World Languages, asked by akshitha657613, 8 months ago

Essay on horse in kannada​

Answers

Answered by shailjasai13
0

Answer:

if you are talking about kannad horses they arw vakuable spexies ofbhoreses they are sold about 59,000 per mayr...

MARK ME AS BRAINLIST ANSWER

Answered by rohanmanjunath6
0

Answer:

ಕುದುರೆಯು (ಎಕೂಸ್ ಫ಼ೆರೂಸ್ ಕಬಾಲೂಸ್)[೨][೩] ಎಕೂಸ್ ಫ಼ೆರೂಸ್ ಅಥವಾ ಕಾಡು ಕುದುರೆಯ ಎರಡು ಅಸ್ತಿತ್ವದಲ್ಲಿರುವ ಉಪಪ್ರಜಾತಿಗಳ ಪೈಕಿ ಒಂದು. ಅದು ಜೀವಿವರ್ಗೀಕರಣ ಕುಟುಂಬ ಎಕ್ವಿಡೈಗೆ ಸೇರಿದ ಒಂದು ಬೆಸ ಕಾಲ್ಬೆರಳುಗಳಿರುವ ಗೊರಸುಳ್ಳ ಸಸ್ತನಿ. ಕುದುರೆಯು ಕಳೆದ ೪೫ ರಿಂದ ೫೫ ಮಿಲಿಯ ವರ್ಷಗಳಲ್ಲಿ ಚಿಕ್ಕ ಬಹು ಕಾಲ್ಬರೆಳುಗಳುಳ್ಳ ಪ್ರಾಣಿಯಿಂದ ಇಂದಿನ ದೊಡ್ಡ, ಒಂಟಿ ಕಾಲ್ಬೆರಳಿನ ಪ್ರಾಣಿಯಾಗಿ ವಿಕಾಸಗೊಂಡಿದೆ.

ಏಕ ಖುರಗಳ ಗುಂಪಿಗೆ ಸೇರಿದ ಸ್ತನಿ; ಶಾಸ್ತ್ರೀಯನಾಮ ಈಕ್ವಸ್ ಕೆಬಲ್ಲಸ್. ಪ್ರಾಚೀನ ಕಾಲದಿಂದಲೂ ಕುದುರೆ ಮನುಷ್ಯನ ಜೀವನದೊಡನೆ ಹಾಸುಹೊಕ್ಕಾಗಿ ಬೆಸೆದು ಹೋಗಿದೆ. ಇತಿಹಾಸವೇ ಆಗಲಿ ನಾಗರಿಕತೆಯ ವಿಕಾಸದ ವಿಶ್ಲೇಷಣೆಯೇ ಆಗಲಿ ಕುದುರೆಯ ಪ್ರಸ್ತಾಪದ ವಿನಾ ಅಪೂರ್ಣ. ಅನಾಗರಿಕತೆಯಿಂದ ನಾಗರಿಕತೆಯೆಡೆಗಿನ ಮಾನವನ ನಡೆಯಲ್ಲಿ ಆತನ ಹೆಜ್ಜೆಯ ಗುರುತುಗಳೊಡನೆ ಕುದುರೆ ಗೊರಸಿನ ಗುರುತುಗಳೂ ಎರಕಗೊಂಡಿವೆ ಎಂಬ ಪ್ರಚಲಿತ ಹೇಳಿಕೆ ಈ ಕಾರಣದಿಂದ ಬಂದುದಾಗಿರಬೇಕು. ಭಾರ ಹೊರಲು, ಸವಾರಿ ಮಾಡಲು, ವ್ಯವಸಾಯದಲ್ಲಿ ನಾನಾ ಬಗೆಯ ಕೆಲಸಗಳನ್ನು ನಿರ್ವಹಿಸಲು ಕುದುರೆಯಂಥ ಉಪಯುಕ್ತ ಹಾಗೂ ಸರ್ವಶಕ್ತ ಪ್ರಾಣಿ ಇನ್ನೊಂದಿಲ್ಲ.

