essay on kaigarike in kannada
Answers
Answered by
15
ಈ ಸಂಸ್ಥೆಯನ್ನು 30.12.1961 ರಲ್ಲಿ ನೋಂದಣಿ ಮಾಡಲಾಗಿದೆ. ಇದರ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರುತ್ತದೆ. ೧೧೦ ಪ್ರಾಥಮಿಕ ತೆಂಗಿನ ನಾರಿನ ಸಹಕಾರ ಸಂಘಗಳು ಸದಸ್ಯತ್ವವನ್ನು ಹೊಂದಿರುತ್ತದೆ. ಈ ಮಹಾಮಂಡಳವು ತೆಂಗಿನ ನಾರಿನ ಉತ್ಪಾದನೆ, ಉತ್ಪಾದಿಸಲಾದ ತೆಂಗಿನ ನಾರಿನ ಬಳಕೆಗೆ ಅಗತ್ಯವಿರುವ ಸಿದ್ದ ವಸ್ತುಗಳನ್ನು ತಯಾರಿಸುವುದು, ಸಂಸ್ಕರಣೆ, ಮಾರಾಟ ಹಾಗೂ ಉದ್ಯಮವನ್ನು ವಾಣಿಜ್ಯ ಆಧಾರದಲ್ಲಿ ಸಂಘಟಿತಗೊಳಿಸುವುದು ಮುಖ್ಯ ಉದ್ದೇಶವಾಗಿದೆ.
Answered by
0
Explanation:
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ.[೧] ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಾಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಢಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅತ್ಯವಶ್ಯಕ.
#SPJ2
Similar questions