಪ್ರಕಾರ: ವಾಸ್ತು ಶಾಸ್ತ್ರದಲ್ಲೂ ಗೋಡೆ ಗಡಿಯಾರಕ್ಕೆ ಹೆಚ್ಚಿನ ಮಹತ್ವವಿದೆ. ಇಂತಹ ಗೋಡೆ ಗಡಿಯಾರವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ, ವಾಯುವ್ಯ ಅಥವಾ ನೈರುತ್ಯ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಿದರೆ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಇನ್ನು ಮುಖ್ಯ ದ್ವಾರದ ಸಮೀಪದಲ್ಲಿ ಇದನ್ನು ಹಾಕಲೇಬಾರದು. ಇದರಲ್ಲಿ ಸಮಯ ಯಾವಾಗಲೂ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ತಾವು ಹಾಕಿಕೊಂಡ ನಿರೀಕ್ಷಿತ ಗುರಿಯನ್ನು ಸಾಧಿಸಲು ವಿಫಲವಾಗುವ ಸಾಧ್ಯತೆಯಿದೆ. ಗಡಿಯಾರ ಕೆಟ್ಟರೆ ಕೂಡಲೇ ರಿಪೇರಿ ಮಾಡಿಸಿಕೊಳ್ಳಬೇಕು. ಗಡಿಯಾರದ ಗಾಜು ಒಡೆದು ಹೋಗಿದ್ದರೆ ಅದನ್ನು ಕೂಡ ತಕ್ಷಣವೇ ಬದಲಾಯಿಸಬೇಕು.

Similar questions