essay on festivals in kannda
Answers
ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನಗಳು ಈ ಹಬ್ಬಗಳು. ಒಮ್ಮೊಮ್ಮೆ ಹಬ್ಬಗಳು ನಮ್ಮ ಹಿರಿಯರ ಆವಿಷ್ಕಾರಗಳು ಎಂದೆನಿಸಿದ್ದಿದೆ. ಈ ಆವಿಷ್ಕಾರದ ಹಿಂದೆ ಪುರಾಣ, ಇತಿಹಾಸ, ಸುಂದರ ಕಲ್ಪನೆಗಳು, ಉದಾತ್ತ ಆಶಯಗಳು ಬೆರೆತಿವೆ.
ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಉದಾಹರಣೆಗೆ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ ಉಲ್ಲಾಸಮಯ ದಿನಗಳ ಆರಂಭವನ್ನು ವಸಂತ ಋತುವಿನ ಆಗಮನವನ್ನು ಯುಗಾದಿಯಾಗಿ, ವಸಂತ ಪಂಚಮಿಯಾಗಿ... ಹೀಗೆ ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಹತ್ತು ಹಲವು ಹಬ್ಬಗಳನ್ನು ರೂಪಿಸಿದ್ದಾರೆ.
ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣಗೊಂಡ ದುಡ್ಡಿನ ಜಗತ್ತಿನಲ್ಲಿ ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮ, ಪ್ರವಾಸಕ್ಕೆ ಸಮಯ, ಕೇವಲ ರಜೆ ಎಂದಾಗಿ ಹೋಗಿದೆ. ಇದು ನಿಜವಾಗಲು ದುಃಖದ ವಿಷಯ. ನಮ್ಮ ಸುಂದರ ಸಂಸ್ಕೃತಿ ಯ ಆಶಯಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯಾ? ಎಂದು ಆಲೋಚಿಸಬೇಕಾಗಿದೆ. [ದೀಪಾವಳಿಗೆ ಅತ್ತೆ ಚೊಂಬು ಕೊಟ್ಟ ಕಥೆ]
ನಾವು ಹಬ್ಬಗಳನ್ನು ಏಕೆ ಆಚರಿಸಬೇಕು?
ಮೊನ್ನೆ ಪ್ರಗತಿಪರ ಸ್ನೇಹಿತರ ಮನೆಗೆ ಹೋಗಿದ್ದೆ, ಅವರೆಂದರು "ನಾವು ದೇವರನ್ನು ನಂಬುವುದಿಲ್ಲ ಹಾಗಾಗಿ ನಾವು ಯಾವುದೇ ಹಬ್ಬಗಳನ್ನ ಆಚರಿಸುವುದಿಲ್ಲ...". ಅಯ್ಯೋ ಎಷ್ಟೊಂದು ಒಳ್ಳೆಯ ಆಶಯಗಳನ್ನು ಧ್ಯಾನಿಸುವ ಅವಕಾಶವನ್ನು, ಬದುಕಿನ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ವ್ಯಥೆಯಾಯಿತು. ಹಬ್ಬಗಳು ಬರಿ ಸಿಹಿ ಊಟ ಮಾಡುವ, ಹೊಸ ಬಟ್ಟೆ ತೊಡುವ ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಅದನ್ನೂ ಮೀರಿದ ಉದಾತ್ತ ಉದ್ದೇಶ ಹಬ್ಬಗಳಿಗಿದೆ. ಇದನ್ನೆಲ್ಲಾ ಯೋಚಿಸುತ್ತಾ ಪ್ರಗತಿಪರ ಸ್ನೇಹಿತರಿಗೆ ಹೇಳಿದೆ "ನೀವು ಢಂಬಾಚಾರ, ಆಡಂಬರವನ್ನು ನಿರಾಕರಿಸಿ... ಆದರೆ ಹಬ್ಬದ ಆಚರಣೆಯನ್ನು ನಿಲ್ಲಿಸಬೇಡಿ... ಹಬ್ಬವನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶ ನಿರಾಕರಿಸಿದಂತೆ". ಬಹುಶಃ ಅವರು ಮುಂದಿನ ಹಬ್ಬದಿಂದ ನಮ್ಮ ನಿಲುವನ್ನು ಬದಲಿಸಿಕೊಳ್ಳುವರು ಎಂದು ಆಶಿಸುತ್ತೇನೆ.
