India Languages, asked by preetdullat9451, 11 months ago

Essay on janapada jeevana in Kannada

Answers

Answered by blossomag
0

Explanation:

ಹುಟ್ಟೂರು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ, ಸಾರಿಗೆ ಸೌಕರ್ಯವನ್ನು ಕಂಡರಿಯದ ಊರು ಇವರದು. ೧೯೧೫ ಫೆಬ್ರವರಿ ೧೧ ರಂದು ದೊಡ್ಡ ಮನೆ ಕುಟುಂಬದಲ್ಲಿ ಜನಿಸಿದರು. ಇವರಿಗೆ ಮೂರು ವಯಸ್ಸಿದ್ದಾಗ ತಾಯಿಯನ್ನು ಕಳೆದುಕೊಂಡರು. ಅಜ್ಜಿ ಮತ್ತು ತಂದೆಯ ನೆರಳಿನಲ್ಲಿ ಬೆಳೆದವರು. ಅವರ ತಂದೆಗೆ ಮಗ ಓದಿ ಅಮಲ್ದಾರನಾಗಬೇಕೆಂಬ ಆಸೆ ಇತ್ತು. ಅದನ್ನು ಮಗನು ನೆರವೇರಿಸಿದನು. ಗೌಡರು ಬಿ.ಎಸ್.ಸಿ. ಮತ್ತು ಎಲ್.ಎಲ್.ಬಿ. ಪದವಿಯನ್ನು ೧೯೪೧ರಲ್ಲಿ ಪಡೆದರು.

ಮೈಸೂರು ಸಿವಿಲ್ ಸರ್ವೀಸ್ ಸ್ಪರ್ಧಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆವಿನ್ಯೂ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ಇವರು ಐ.ಎ.ಎಸ್. ಅಧಿಕಾರಿಯಾಗಿ ಶಿವಮೊಗ್ಗ, ಚಿಕ್ಕ ಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ೧೯೬೯ರಲ್ಲಿ ರಾಜ್ಯದ ಲೇಬರ್ ಕಮೀಷನರ್ ಆಗಿ ಬೆಂಗಳೂರು ನಲ್ಲಿಯೇ ನೆಲೆಸಿದರು. ೧೯೭೯ರಲ್ಲಿ ಇವರು ಬಡ ವಿದ್ಯಾವಂತ ಯುವಕರಿಗೆ ಹಲವು ಇಲಾಖೆಗಳಲ್ಲಿ ಉದ್ಯೋಗ ಕೊಡಿಸಿದರು.

೧೯೭೯ರಲ್ಲಿ ಇವರು ನಿವೃತ್ತಿ ಹೊಂದಿದರು. ಶ್ರೀ ನಾಗೇಗೌಡರು ಸುಮಾರು ೫೦ ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಉತ್ತಮವಾದವು ಇವರ ಮೊದಲ ಕೃತಿ 'ನಾನಾಗುವೆ ಗೀಜನ ಹಕ್ಕಿ' ಮತ್ತು ಕಥೆ-ವ್ಯಥೆ, ಭೂಮಿಗೆ ಬಂದ ಗಂಧರ್ವ ಬೆಟ್ಟದಿಂದ ಬಟ್ಟಲಿಗೆ, ಪ್ರವಾಸಿ ಕಂಡ ಇಂಡಿಯಾ, ಸರೋಜಿನಿದೇವಿ. ನಾಗೇಗೌಡರ ಕನ್ನಡ ಸಾಹಿತ್ಯ ಮತ್ತು ಅವರ ಕೃತಿಗಳನ್ನು ಕುವೆಂಪುರವರು ಬಹಳವಾಗಿ ಮೆಚ್ಚಿಕೊಂಡಿದ್ದರು.

'ನಾಗಸಿರಿ' ಎಂಬ ಅವರ ಸುಮಾರು ೨೦೦೦ ಪುಟಗಳ ಆತ್ಮ ಚರಿತ್ರೆಯನ್ನು ಡಾ: ಜಿ.ಎಸ್. ಶಿವರುದ್ರಪ್ಪನವರು ಬಹಳವಾಗಿ ಮೆಚ್ಚಿ ಕೊಂಡಿದ್ದರು. ೧೯೭೯ರಲ್ಲಿ ಜಾನಪದ ಲೋಕವನ್ನು ಸ್ಥಾಪಿಸಿದರು. ಶ್ರೀ ನಾಗೇಗೌಡರು, ಬೆಂಗಳೂರು - ಮೈಸೂರು ಮತ್ತು ರಾಮ ನಗರದ ಹೆದ್ದಾರಿ ಬಳಿ ಇದನ್ನು ಸುಮಾರು ೧೫ ಎಕರೆಯಲ್ಲಿ ಸ್ಥಾಪಿಸಿದರು. ಜಾನಪದ ಲೋಕ ಗೌಡರ ಕನಸಿನ, ಕಲ್ಪನೆಯ ಕೂಸಾಗಿದೆ.

Similar questions