India Languages, asked by MTMWORLD, 4 months ago

essay on jala pravaha in Kannada​

Answers

Answered by ayushromanempire2345
5

ಪ್ರಹಾವವೆಂಬುದು ಪ್ರತಿವರ್ಷ ಸಹಜವಾಗಿ ಸಂಭವಿಸುವ ನೈಸರ್ಗಿಕ ವಿದ್ಯಮಾನವೆಂಬುದು ನಿಜ. ಆದರೆ ಅಸ್ಸಾಮಿನ ಬ್ರಹ್ಮಪುತ್ರಾ ನದಿಯಲ್ಲಿ ಪ್ರತಿವರ್ಷ ಸಂಭವಿಸುವ ಪ್ರವಾಹದ ಬಗ್ಗೆ ಸರ್ಕಾರ ತೋರಿಸುವ ಪ್ರತಿಸ್ಪಂದನೆ ಮಾತ್ರ ಖಂಡಿತಾ ಸಹಜವಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರವೇ ಹೇಳುವಂತೆ ಈ ವರ್ಷ ಪ್ರವಾಹಕ್ಕೆ ಸಿಲುಕಿ ೭೨ ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ೧೨ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅಸ್ಸಾಂ ರಾಜ್ಯದ ನೈಸರ್ಗಿಕ ಪ್ರಕೋಪ ನಿರ್ವಹಣಾ ಪ್ರಾಧಿಕಾರವು ಜುಲೈ ೧೦ರಂದು ನೀಡಿರುವ ವರದಿಯ ಪ್ರಕಾರ ೨೦ ಜಿಲ್ಲೆಗಳ ೨೦೫೩ ಹಳ್ಳಿಗಳ ಅಂದಾಜು ಒಂದು ಲಕ್ಷ ಹೆಕ್ಟೇರ್ ಕೃಷಿಭೂಮಿಯು ಜಲಾವೃತವಾಗಿವೆ. ಮಾನವ ಮಧ್ಯಪ್ರವೇಶಗಳ ಕಾರಣದಿಂದಾಗಿ ಒಂದು ಪ್ರಕೃತಿ ವಿಕೋಪವು ಉಂಟುಮಾಡುತ್ತಿರುವ ಅನಾಹುತಗಳ ಪ್ರಮಾಣವನ್ನು ನೋಡಿದಾಗ ಈಗಲಾದರೂ ನಮ್ಮ ಗಮನವನ್ನು ಪ್ರವಾಹ ರಕ್ಷಣೆಯ ಕ್ರಮಗಳಿಂದ ಪ್ರವಾಹ ನಿರ್ವಹಣೆಯ ಕ್ರಮಗಳತ್ತ ಹರಿಸಬೇಕಿದೆಯೆಂಬುದು ಅರಿವಾಗುತ್ತದೆ.

ಅಸ್ಸಾಂನಲ್ಲಿ, ಆ ವಿಷಯಕ್ಕೆ ಬಂದರೆ ಬಿಹಾರದಲ್ಲಿ ಕೂಡಾ, ಸಂಭವಿಸುವ ಪ್ರವಾಹವು ಇದೀಗ ರಾಜಸ್ಥಾನ ಮತ್ತು ಗುಜರಾತುಗಳಲ್ಲಿ ಸಂಭವಿಸುತ್ತಿರುವ ಪ್ರವಾಹಕ್ಕಿಂತ ಸಂಪೂರ್ಣ ಭಿನ್ನವಾದ ಸ್ವರೂಪವನ್ನು ಹೊಂದಿದೆ. ರಾಜಸ್ಥಾನ ಮತ್ತು ಗುಜರಾತುಗಳಲ್ಲಿ ತೀವ್ರವಾದ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಪ್ರವಾಹವು ಸಂಭವಿಸಿದೆ. ಅಲ್ಲಿ ಪ್ರಾಮಾಣಿಕವಾದ ಸುರಕ್ಷಾ ಮತ್ತು ಪರಿಹಾರ ಕ್ರಮಗಳು ಅತ್ಯಗತ್ಯವಾಗಿವೆ. ಆದರೆ ಅಸ್ಸಾಂ ಮತ್ತು ಬಿಹಾರಗಳಲ್ಲಿ ಪರಿಸ್ಥಿತಿಯ ನಿರ್ವಹಣೆಗೆ ವ್ಯವಸ್ಥಿತ ರಚನಾತ್ಮಕ ಮಧ್ಯಪ್ರವೇಶ, ಸಾಂಸ್ಥಿಕ ಸುಧಾರಣೆಗಳು ಮತ್ತು ನದಿ ತೀರದ ಜನತೆಯಲ್ಲಿ ಪ್ರವಾಹವನ್ನೆದುರಿಸಲು ಬೇಕಾದ ಸ್ಥೈರ್ಯವನ್ನು ಬೆಳೆಸಲು ಬೇಕಾದ ಸಮಗ್ರವಾದ ಕ್ರಮ, ಇತ್ಯಾದಿಗಳ ಅಗತ್ಯವಿದೆ. ಉತ್ತರಪ್ರದೇಶದ ಮಹಾರಾಜಗಂಜ್‌ನಿಂದ ಹಿಡಿದು ಅಸ್ಸಾಮಿನ ಬರಾಕ್ ಕಣಿವೆಯ ಕರೀಂಗಂಜ್ ನವರೆಗೆ ಹರಡಿಕೊಂಡಿರುವ ಈ ವಿಶಾಲ ಮೆಕ್ಕಲು ಮಣ್ಣಿನ ಬಯಲುಪ್ರದೇಶದವು ಪದೇಪದೇ ಹಲವಾರು ಬಗೆಯ ಜಲಗಂಡಗಳಿಗೆ ಗುರಿಯಾಗುತ್ತಾ ಬಂದಿವೆ. ಉತ್ತರಪ್ರದೇಶ, ಬಿಹಾರ, ಪ.ಬಂಗಾಳ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪ್ರದೇಶವು ಅತ್ಯಧಿಕ ಜನಸಾಂದ್ರತೆಯಿಂದಲೂ ಕೂಡಿದೆ. ಈ ಪ್ರದೇಶದ ಒಟ್ಟಾರೆ ವಿಸ್ತೀರ್ಣ ದೇಶದ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದ ಕೇವಲ ಶೇ.೧೭ರಷ್ಟು ಮಾತ್ರವಾಗುತ್ತದೆ. ಆದರೆ ದೇಶದ ಪ್ರವಾಹ ಪೀಡಿತ ಪ್ರದೇಶಗಳ ಒಟ್ಟು ವಿಸ್ತೀರ್ಣದ ಶೇ.೪೩-೫೨ರಷ್ಟು ಭೂಭಾಗ ಈ ಪ್ರದೇಶವೊಂದರಲ್ಲೇ ಇದೆ.

Similar questions