Art, asked by ABDULRAJAK, 1 year ago

Essay on janapada sahitya in kannada language

Answers

Answered by chippywite2004
8
ಕಿಳ್ಳೆಕ್ಯಾತರು ಗೊಂಬೆರಾಮರು ಹಾಗೂ ಚಿತ್ರಮರಾಟರು ಎಂಬ ಹೆಸರಿನಿಂದ ತೊಗಲುಗೊಂಬೆಯಾಟ ಆಡಿಸುವವರನ್ನು ಗುರುತಿಸಬಹುದು. ಗೊಂಬೆಯಾಟದವರನ್ನು ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಕಟುಬೂಜ್ಯಾತ, ಕೋಲುಕ್ಯಾತ, ಅಸ್ತ್ರೀಕ್ಯಾತ, ಕಾಲಿಕ್ಯಾತ, ಬುಂಡೇಕ್ಯಾತ ಹೀಗೆ ಅನೇಕ ಹೆಸರುಗಳಿಂದ ಕರೆಯುವರು. ಇವರು ರಾಮಾಯಣದಲ್ಲಿ ಗುಹನ ವಂಶಕ್ಕೆ ಸೇರಿದವರೆಂದೂ ಗೊಂಬೆಯಾಟ ಕುಲಕಸುಬಾಗಿ ಇವರಲ್ಲಿ ಉಳಿಯಲು ಶ್ರೀ ರಾಮನ ಶಾಪವೇ ಕಾರಣವೆಂದು ದಂತ ಕಥೆಯನ್ನು ಹೇಳುವರು. ಕಿಳ್ಳೆಕ್ಯಾತರ ಬಗೆಗಿನ ಕಥೆಯೊಂದು ಈ ರೀತಿ ಇದೆ. "ಕತ್ತಾರೆ ಕಾಳಾಚಾರಿ ಎಂಬ ಮರಾಟಿ ವ್ಯಕ್ತಿ ವ್ಯವಸಾಯ ಕುಟುಂಬದ ಒಬ್ಬ ಹೆಂಗಸಿನೊಂದಿಗೆ ಗೌಪ್ಯ ಸಂಬಂಧವಿಟ್ಟುಕೊಂಡಿದ್ದನಂತೆ. ಈ ಗುಪ್ತ ಸಂಬಂಧ ಬಯಲಾದಾಗ ಆ ಹೆಣ್ಣಿನ ಮನೆಯವರು ಅವಳನ್ನು ಮಕ್ಕಳು ಸಮೇತವಾಗಿ ಹೊರಹಾಕಿದರು. ಆಗ ಕಾಳಾಚಾರಿ ತೊಗಲುಗೊಂಬೆಗಳನ್ನು ಮಾಡಿಕೊಟ್ಟು ಅವರ ಜೀವನ ನಡೆಸಲು ಸಹಾಯ ಮಾಡಿದ. ಅವರೇ ಇಂದಿನ ಕಿಳ್ಳೆಕ್ಯಾತ ಜನಾಂಗದವರು". ತೊಗಲುಗೊಂಬೆಯಾಟದ ಹಿಂದೆ ಅನೇಕ ಉದ್ದೇಶಗಳಿವೆ. ಮಳೆ ಬರದೆ ಹೋದಾಗ ಗೊಂಬೆಯಾಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ತೊಗಲುಗೊಂಬೆಯಾಟ ಆಡಿಸುವುದರಿಂದ ದನಕರುಗಳಿಗೆ ಬರುವ ರೋಗದ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಜಾತ್ರೆ, ಉತ್ಸವಗಳಲ್ಲಿ ಕೂಡ ಆಟವು ನೆರವೇರುವುದು.

