essay on covid 19 in kannada
Answers
Answer:
Hello kannadian
thank my answer ♥️
Explanation:
ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು.
ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.
ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು.ಇನ್ನು ಕೆಲವು ವೈರಸ್ ಗಳು ಮನುಷ್ಯರ ಮೇಲೆ ಕೂಡ ಪರಿಣಾಮ ಬೀರುವುದು.
ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು.
ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ.
ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.
ಕರುಳಿನ ಕ್ಯಾನ್ಸರ್ ತಡೆಯುವ ಶಕ್ತಿ ಈ 5 ಆಹಾರಗಳಲ್ಲಿ ಅಡಗಿದೆ
ಕೊರೊನಾ ವೈರಸ್ ಹಬ್ಬುವುದು ಹೇಗೆ?
*ಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಹಬ್ಬುವುದು.
*ಶೀನು ಮತ್ತು ಕೆಮ್ಮಿನ ಗಾಳಿಯಿಂದ.
*ತುಂಬಾ ಹತ್ತಿರ ದೈಹಿಕ ಸಂಪರ್ಕದಿಂದ. ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಘವ
*ವೈರಸ್ ಇರುವ ವಸ್ತುವನ್ನು ಮುಟ್ಟುವುದು, ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದರೆ.
*ಅಪರೂಪದಲ್ಲಿ ಮಲದ ಮೂಲಕ
ಕೊರೊನಾ ವೈರಸ್ ಸೋಂಕಿನಿಂದ ಆಗುವ ಅಪಾಯಗಳು?
ಯಾರಿಗೂ ಕೊರೊನಾ ವೈರಸ್ ಬರಬಹುದು. ಆದರೆ ಸಣ್ಣ ಮಕ್ಕಳಿಗೆ ಇದು ಬೇಗನೆ ಹರಡುವುದು. ಅಮೆರಿಕಾದಲ್ಲಿ ಇದು ಚಳಿಗಾಲದಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ.
ಕೊರೊನಾ ವೈರಸ್ ನ ಕೆಲವು ಲಕ್ಷಣಗಳು ಯಾವುದು?
ಕೊರೊನಾ ವೈರಸ್ ಯಾವ ರೀತಿಯದ್ದು ಮತ್ತು ಸೋಂಕು ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇದರ ಲಕ್ಷಣವು ಅವಲಂಬಿಸಿದೆ. ಶೀತದಂತಹ ಶ್ವಾಸಕೋಶದ ಮೇಲ್ಬಾಗದ ಸೋಂಕಿಗೆ ಒಳಗಾಗಿದ್ದರೆ ಆಗ ನಿಮ್ಮಲ್ಲಿ ಈ ರೀತಿಯ ಕೆಲವು ಲಕ್ಷಣಗಳೂ ಕಾಣಿಸಿಕೊಳ್ಳುವುದು.
*ಮೂಗು ಸೋರುವುದು
*ತಲೆನೋವು
*ಕೆಮ್ಮು
*ಗಂಟು ನೋವು
*ಜ್ವರ
*ಸಂಪೂರ್ಣವಾಗಿ ಅನಾರೋಗ್ಯ
ಕೆಮ್ಮಿಗೆ ತ್ವರಿತ ಪರಿಹಾರ ನೀಡುವ ಪವರ್‌ಫುಲ್ ಮನೆಮದ್ದುಗಳು
ಈ ರೋಗದ ವೈರಸ್‌ಗಳು ತುಂಬಾನೇ ಡೇಂಜರಸ್
ಕೆಲವು ಕೊರೊನಾ ವೈರಸ್‌ಗಳು ತೀವ್ರ ರೀತಿಯ ಲಕ್ಷಣಗಳನ್ನು ತೋರಿಸುವುದು. ಈ ಸೋಂಕು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಆಗಿ ಪರಿವರ್ತನೆ ಆಗಬಹುದು.
ಇದರ ಪ್ರಮುಖ ಲಕ್ಷಣಗಳೆಂದರೆ*ಕಫದೊಂದಿಗೆ ಕೆಮ್ಮು*ಉಸಿರು ಕಟ್ಟುವಿಕೆ*ಎದೆ ನೋವು ಅಥವಾ ಕೆಮ್ಮು ಅಥವಾ ಉಸಿರಾಟದ ವೇಳೆ ಬಿಗಿ ಹಿಡಿತ*ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಇರುವವರಲ್ಲಿ ಈ ತೀವ್ರವಾದ ಲಕ್ಷಣಗಳು ಸಾಮಾನ್ಯ.
*ಇದರೊಂದಿಗೆ ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವಂತಹ ಶಿಶುಗಳು ಮತ್ತು ವಯಸ್ಸಾದವರಲ್ಲಿ ಇದು ಸಾಮಾನ್ಯ.
ಬ್ರಾಂಕೈಟಿಸ್‌ಗೆ ಸರಳ ಮನೆಮದ್ದುಗಳು
ಕೊರೊನಾ ವೈರಸ್ ಪತ್ತೆ ಮಾಡುವುದು ಹೇಗೆ?
ಕೊರೊನಾ ವೈರಸ್ ಪತ್ತೆ ಮಾಡಲು ವೈದ್ಯರು
ವೈದ್ಯಕೀಯ ಇತಿಹಾಸ ತಿಳಿಯುವರು
ದೈಹಿಕ ಪರೀಕ್ಷೆ ಮಾಡುವರು
ರಕ್ತ ಪರೀಕ್ಷೆ ಮಾಡಬಹುದು.
ಕಫ, ಗಂಟಲಿನ ಸ್ವಾಬ್ ನ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆ ಮಾಡಿಸಬಹುದು.
ಕೊರೊನಾ ವೈರಸ್ ಗೆ ಚಿಕಿತ್ಸೆಗಳು ಯಾವುದು?
ಕೊರೊನಾ ವೈರಸ್ ಸೋಂಕಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಕೆಲವು ಜನರು ಅವರಾಗಿಯೇ ಚೇತರಿಸಿಕೊಳ್ಳುವರು. ಆದರೆ ಇದರ ಲಕ್ಷಣಗಳನ್ನು ಈ ರೀತಿಯಾಗಿ ಕಡಿಮೆ ಮಾಡಬಹುದು.
*ನೋವು, ಜ್ವರ ಮತ್ತು ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವುದು. ಮಕ್ಕಳಿಗೆ ಆಸ್ಪಿರಿನ್ ಕೊಡಬೇಡಿ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಔಷಧಿ ನೀಡಬೇಡಿ.
*ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಮಾಡಲು ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು.
*ಸಾಕಷ್ಟು ವಿಶ್ರಾಂತಿ ಪಡೆಯಿರಿ.
ನೀರಿನಾಂಶ ಹೆಚ್ಚು ಸೇವಿಸಿ.
Hope it helps ✌️
Answer:
Hope this helps you .
Mark As BRAINLIST .