India Languages, asked by veereshkumar48, 6 months ago

essay on Dushera jatre in Kannada.​

Answers

Answered by Ganesh094
7

ಶ್ರೀರಂಗಪಟ್ಟಣ ಬಳಿಯ ಬೆಳಗೊಳದ ರೈತ ಬೋನಾಸಿ ರಾಮೇಗೌಡರಿಗೆ ದಸರಾ ಅಂದಾಕ್ಷಣ ‘ಪಟ್ಟದಾನೆ ಮೇಲೆ ಮಹಾರಾಜರು ಕುಳಿತುಕೊಂಡು ಬರೋದು ನೆನಪಾಗುತ್ತದೆ. ಜಂಬೂ ಸವಾರಿಯಲ್ಲಿನ ಕುಣಿತ, ಮೆರೆತ ಎಲ್ಲ 40 ವರ್ಷದ ಹಿಂದೆ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ರಮ್ಮನಹಳ್ಳಿ ಜನರು ತಲೆ ಮೇಲೆ ಲೈಟ್ ಹೊತ್ಕಂಡು ಹೋಗೋದು, ಅರಮನೆ ಒಳಗೆ ರಾಜರ ಎದುರಿಗೆ ನಡೆಯುತ್ತಿದ್ದ ಕುಸ್ತಿ, ರಾತ್ರಿ ಸವಾರಿ, ಬ್ಯಾಂಡ್ ಎಲ್ಲ ಮಜವಾಗಿತ್ತು.

ಒಂದು ರೂಪಾಯಿ ಬಾಡಿಗೆ ಕೊಟ್ಟು ಮಹಾರಾಜರ ರೀತಿ ನಾವೂ ಸೂಟು, ಬೂಟು, ಪೇಟ, ಕನ್ನಡಕ, ಒಂದೆಳೆ ಹೂವಿನ ಹಾರ ಹಾಕಿಕೊಂಡು ಕುಣಿಯುತ್ತಿದ್ದೆವು. ಆ ದಿನದ ದಸರಾದಲ್ಲಿ ಈ ಹೊತ್ತು ಒಂದಾಣಿ ಭಾಗವೂ ಕಾಣಿಸುತ್ತಿಲ್ಲ. ಬೆಳಗೊಳದಿಂದ (15 ಕಿ.ಮೀ.) ನಡೆದುಕೊಂಡೇ ಹೋಗುತ್ತಿದ್ದೆವು. ಪಟ್ಟದ ಆನೆ, ಪಟ್ಟದ ಹಸು, ಸಂಗೀತ, ಸಿಂಹಾಸನಕ್ಕೆ ಅವುಲು ಎರಚಿ ಮಹಾರಾಜರು ಕುಳಿತುಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ದೊಡ್ಡಪೇಟೆ ಮಾರ್ಗದಲ್ಲಿ ಬರುತ್ತಿದ್ದ ರಾತ್ರಿ ಸವಾರಿ ವ್ಹಾ!’*‘ನಮಗೆ ದಸರಾ ದೊಡ್ಡ ಹಬ್ಬ. ಮನೆ ತುಂಬ ನೆಂಟರು ಇರುತ್ತಾರೆ. ಜಂಬೂ ಸವಾರಿ, ಹೊಸ ಬಟ್ಟೆ ತೆಗೆದುಕೊಳ್ಳುವುದು, ವಾರಪೂರ್ತಿ ಬಗೆಬಗೆ ಊಟ, ತಿಂಡಿ ಮಾಡುವುದು ಸಂತೋಷ ನೀಡುತ್ತದೆ. ಈಗ ಸಾಧಾರಣವಾಗಿದೆ. ಮಹಾರಾಜರ ಕಾಲದ ದಸರಾ ಚೆನ್ನಾಗಿತ್ತು. ಜಂಬೂ ಸವಾರಿಗೆ ಎಂಟು ದಿನದ ಮೊದಲೇ ಬೇರೆ ಬೇರೆ ಕಡೆಯಿಂದ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ಈಗಿನ ಬೋಟಿ ಬಜಾರ್ ಬಳಿ ಗಾಡಿ ಚೌಕ ಇತ್ತು, ಅಲ್ಲಿ ಗಾಡಿಗಳನ್ನು ನಿಲ್ಲಿಸಿ ತಂಗುತ್ತಿದ್ದರು.

ನಮ್ಮ ಹಳ್ಳಿ ಜನ ದಸರಾಕ್ಕೆ ಪೋಜು ಅನ್ನೋರು. ತೊಣಚಿಕೊಪ್ಪಲು ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿರುವ ಕುಮಾರ್ ದೃಷ್ಟಿಯಲ್ಲಿ ‘ಅಂದಿನ ದಸರಾ ಎಂದರೆ ಅಂಬಾರಿ, ಮೆರವಣಿಗೆಯಲ್ಲಿ ಬರುವ ಜನಪದ ಕಲಾ ತಂಡಗಳ ಪ್ರದರ್ಶನ, ಆನೆಗಳು ನೆನಪಾಗುತ್ತವೆ. ಆದರೆ, ಈಗಿನ ದಸರಾ ಸರ್ಕಾರವನ್ನು ಅವಲಂಬಿಸಿದೆ. ದಸರಾದಲ್ಲಿ ಏನು ಇರಬೇಕು, ಇರಬಾರದು ಅನ್ನುವುದನ್ನು ಅಧಿಕಾರದಲ್ಲಿ ಇರುವವರು ನಿರ್ಧರಿಸುತ್ತಾರೆ. ಆ ಕಾಲಕ್ಕೆ ಅದೇ ಚೆಂದ, ಈ ಕಾಲಕ್ಕೆ ಇದೇ ಚೆಂದ ಅನಿಸುತ್ತದೆ.’*‘ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಳಿಯಾಳ ಮುಂತಾದ ಪ್ರದೇಶಗಳನ್ನು ಕುಸ್ತಿಯ ನಾಡು ಎಂದೇ ಕರೆಯುವವರು ಇದ್ದಾರೆ. ಗರಡಿ ಮನೆಗಳು ಕಡಿಮೆಯಾಗಿದ್ದರೂ ಕುಸ್ತಿಗೆ ಉತ್ತರ ಕರ್ನಾಟಕದಲ್ಲಿ ಧಕ್ಕೆಯಾಗಲಿಲ್ಲ. ಆಡುವ ವಾತಾವರಣ, ಶೈಲಿ ಇತ್ಯಾದಿಗಳಲ್ಲಿ ಸ್ವಲ್ಪ ಆಧುನಿಕ ಸ್ಪರ್ಶ ಲಭಿಸಿದ್ದರೂ ಕುಸ್ತಿಯ ಕುರಿತ ಪ್ರೀತಿ ಇಲ್ಲಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ’ ಎನ್ನುತ್ತಾರೆ ಹಳಿಯಾಳ ಮೂಲದವರಾದ, ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ ಗೌಡ.

Iam also kannadiga

Hope its helps for more search on Google ..... Thanks

Similar questions