India Languages, asked by pushpakantharaju782, 7 months ago

essay in Kannada on women empowerment

Answers

Answered by saiyadafatma00
0

Answer:

sorry............................

Answered by khushisharma2711ks
3

Answer:

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು. ಜಾತಕ ಕುಂಡಲಿಯಲ್ಲಿ ಆಕೆಯ ಶಕ್ತಿಯನ್ನು ವಿಮರ್ಶಿಸುವ ತ್ರಿಗುಣಗಳಿವೆ. ಅವೇನೆಂದು ನೋಡೋಣ.

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು. ಜಾತಕ ಕುಂಡಲಿಯಲ್ಲಿ ಆಕೆಯ ಶಕ್ತಿಯನ್ನು ವಿಮರ್ಶಿಸುವ ತ್ರಿಗುಣಗಳಿವೆ. ಅವೇನೆಂದು ನೋಡೋಣ.

* ಡಾ. ಭಾರತಿ ರವೀಂದ್ರ

ಪ್ರಕೃತಿಯ ವಿಶೇಷ ಸೃಷ್ಟಿ ಯೇ ಮಹಿಳೆ. ಆಧುನಿಕ ಯುಗದಲ್ಲಿ ಆಕೆ ತನ್ನನ್ನು ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನ ಸಾಮರ್ಥ್ಯ‌ವನ್ನು, ಪ್ರಾಬಲ್ಯವನ್ನು ಮೆರೆದಿದ್ದಾಳೆ. ಒಳಗಿನ ಹಾಗೂ ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಿಸದೆ ಸಮಾನ ಆಸಕ್ತಿಯಿಂದ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷ ತೆಯಲ್ಲಿ ನಿಭಾಯಿಸುವ ಈ ಗುಣವೇ ಸ್ತ್ರೀಯರಲ್ಲಿರುವ ವಿಶಿಷ್ಟತೆ. ಇದಕ್ಕೆಲ್ಲಾ ಕಾರಣವಾಗಿರುವುದು ಸ್ತ್ರೀಯರಲ್ಲಿರುವ ಮನೋಬಲ. ಮನಸ್ಸೇ ಎಲ್ಲಕ್ಕೂ ಮೂಲ. ಈ ಮನಸ್ಸು ಅತ್ಯಂತ ಸೂಕ್ಷ ್ಮ ಹಾಗೂ ಸಮರ್ಥವಾಗಿದ್ದರೆ ಇಡೀ ಪ್ರಪಂಚವನ್ನೇ ಅರಿತು, ಅನುಭವಿಸಿ ಆನಂದಿಸಲು ಸಾಧ್ಯ. ಮೇಲ್ನೋಟಕ್ಕೆ ಮಹಿಳೆಯ ಮನಸ್ಸು ಮೃದು ಹಾಗೂ ಕೋಮಲವೆಂದು ಕಂಡುಬಂದರೂ ಆಂತರ್ಯದಲ್ಲಿ ಆಕೆಯ ಸಂಕಲ್ಪಶಕ್ತಿ ದೃಢವಾಗಿರುತ್ತದೆ. ಮನಸ್ಸಿನ ಈ ವಿಭಿನ್ನ ಸ್ವಭಾವಕ್ಕೆ ತ್ರಿಗುಣಗಳೇ ಆಧಾರವಾಗಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೋವಿಶ್ಲೇಷಣೆಯಲ್ಲಿ ತ್ರಿಗುಣಗಳ ಪಾತ್ರ ದೊಡ್ಡದು. ಅದು ವೈವಿಧ್ಯತೆ, ರೋಚಕತೆಯನ್ನು ನಿರ್ಣಯಿಸುತ್ತದೆ. ಪಂಚಭೂತ ತತ್ತ್ವಗಳು ಒಂದೇ ಆದರೂ ವ್ಯಕ್ತಿಯಿಂದ ವ್ಯಕ್ತಿಯ ದೇಹ ರಚನೆ ಬೇರೆಯಾಗಿರುವಂತೆ ಮಾನಸಿಕ ಗುಣಗಳೂ ಸಹ ವಿಭಿನ್ನವಾಗಿರುತ್ತವೆ. ತ್ರಿಗುಣಗಳು ಮನಸ್ಸಿನ ಮೂಲಕ ಪ್ರಕಟಗೊಳ್ಳುತ್ತವೆ. ಪೂರ್ವಜನ್ಮದ ಕರ್ಮಾನುಸಾರವಾಗಿ ತ್ರಿಗುಣಗಳು ಪ್ರತಿಯೊಬ್ಬರ ಮನಸ್ಸಿನಾಳದಲ್ಲಿ ಸುಪ್ತವಾಗಿರುತ್ತವೆ. ನಿರ್ವಹಿಸುವ ಪ್ರತಿಯೊಂದು ಕಾರ್ಯದಲ್ಲೂ ತ್ರಿಗುಣಗಳಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳ ಪ್ರಭಾವವಿರುತ್ತದೆ.