ತೊಗಲುಗೊಂಬೆಯಾಟದ ಪ್ರಾಚಿನತೆ

ಈ ಕಲೆಯು ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲ್ಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀ ಪಟ್ಟಣ, ಕೋರಂಗಿ ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ. ಕೆಲವರು ಗೊಂಬೆಯಾಟದ ಪ್ರಾಚಿನತೆಯನ್ನು ಭಗವದ್ಗೀತೆಯ ಕಾಲಕ್ಕೆ ಎಂದರೆ ಕಿ.ಪೂ.೩೦೦೦ ವರ್ಷಗಳ ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ ಎಂಬುದಾಗಿ ತಿಳಿಸುತ್ತಾರೆ. ಅಲ್ಲದೆ ತೊಗಲುಗೊಂಬೆಯಾಟವನ್ನು 'ನೆರಳು ಗೊಂಬೆಯಾಟ' ಎಂಬುದಾಗಿ ಕರೆದು ಸಂಸ್ಕೃತದ 'ಮಹಾನಾಟಕ'ವನ್ನು ನೆರಳು ಗೊಂಬೆಯಾಟಕ್ಕಾಗಿಯೇ ಬರೆದುದು ಎಂದೂ ಅಭಿಪ್ರಾಯ ಪಡಲಾಗಿದೆ.

ತೊಗಲುಗೊಂಬೆಯ ರಚನೆ

ಗೊಂಬೆಯ ರಚನೆಗೆ ಜಿಂಕೆ ಅಥವಾ ಆಡಿನ ಚರ್ಮವನ್ನು ಉಪಯೋಗಿಸುತ್ತಾರೆ. ಕೆಲವೊಂದು ಬಾರಿ ದೇವತಾ ಪಾತ್ರಗಳಿಗೆ ಮೀಸಲಾದ ರಾಮಾಯಣ, ಮಹಾಭಾರತ ಪ್ರಸಂಗದ ಗೊಂಬೆಗಳನ್ನು ಜಿಂಕೆ ಚರ್ಮದಿಂದಲೇ ಮಾಡಬೇಕೆಂಬ ನಿಯಮವಿದೆ. ಅನಂತರ ಅದರ ಮೇಲೆ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸೀರೆಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡುತ್ತಾರೆ. ಅನಂತರ ಹದವರಿತ ಬಣ್ಣವನ್ನು ಹಾಕುತ್ತಾರೆ. ಹೆಚ್ಚಾಗಿ ದೇವತಾ ಪಾತ್ರದ ಗೊಂಬೆಗಳಿಗೆ ನೀಲಿ, ನಸುಕೆಂಪು, ಹಳದಿ ಬಣ್ಣವನ್ನೂ ಉಪಯೋಗಿಸುತ್ತಾರೆ. ಬೇರೆ ಬೇರೆ ರೀತಿಯ ಗಿಡಮೂಲಿಕೆಗಳಿಂದ ಸ್ವತಃ ಅವರೇ ಬಣ್ಣವನ್ನು ತಯಾರಿಸಿಕೊಳ್ಳುತ್ತಾರೆ. ಹೀಗಾಗಿ ಬಹುಕಾಲದವರೆಗೂ ಬಣ್ಣ ಮಸುಕಾಗದಂತೆ ಈ ಗೊಂಬೆಗಳು ಉಳಿಯುತ್ತವೆ. ಗೊಂಬೆಗಳು ನೇರವಾಗಿ ನಿಂತುಕೊಳ್ಳಲು ಅನುವಾಗುವಂತೆ ಬಿದಿರಿನ ಅಥವಾ ಲಾಳದ ಕಡ್ಡಿಗಳನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆ ಗೊಂಬೆಯನ್ನು ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಹಾಕುತ್ತಾರೆ. ಗೊಂಬೆಯನ್ನು ಹಿಡಿದು ಕುಣಿಸಲು ಅನುವಾಗುವಂತೆ ಕೆಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ. ಇದು ಮೂಲದ ಗೊಂಬೆಗಳ ರೂಪವಾಗಿರುವುದು. ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಅದಕ್ಕೆಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ. ಇದಕ್ಕೆ 'ಬಾದಲಿ' ಎಂದು ಹೆಸರು. ಇದು ಅವರಿಗೆ ಪೂಜ್ಯ ವಸ್ತುವಾಗಿರುವುದು. ಆ ವೃತ್ತಿಯನ್ನು ಕೈಬಿಟ್ಟವರನೇಕರು ಆ ಗೊಂಬೆಗಳನ್ನು ಮನೆಯಲ್ಲಿ ಹಾಗೆಯೇ ಬಿಡಬಾರದೆಂದು ಅವನ್ನು ನೀರಲ್ಲಿ ತೇಲಿ ಬಿಡುವ ಕ್ರಮವೂ ಇದೆ. ಕರ್ನಾಟಕದಲ್ಲಿ ಮೂರು ಜಾತಿಯ ಗೊಂಬೆಗಳು ಕಂಡು ಬರುತ್ತವೆ. ಕೈಕಾಲುಗಳ ಚಲನೆ ಇಲ್ಲದ ಆದರೆ ಸುಂದರ ಹಾಗೂ ಕಲಾತ್ಮಕವಾದ ಗೊಂಬೆಗಳು. ಅವು ಬಹುತೇಕ ಉತ್ತರ ಕರ್ನಾಟಕದವು. ಕೈಕಾಲುಗಳ ಚಲನೆಯುಳ್ಳ ಚುರುಕಾಗಿ ಆಡಿಸಬಲ್ಲ ಗೊಂಬೆಗಳು ದಕ್ಷಿಣ ಕರ್ನಾಟಕದ ಗೊಂಬೆಗಳು. ಅವೆರಡೂ ಗೊಂಬೆಗಳು ಒಂದರಿಂದ ಮೂರು ಅಡಿ ಎತ್ತರವಿರುತ್ತವೆ. ಆಂಧ್ರ ಭಾಗದ ಗೊಂಬೆಗಳು ಚಲನೆಯುಳ್ಳ ಅಂದರೆ ಕೀಲುಗಳುಳ್ಳ ಗೊಂಬೆಗಳಾಗಿದ್ದು ಆಳೆತ್ತರ ಇರುತ್ತವೆ. ಅವುಗಳನ್ನ್ನು ನಿಂತೇ ಆಡಿಸಬೇಕು.