ಕುದುರೆಯ ಪ್ರಾಚೀನ ಚರಿತ್ರೆಯನ್ನು ಅಪ್ರತ್ಯಕ್ಷ ನಿದರ್ಶನಗಳಿಂದ ಊಹಿಸಬೇಕಷ್ಟೆ. ಭೂಮಿಯ ಮೇಲೆ ಕುದುರೆ ಮಾನವನ ಉಗಮಕ್ಕಿಂತ ಅವೆಷ್ಟೋ ಶತಮಾನಗಳ ಮೊದಲೇ ಆಗಮಿಸಿದ್ದರೂ ಕ್ರಿ.ಪೂ. ಸು. 2000-3000 ವರ್ಷಗಳಿಂದಾಚೆಗೆ ಕುದುರೆಯ ವೃತ್ತಾಂತವನ್ನು ಖಚಿತವಾಗಿ ಹೇಳಬರುವುದಿಲ್ಲ. ದೊರೆತಿರುವ ಪಳೆಯುಳಿಕೆಗಳನ್ನು ಕ್ರಮಬದ್ಧವಾಗಿ ಅಳವಡಿಸಿ ಕುದುರೆಯ ಉಗಮವನ್ನು ವಿವರಿಸಲು ಮಾಡಿರುವ ಹಲವಾರು ಪ್ರಯತ್ನಗಳೂ ಕರಾರುವಾಕ್ಕಾಗಿ ನಿರ್ಧಾರವನ್ನು ನೀಡಲು ಸಮರ್ಥವಾಗಿಲ್ಲ. ಇದು ಹೇಗೂ ಇರಲಿ. ಆಧುನಿಕ ಕುದುರೆಯ ಪೂರ್ವಜ ಏಷ್ಯ ಖಂಡದಲ್ಲಿತ್ತೆಂದು ನಂಬಲಾಗಿದೆ. ಉತ್ತರ ಮಧ್ಯ ಏಷ್ಯದಲ್ಲಿ ಕುದುರೆಯ ಪೂರ್ವ ಪೀಳಿಗೆಯ ಉಗಮವಾಗಿ ಅಲ್ಲಿಂದ ಮೂರು ಪ್ರಧಾನ ಕವಲುಗಳಾಗಿ ಒಡೆದು ಒಂದು ಪೂರ್ವಕ್ಕೂ, ಇನ್ನೊಂದು ಪಶ್ಚಿಮಕ್ಕೂ, ಮೂರನೆಯದು ನೈಋತ್ಯಕ್ಕೂ ವಲಸೆ ಹೋದವು. ಪೂರ್ವಕ್ಕೆ ಹೋದ ಕವಲು ಮುಂದೆ ಚೀನ ಹಾಗೂ ಇತರ ಮಂಗೋಲಿಯ ಜಾತಿಯ ಕುದುರೆಗಳಿಗೆ ಜನ್ಮನೀಡಿತು. ಪಶ್ಚಿಮದ ಕವಲು ಇಡೀ ಯೂರೋಪ್ ಖಂಡವನ್ನು ವ್ಯಾಪಿಸಿ ಅಲ್ಲಿ ಹಲವಾರು ಬಗೆಯ ಕುದುರೆ ಜಾತಿಗಳು ರೂಪುಗೊಂಡವು. ನೈಋತ್ಯದ ಕವಲು ಏಷ್ಯ ಮೈನರ್, ಇರಾನ್, ಭಾರತ, ಅರೇಬಿಯ, ಆಫ್ರಿಕ-ಈ ವಲಯಗಳಲ್ಲಿ ಕುದುರೆಯ ನಾನಾ ತಳಿಗಳ ಜನ್ಮಕ್ಕೆ ಕಾರಣವಾಯಿತು.

ಮುಂದೆ ಮಾನವನ ಉಗಮವಾದ ಮೇಲೆ ನಾಗರಿಕತೆ ವರ್ಧಿಸಿದಂತೆ ಕುದುರೆ ಆತನ ನಿಕಟ ಸಹವರ್ತಿಯಾಗಿ ವಿಕಾಸಗೊಂಡಿತು. ಅಂದು ಸ್ವಚ್ಛಂದಜೀವಿಯಾಗಿ ಅಲೆಯುತ್ತಿದ್ದ ಕುದುರೆಗಳು ಬಹುಶಃ ಇಂದು ಎಲ್ಲಿಯೂ ಇಲ್ಲ. ಪಳಗಿದ ಆಧುನಿಕ ಕುದುರೆ ಹವೆಯ ತೀವ್ರ ಏರಿಳಿತಗಳನ್ನು ನಿರೋಧಿಸಿ ಯಾವ ಸನ್ನಿವೇಶಕ್ಕೂ ಹೊಂದಿಕೊಳ್ಳಬಲ್ಲುದಾದ್ದರಿಂದ ಅದನ್ನು ಮನುಷ್ಯಾವೃತ ಪ್ರಪಂಚವಿಡೀ ನೋಡಬಹುದು.

Similar questions