ಸ್ತ್ರೀಯು ಕಾರ್ಯಪ್ರವೃತ್ತಳಾದಾಗ ಯಾವ ಗುಣ ಅಧಿಕ ಪ್ರಮಾಣದಲ್ಲಿರುವುದೋ ಆ ಗುಣ ಸ್ವಭಾವವಾಗಿ ಅಭಿವ್ಯಕ್ತವಾಗುತ್ತದೆ. ಹೆಣ್ಣು ತಾಯಿಯಾದಾಗ ಅವಳಲ್ಲಿರುವ ನೈಜ ಮನೋಗುಣ ಜಾಗೃತವಾಗುವುದು. ಮಗುವನ್ನು ಸಾಕಿ-ಸಲಹಿ, ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಪುರುಷನಿಗಿಂತ ಸ್ತ್ರೀಯ ಕೈಂಕರ್ಯವೇ ಹಿರಿದು. ಮಕ್ಕಳನ್ನು ಸಲಹುವಾಗ ಸ್ತ್ರೀಯರಲ್ಲಿ ತ್ರಿಗುಣಗಳು ಯಾವ ರೀತಿ ಸಹಕರಿಸುವವು ಎಂಬುದನ್ನು ಅವಲೋಕಿಸೋಣ.

1. ತಾಮಸಿಕಗುಣ : ಅಜ್ಞಾನ, ಅಂಧಕಾರ ಮತ್ತು ದೃಢತೆ ತಮೋಗುಣದ ಪ್ರಮುಖ ಅಂಶ. ಮೊದಲ ಹಂತದಲ್ಲಿ ಜನಿಸಿದ ಮಗುವಿನ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲವಾದರೂ ನಂತರದ ದಿನಗಳಲ್ಲಿ ಮಗುವಿನ ಸ್ವಭಾವಕ್ಕೆ ಹೊಂದಿಕೊಳ್ಳುತ್ತಾಳೆ. ಎಂತಹ ಸ್ಥಿತಿಯಲ್ಲೂ ತನ್ನ ಮಗುವನ್ನು ಬೇಸರವಿಲ್ಲದೇ ಪೊರೆಯುತ್ತಾಳೆ.

2. ರಾಜಸಿಕಗುಣ : ಎರಡನೇ ಹಂತದಲ್ಲಿ ತಾಯಿಯಲ್ಲಿ ರಜೋಗುಣ ವ್ಯಕ್ತವಾಗುವುದು. ಕ್ರಿಯಾಶೀಲತೆ ಇದರ ಪ್ರಮುಖ ಗುಣವಾಗಿರುವುದರಿಂದ ಮಗು ಒಂದು ಹಂತಕ್ಕೆ ಬೆಳೆದರೂ, ಅದರ ಬೇಕು-ಬೇಡಗಳನ್ನು ಅವಳು ಗೃಹಿಣಿಯಾಗಿರಲಿ, ವೃತ್ತಿಪರ ಮಹಿಳೆಯೇ ಆಗಿರಲಿ, ಪ್ರತೀ ಹಂತದಲ್ಲೂ ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನಿಭಾಯಿಸುತ್ತಾಳೆ. ಎಲ್ಲೇ ಇದ್ದರೂ ಅವಳ ಮನಸ್ಸು ಮಗುವಿನ ಬಗ್ಗೆ ಸದಾ ಜಾಗೃತವಾಗಿರುತ್ತದೆ. ಇಲ್ಲಿ ತಾಯಿ ಪೃಥ್ವಿತತ್ವದಂತೆ ಇರುತ್ತಾಳೆ.

3. ಸಾತ್ವಿಕಗುಣ: ಸಾತ್ವಿಕ ಗುಣದ ಸ್ವಭಾವವೇ ಬುದ್ಧಿವಂತಿಕೆ ಮತ್ತು ಹಿಡಿದ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದೇ ಆಗಿದೆ. ಮಕ್ಕಳು ದೊಡ್ಡವರಾಗುತ್ತಾ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜಾಣ್ಮೆ ತಾಯಿಯಲ್ಲಿರುವುದು. ಜಗದ ಒಳಿತು-ಕೆಡುಕುಗಳೆರಡನ್ನೂ ತೋರಿಸಿ ಆಯ್ಕೆಯ ಮಾರ್ಗ ಮಕ್ಕಳಿಗೇ ಬಿಡುವಳು. ಮಕ್ಕಳು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಅವಳು ತೃಪ್ತಳಾಗುವಳು. ತಾಯಿಯಲ್ಲಿನ ಈ ಸತ್ವಗುಣದ ಜಾಗೃತಿ ಮಕ್ಕಳನ್ನು ಉತ್ತಮ ಹಾದಿಗೆ ತಂದು ನಿಲ್ಲಿಸುತ್ತದೆ.

ಎಂತಹ ಸನ್ನಿವೇಶದಲ್ಲೂ, ಏಕಾಂಕಿಯಾಗಿದ್ದಾಗಲೂ ಮಕ್ಕಳನ್ನು ಸಲಹುವ ಸಾಮರ್ಥ್ಯ‌ ಮಹಿಳೆಯಲ್ಲಿರುತ್ತದೆ.

ಜಾತಕದ ಸಹಾಯದಿಂದ ಮನಸ್ಸಿನ ಗುಣ ಮತ್ತು ಭಾವನೆಗಳ ನೈಜ ಸ್ವರೂಪವನ್ನು ತಿಳಿಯಬಹುದಾಗಿದೆ.

Explanation:

I hope it's helpful for you.....

please follow me....

and mark me as Brainlist.........

Similar questions