ಹೊಸ ಬೆಳವಣಿಗೆ
ಇನ್ನೊಂದು ಸಂತೋಷದ ವಿಷಯವೆಂದರೆ, ಜಾತಿ, ಧರ್ಮಗಳ ಕಟ್ಟಳೆ ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿರುವುದು. ಜಾಗತೀಕರಣ ಜಗತ್ತಿನ ಒಂದು ಒಳ್ಳೆ ಕಾಣಿಕೆ ಇದು. ಉತ್ತಮ ಬೆಳವಣಿಗೆ. ಬೆಂಗಳೂರಿನ ಅನೇಕ ಅಪಾರ್ಟಮೆಂಟುಗಳಲ್ಲಿ ಎಲ್ಲಾ ಕುಟುಂಬಗಳು ಒಟ್ಟಾಗಿ, ಯಾವುದೆ ಭೇದವಿಲ್ಲದೆ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ.
1
Secondary SchoolIndia languages 8 points
Essay on national festivals in kannada language
Ask for details Follow Report by M1uzsarooqamma 27.01.2017
Answers
Me · Beginner
Know the answer? Add it here!
sureshb Ambitious
This is a Verified Answer
×
Verified Answers contain reliable, trustworthy information vouched for by a hand-picked team of experts. Brainly has millions of high quality answers, all of them carefully moderated by our most trusted community members, but Verified Answers are the finest of the finest.
ಹಬ್ಬ ಜೀವನಕ್ಕೆ
ಒಂದು ಆಚರಣೆ. ಇದು
ಒಂದು ನಿರ್ದಿಷ್ಟ ರೀತಿಯ ಪ್ರದರ್ಶನಗಳನ್ನು ಒಂದು ಆಚರಣೆ ಮನರಂಜನೆ ಅಥವಾ ಸರಣಿ, ಸಾಮಾನ್ಯವಾಗಿ ನಿಯತಕಾಲಿಕವಾಗಿ ನಡೆಯುತ್ತದೆ. ಫೆಸ್ಟಿವಲ್
ಜೀವನದ ಏಕತಾನತೆ ಒಡೆಯುತ್ತದೆ. ಹಬ್ಬಗಳು ಜನಸಾಮಾನ್ಯರಿಗೆ ಶಾಂತಿ ಮತ್ತು ಸಂತೋಷವನ್ನು ತರುತದೆ. ಎಲ್ಲಾ ರಾಷ್ಟ್ರಗಳಿಗೆ ತಮ್ಮದೇ ಅಧ ಧಾರ್ಮಿಕ ಮತ್ತು ಸಾಂಸ್ಕೃತಿಕ
ಉತ್ಸವಗಳನ್ನು ಹೊಂದಿದೆ. ಭಾರತದಲ್ಲಿ ಹಬ್ಬಗಳು ಹಲವಾರು. ಹಬ್ಬಗಳು
ಸಾಮರಸ್ಯ ಶ್ರೀಮಂತ ವೈವಿಧ್ಯಮಯ ಮತ್ತು ವರ್ಣರಂಜಿತಗಳಿವೆ.
ಭಾರತೀಯ ಹಬ್ಬಗಳು ವಿಭಿನ್ನವಾಗಿರುತ್ತವೆ. ಅವುಗಳನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ, ರಾಷ್ಟ್ರೀಯ ಅಥವಾ ರಾಜಕೀಯ ಧರ್ಮ ಮತ್ತು ಕಾಲೋಚಿತ ಹಬ್ಬಗಳಾಗಿವೆ. ಬಹುತೇಕ ಭಾರತೀಯ ಹಬ್ಬಗಳು ಧರ್ಮದಲ್ಲಿ ಅಥವಾ ಪುರಾಣ ಮತ್ತು ಜನಪ್ರಿಯ ಧರ್ಮಗಳ ಪುರಾಣ ಹೊಂದಿವೆ. ಕೆಲವು ಅತ್ಯಂತ ಗೌರವಾನ್ವಿತ ಪುರುಷರು ಮತ್ತು ಘಟನೆಗಳ ನೆನಪಿಗಾಗಿ ಸಂಬಂಧಿಸಿದುದಾಗಿದೆ. ಅವರು ಜೀವಂತವಾಗಿ ಆ ಘಟನೆಗಳು ಮತ್ತು ವ್ಯಕ್ತಿಗಳ ಮೆಮೊರಿ ಇರಿಸಿಕೊಳ್ಳಲು ಮತ್ತು ತಮ್ಮ ಉದಾಹರಣೆಗಳು ಅನುಸರಿಸಲು ಜನರು ಪ್ರೇರಿಪಿಸುದಕೆ ಬಯಸುತ್ತರೆ.