essay on ಪ್ರಕೃತಿ ಬೆಳೆಯಲಿ ಜೀವರಾಶಿ ಉಳಿಯಲಿ fast
Answers
Answer:
ಇದು ಪ್ರಕೃತಿ ಮಾತೆ ಜೀವ ಸಂಕುಲಕ್ಕೆ ನೀಡಿರುವ ಕೊಡುಗೆಯಾಗಿದೆ. ಪರಿಸರದಿಂದಲೇ ಎಲ್ಲಾ ಜೀವಿಗಳ ಜೀವನ ಆರಂಭವಾಗುತ್ತದೆ. ಮಾನವನು ಕೂಡಾ ಪರಿಸರದ ಒಂದು ಭಾಗ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪಂಚಭೂತಗಳನ್ನು ಬಳಸಿಕೊಳ್ಳುತ್ತಿದ್ದಾನೆ, ಮಾನವನ ದುರಾಸೆಯೇ ಜೀವ ವೈವಿಧ್ಯಗಳ ವಿನಾಶಕ್ಕೆ ಕಾರಣ.
ಹಚ್ಚ-ಹಸುರಾಗಿ ಕಂಗೊಳಿಸುತ್ತಿದ್ದ ಪ್ರಕೃತಿ ಮಾತೆ ಇಂದು ತನ್ನ ಸೌಂದರ್ಯವನ್ನು ಕಳೆದುಕೊಂಡು ಬಿಟ್ಟಿದ್ದಾಳೆ. ಮಳೆ, ಗಾಳಿ, ನೀರು ತನ್ನ ಪರಿಶುದ್ಧತೆಯನ್ನು ಕಳೆದುಕೊಂಡಿದೆ. ಮಾನವನು
ಪ್ರಕೃತಿಯನ್ನು ತನ್ನ ಮೋಜಿಗಾಗಿ ಬಳಸುತ್ತಿದ್ದಾನೆ. ಇದರಿಂದಾಗಿ ಪ್ರಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆರಂಭದಲ್ಲಿ ಪ್ರಕೃತಿಯ ಜೊತೆಗೆ ಬದುಕುತ್ತಿದ್ದಂತಹ ಮಾನವನು ಈಗ
ಆಧುನೀಕರಣ, ನಗರೀಕರಣ ಮುಂತಾದವುಗಳ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾನೆ. ಹೆಚ್ಚಿದ ತಂತ್ರಜ್ಞಾನವೇ ಪರಿಸರದ ನಾಶಕ್ಕೆ ಕಾರಣವಾಗುತ್ತಿದೆ. ಮಾನವನ ಜೀವನ ಆಧುನೀಕರಣ ಮತ್ತು ಹೆಚ್ಚಿನ ತಂತ್ರಜ್ಞಾನಗಳ ಬಳಕೆಯಿಂದಾಗಿ ಬದಲಾಗಿದೆ. ಮನುಷ್ಯ ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ಪರಿಸರ ನಾಶ ಹೆಚ್ಚಾಗಿ ಜೀವ ವೈವಿಧ್ಯ ನಾಶವಾಗಬಹುದು. ಮಾನವನಿಗೂ ಭೂಮಿ ಮೇಲೆ ಬದುಕಲು ಸಾಧ್ಯವಾಗದು. ಪ್ರಕೃತಿ ಮಾತೆ ಮುನಿದುಕೊಂಡರೆ ಸರ್ವವನ್ನೂ ನಾಶ ಮಾಡಿ ಬಿಡುತ್ತಾಳೆ. ಪರಿಸರವನ್ನು ರಕ್ಷಿಸುವುದು ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯರಾದ ನಮ್ಮ ಕರ್ತವ್ಯ. ನಮ್ಮ ಪರಿಸರದ ರಕ್ಷಣೆಯನ್ನು ನಾವೇ ಮಾಡಬೇಕಾಗಿದೆ. ಪರಿಸರಕ್ಕೆ ಪೂರಕವಾಗುವಂತಹ ಯೋಜನೆಗಳನ್ನು ತರಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಪ್ರಾಣಿ-ಪಕ್ಷಿಗಳಿಗೆ ವಿನಾ ಕಾರಣ ಯಾವುದೇ ರೀತಿಯ ತೊಂದರೆ ಮಾಡಬಾರದು. ಅದರ ಉಳಿವಿಗೆ ನಾವು ಪ್ರಯತ್ನಿಸಬೇಕು. ನ ಸ್ವಾರ್ಥಕ್ಕಾಗಿ ಪ್ರಾಣಿ-ಪಕ್ಷಿಗಳನ್ನುಸ್ವಾರ್ಥಕ್ಕಾಗಿ ಪ್ರಾಣಿ-ಪಕ್ಷಿಗಳನ್ನು ಬಲಿ
ಕೊಡಬಾರದು. ಗಣಿಗಾರಿಕೆ ಹಾಗೂ ಹಲವು ರೀತಿಯ ಮಾಲಿನ್ಯ ಗಳಿಂದ ಭೂಮಿಯನ್ನು ರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ. ಈ ಮೂಲಕವಾಗಿ ನಾವು ನಮ್ಮ ಪರಿಸರವನ್ನು ಮಾಲಿನ್ಯ ರಹಿತವನ್ನಾಗಿ ಮಾಡಬೇಕು. ನಾವು ಮುಂದೆ ಇದೇ ಪರಿಸರದಲ್ಲಿ ಜೀವಿಸಬೇಕಾದವರು. ಹೀಗಾಗಿ ನಮ್ಮ ಪರಿಸರದ ರಕ್ಷಣೆ ನಾವೇ ಮಾಡಬೇಕು. ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯವೂ ಆಚರಣೆಯಲ್ಲಿರಲಿ.ಪ್ರಕೃತಿ ಬೆಳೆಯಲಿ ಜೀವರಾಶಿ ಉಳಿಯಲಿ.
hope it helps ✔︎✔️✔︎☺︎︎.
Answer: