India Languages, asked by Newt47, 5 months ago

essay on ಕರ್ತವ್ಯಪಾಲನೆ ( in Kannada ) ​

Answers

Answered by Anonymous
11

ಕರ್ತವ್ಯ ಎಂದರೆ ಸಾಮಾನ್ಯವಾಗಿ ಅಥವಾ ನಿರ್ದಿಷ್ಟ ಸಂದರ್ಭಗಳು ಉದ್ಭವಿಸಿದರೆ ಯಾವುದೋ ಕ್ರಿಯೆಯನ್ನು ನೆರವೇರಿಸಲು ಬದ್ಧತೆ ಅಥವಾ ನಿರೀಕ್ಷೆ. ಕರ್ತವ್ಯವು ನೈತಿಕತೆ ಅಥವಾ ನೀತಿಶಾಸ್ತ್ರದ ವ್ಯವಸ್ಥೆಯಿಂದ ಉದ್ಭವಿಸಬಹುದು, ವಿಶೇಷವಾಗಿ ಗೌರವ ಸಂಸ್ಕೃತಿಯಲ್ಲಿ. ಅನೇಕ ಕರ್ತವ್ಯಗಳು ಕಾನೂನಿನಿಂದ ಸೃಷ್ಟಿಯಾಗಿ ಅದರ ಮೇಲೆ ಆಧಾರಿತವಾಗಿರುತ್ತವೆ ಮತ್ತು ಅವನ್ನು ನೆರವೇರಿಸದಿರುವುದಕ್ಕೆ ಕ್ರೋಢೀಕೃತ ಶಿಕ್ಷೆ ಅಥವಾ ಬಾಧ್ಯತೆಯನ್ನು ಒಳಗೊಳ್ಳುತ್ತವೆ. ಒಬ್ಬರ ಕರ್ತವ್ಯವನ್ನು ನಿರ್ವಹಿಸಲು ಸ್ವಲ್ಪ ಸ್ವಾರ್ಥದ ತ್ಯಾಗ ಅಗತ್ಯವಾಗಬಹುದು.

ಒಬ್ಬ ಮುಂಚಿನ ರೋಮನ್ ತತ್ವಶಾಸ್ತ್ರಜ್ಞನಾದ ಸಿಸರೊ ಕರ್ತವ್ಯವನ್ನು ತನ್ನ ಗ್ರಂಥ "ಆನ್ ಡ್ಯೂಟಿ"ಯಲ್ಲಿ ಚರ್ಚಿಸುತ್ತಾನೆ ಮತ್ತು ಕರ್ತವ್ಯಗಳು ನಾಲ್ಕು ವಿಭಿನ್ನ ಮೂಲಗಳಿಂದ ಬರಬಹುದು ಎಂದು ಸೂಚಿಸುತ್ತಾನೆ:[೧] ಮಾನವನಾಗಿರುವ ಪರಿಣಾಮವಾಗಿ; ಜೀವನದಲ್ಲಿ ಒಬ್ಬರ ನಿರ್ದಿಷ್ಟ ಸ್ಥಳದ ಪರಿಣಾಮವಾಗಿ (ಒಬ್ಬರ ಕುಟುಂಬ, ಒಬ್ಬರ ದೇಶ, ಒಬ್ಬರ ವೃತ್ತಿ); ಒಬ್ಬರ ನಡತೆಯ ಪರಿಣಾಮವಾಗಿ; ತಮಗಾಗಿ ತಮ್ಮ ಸ್ವಂತ ನೈತಿಕ ನಿರೀಕ್ಷೆಗಳ ಪರಿಣಾಮವಾಗಿ. ಕಾನೂನು ಅಥವಾ ಸಂಸ್ಕೃತಿಯಿಂದ ವಿಧಿಸಲ್ಪಟ್ಟ ನಿರ್ದಿಷ್ಟ ಕರ್ತವ್ಯಗಳು ಗಣನೀಯವಾಗಿ ಬದಲಾಗುತ್ತವೆ, ಕಾನೂನುವ್ಯಾಪ್ತಿ, ಧರ್ಮ, ಮತ್ತು ಸಾಮಾಜಿಕ ರೂಢಿಗಳ ಮೇಲೆ ಅವಲಂಬಿಸಿ.

ಹಲವುವೇಳೆ ಕರ್ತವ್ಯವು ಒಬ್ಬರ ದೇಶಕ್ಕೆ (ದೇಶಭಕ್ತಿ), ಅಥವಾ ಒಬ್ಬರ ತಾಯಿನಾಡು ಅಥವಾ ಸಮುದಾಯಕ್ಕೆ ಋಣಿಯಾಗಿರುವುದು ಎಂದು ಗ್ರಹಿಸಲಾಗುತ್ತದೆ. ನಾಗರಿಕ ಕರ್ತವ್ಯಗಳು ಇವುಗಳನ್ನು ಒಳಗೊಳ್ಳಬಹುದು: ಕಾನೂನನ್ನು ಪಾಲಿಸುವುದು; ತೆರಿಗೆಗಳನ್ನು ಕಟ್ಟುವುದು; ಅಗತ್ಯ ಬಿದ್ದರೆ ಸಾಮಾನ್ಯ ರಕ್ಷಣೆಯನ್ನು ಪ್ರಸ್ತುತಪಡಿಸುವುದು; ಮತ ಚಲಾಯಿಸಲು ದಾಖಲು ಮಾಡುವುದು, ಮತ್ತು ಎಲ್ಲ ಚುನಾವಣೆಗಳು ಹಾಗೂ ಜನಮತಸಂಗ್ರಹಗಳಲ್ಲಿ ಮತ ಚಲಾಯಿಸುವುದು (ಧಾರ್ಮಿಕ ಆಕ್ಷೇಪಣೆ, ದೇಶದಲ್ಲಿರದಿರುವುದು, ಅಥವಾ ಮತದಾನದ ದಿನ ಕಾಯಿಲೆಯಂತಹ ಸಮಂಜಸವಾದ ನೆಪವಿರದಿದ್ದಲ್ಲಿ); ಕರೆದರೆ, ನ್ಯಾಯದರ್ಶಿ ಮಂಡಲಿಯಲ್ಲಿ ಕಾರ್ಯನಿರ್ವಹಿಸುವುದು; ಅಪಘಾತಗಳು ಮತ್ತು ಬೀದಿ ಅಪರಾಧಗಳ ಬಲಿಪಶುಗಳ ನೆರವಿಗೆ ಹೋಗುವುದು ಮತ್ತು ಆಮೇಲೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವುದು; ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಾಂಕ್ರಾಮಿಕ ರೋಗಗಳು ಅಥವಾ ಜಾಡ್ಯವನ್ನು ವರದಿ ಮಾಡುವುದು;

ಸಾರ್ವಜನಿಕ ಸೇವೆಗಳಲ್ಲಿ ಸ್ವಇಚ್ಛೆಯಿಂದ ಕೆಲಸಮಾಡುವುದು (ಉದಾ. ಜೀವರಕ್ಷಕ ಕವಾಯತುಗಳು); ನಿಯತಕಾಲಿಕವಾಗಿ ಅಥವಾ ಅಗತ್ಯಬಿದ್ದಾಗ ರಕ್ತದಾನ ಮಾಡುವುದು; ಅನ್ಯಾಯದ ಸರ್ಕಾರದ ವಿರುದ್ಧ ಕ್ರಾಂತಿಯ ಕರ್ತವ್ಯ.

ಬಹುತೇಕ ಸಂಸ್ಕೃತಿಗಳಲ್ಲಿ, ಮಕ್ಕಳು ತಮ್ಮ ಕುಟುಂಬಗಳ ಸಂಬಂಧವಾಗಿ ಕರ್ತವ್ಯಗಳನ್ನು ತೆಗೆದುಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ. ಇದು ಸಮುದಾಯದ ಕಣ್ಣುಗಳಲ್ಲಿ ಕುಟುಂಬದ ಗೌರವವನ್ನು ಎತ್ತಿಹಿಡಿಯುವ ರೀತಿಯಲ್ಲಿ ವರ್ತಿಸುವುದು, ಕುಟುಂಬದ ಸ್ಥಾನಮಾನಕ್ಕೆ ಪ್ರಯೋಜನವಾಗುವ ನಿಶ್ಚಿತ ಮದುವೆಯಾಗುವುದು, ಅಥವಾ ಕಾಯಿಲೆಪೀಡಿತ ಸಂಬಂಧಿಕರ ಆರೈಕೆ ಮಾಡುವ ರೂಪವನ್ನು ತೆಗೆದುಕೊಳ್ಳಬಹುದು.

thankyou

Similar questions