ಕಥಾವಸ್ತುವಿಗೆ ಪೂರಕ ಗೊಂಬೆಗಳು

ಗೊಂಬೆಯಾಟಕ್ಕೆ ಬಳಸುವಂತಹ ಕಥಾವಸ್ತು ಬಯಲಾಟದಂತೆ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಭೀಮ, ದುರ್ಯೋಧನ, ರಾವಣರಂತಹ ಪಾತ್ರಗಳು ಹೆಚ್ಚು ಕೆಂಪು, ಕಪ್ಪು ಬಣ್ಣಗಳಿಂದ ಕೂಡಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳಲ್ಲಿ ಸಾಮಾನ್ಯವಾಗಿ ಎರಡು ವಿಧ. ರಾಣಿಯರಿಗೆ ಉಚಿತವಾದ ವೇಷಭೂಷಣಗಳಿಂದ ಕೂಡಿದ ಗೊಂಬೆಗಳು ಹಾಗೂ ಸಾಮಾನ್ಯ ವರ್ಗದ ಗೊಂಬೆಗಳು. ಇವನ್ನು ಬಿಟ್ಟರೆ ರಾಕ್ಷಸೀ ವರ್ಗದ ಹಿಡಿಂಬೆ, ಶೂರ್ಪನಖಿಯರಂಥ ಗೊಂಬೆಗಳು ಪ್ರತ್ಯೇಕವಾಗಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳು ಹೆಚ್ಚಾಗಿ ನೋಡಲು ಉದ್ದನೆಯ ಮೂಗು, ಅಗಲವಾದ ಕಣ್ಣು, ಜೊತೆಗೆ ಬೈತಲೆ ತೆಗೆದು ಕಟ್ಟಿದ ತುರುಬು, ಅದಕ್ಕೆ ಹೂವು ಮುಡಿಸಿರುತ್ತಾರೆ. ಬೈತಲೆಯಿಂದ ಹಣೆಯ ಮೇಲೆ ಬಿಟ್ಟ ಆಭರಣ, ಕಿವಿಗೆ ಆಭರಣ, ಮೂಗಿಗೆ ಮೂಗುತಿ ಹಾಗೂ ಬುಲಾಕು, ಕೈಬಳೆ ಇತ್ಯಾದಿಗಳಿರುತ್ತವೆ.



.
.



this might help

gagand6588pa7snr: u made made my day thank uuuu a lot
Similar questions