India Languages, asked by mistijain, 28 days ago

essay on corona in kannada​

Answers

Answered by Anonymous
2

Explanation:

Good afternoon Friends hiiiiiiiiiiiiiiiiiiiiiiiiiiiiiiiiiiiiiii

Answered by kashish45860
7

Answer:

ಕೋವಿಡ್-‌೧೯ ಎನ್ನುವುದು ಒಂದು ಸೋಂಕು ರೋಗ. ಇದನ್ನು ಉಂಟು ಮಾಡುವ ವೈರಸ್ಸು ಕೊರೊನಾ ವೈರಸ್‌ ಬಗೆ. ಇದರಲ್ಲಿ ಕಿರೀಟದಲ್ಲಿ ಇರುವಂತಹ ಮುಳ್ಳುಗಳಂತಹ ರಚನೆಗಳು ಇರುವುದರಿಂದ ಕೊರೊನಾ ಎನ್ನುವ ಹೆಸರು ಬಂದಿದೆ. ಕೊರೊನಾ ಎಂದರೆ ಲ್ಯಾಟಿನ್‌ ಭಾಷೆಯಲ್ಲಿ ಕಿರೀಟ ಎಂದು ಅರ್ಥ.

ವೈರಸ್ಸುಗಳು ಮನುಷ್ಯರಲ್ಲಿ ಹಲವು ಖಾಯಿಲೆಗಳನ್ನು ಉಂಟು ಮಾಡುತ್ತವೆ. ಪೋಲಿಯೋ, ದಡಾರ, ಫ್ಲೂ, ಮತ್ತು ನೆಗಡಿ ಇಂತಹ ಕೆಲವು ಖಾಯಿಲೆಗಳು. ಇವುಗಳಲ್ಲಿ ಕೆಲವಕ್ಕೆ ಲಸಿಕೆಗಳು ಇವೆ. ನಾವು ಚಿಕ್ಕವರಿರುವಾಗ ನಮಗೆ ನೀಡುವ ಲಸಿಕೆಗಳು ಈ ರೋಗಗಳಲ್ಲಿ ಕೆಲವನ್ನು ತಡೆಯಬಲ್ಲವು. ಎಲ್ಲವನ್ನೂ ಅಲ್ಲ. ಫ್ಲೂ ತಡೆಯಲು ಒಂದು ಲಸಿಕೆ ಇದೆ. ಇದನ್ನು ದೊಡ್ಡವರಾದ ಮೇಲೂ ಚುಚ್ಚಿಸಿಕೊಳ್ಳಬಹುದು. ಆದರೆ ಸರಿಯಾಗಿ ರಕ್ಷಣೆ ಪಡೆಯಲು ಪ್ರತಿ ವರ್ಷವೂ ಇದನ್ನು ಚುಚ್ಚಿಸಿಕೊಳ್ಳಬೇಕು. ನಮ್ಮ ದೇಹದ ರೋಗ ರಕ್ಷಣಾ ವ್ಯವಸ್ಥೆಯು ವೈರಸ್ಸು ದೇಹವನ್ನು ಹೊಕ್ಕ ಕೂಡಲೇ ಗುರುತಿಸಿ ಅದರ ಜೊತೆ ಹೋರಾಡುವಂತೆ ಈ ಲಸಿಕೆಗಳು ದೇಹವನ್ನು ಸಿದ್ಧಪಡಿಸುತ್ತವೆ.

ಆದರೆ ನಮ್ಮ ದೇಹಕ್ಕೆ ಪರಿಚಯವೇ ಇಲ್ಲದ ವೈರಸ್ಸು ದೇಹವನ್ನು ಹೊಕ್ಕಾಗ ಸಮಸ್ಯೆ ಉಂಟಾಗುತ್ತದೆ. ಹಂದಿ, ಕೋಳಿ, ಬಾವಲಿಗಳೇ ಮುಂತಾದ ಹಕ್ಕಿ ಪ್ರಾಣಿಗಳಲ್ಲಿ ಇರುವಂತಹ ವೈರಸ್ಸುಗಳು ನಮ್ಮ ದೇಹವನ್ನು ಹೊಕ್ಕಾಗ ಹೀಗಾಗುತ್ತದೆ. ಕೆಲವೊಮ್ಮೆ ಇವು ಮನುಷ್ಯರನ್ನು ತಾಕಬಹುದು. ಆಗ ಮನುಷ್ಯರಲ್ಲಿ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

Similar questions