India Languages, asked by layna5977, 1 year ago

Essay on kaveri river in kannada

Answers

Answered by seju221
11
heya frnd
here is ur answer

ಗಣೇಶ ಹಬ್ಬದಂದು (ಸೆ5) ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ನಂತರ, ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಇದರಿಂದ, ಮಹಾದಾಯಿ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಪರವಾಗಿ ತೀರ್ಪು ಬರಬಹುದು ಅನ್ನೋ ಆಶಾವಾದವೇ ಇಟ್ಟುಕೊಳ್ಳದಂತಾಗಿದೆ. ಪ್ರತೀ ಬಾರಿಯ ತೀರ್ಪಿನಲ್ಲೂ ರಾಜ್ಯಕ್ಕೆ ಹಿನ್ನಡೆ..ಹಿನ್ನಡೆ..

ಇದಕ್ಕೆ ಯಾರನ್ನು ದೂಷಿಸುವುದು? ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ವಕೀಲರೇ, ಅಸಮರ್ಥ ನೀರಾವರಿ ಸಚಿವರೇ, ಸರಕಾರದ ಇಚ್ಛಾಶಕ್ತಿಯ ಕೊರತೆಯೇ, ಏಕಪಕ್ಷೀಯವಾಗಿ ತಮಿಳುನಾಡು ಪರ ನಿಂತಿರುವ ಕಾವೇರಿ ಪ್ರಾಧಿಕಾರವೋ? ಒಟ್ಟಿನಲ್ಲಿ ರಾಜ್ಯಕ್ಕೆ ಮುಖಭಂಗ, ನೀರಿಲ್ಲದಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಬಿಡಬೇಕಾದ ಅನಿವಾರ್ಯತೆ.

ಮೂಲತಃ ಕನ್ನಡತಿಯಾಗಿರುವ ಮತ್ತು ತಾನೆಂದೂ ಕನ್ನಡಿಗರ ಪರವಾಗಿಲ್ಲ ಎಂದು ತಮಿಳರಿಗೆ ರುಜುವಾತು ಪಡಿಸಲೋ ಏನೋ, ಜಯಲಲಿತಾ ಸಿಎಂ ಆಗಿದ್ದ ಅವಧಿಯಲ್ಲೇ ಈ ವಿವಾದ ಕೋರ್ಟ್ ಬಾಗಿಲು ತಟ್ಟುವುದು ಹೆಚ್ಚು.

ಕೋರ್ಟ್ ಮೂಲಕವಾಗಲಿ ಪ್ರಾಧಿಕಾರದ ಮೂಲಕವಾಗಲಿ ತಮ್ಮ ಪಾಲಿಗೆ ಸಂದ ಬೇಕಾಗಿರುವ ನೀರನ್ನು ಹಠಕ್ಕೆ ಬಿದ್ದಾದರೂ ಪಡೆದುಕೊಳ್ಳುವ ಜಯಲಲಿತಾ ಅವರ 'ರಾಜಕೀಯ'ವನ್ನು ಮೆಚ್ಚಲೇಬೇಕು. ಈ ಛಲ ನಮ್ಮವರಿಗೆ ಇಲ್ಲದಾಗಿರುವುದು ಕನ್ನಡಿಗರ ದುರಂತ.

ಶತಮಾನಗಳಿಂದ ನಡೆಯುತ್ತಿರುವ ಕಾವೇರಿ ವಿವಾದದಿಂದಾಗಿ, ಕನ್ನಡಿಗರ ಮತ್ತು ತಮಿಳರ ನಡುವಿನ ಭಾಂದವ್ಯ 'ಇಂಡೋ ಪಾಕ್' ಸಂಬಂಧದಂತಾಗಿದೆ. ಅದೇನೆ ಇರಲಿ ಪೂರ್ವತಯಾರಿ ಮಾಡಿಕೊಂಡು, ಕೋರ್ಟಿನಲ್ಲಿ ಸಮರ್ಥವಾಗಿ ರಾಜ್ಯದ ಸಾಂಬಾ ಬೆಳೆಗಾರರಿಗಾಗಿ ವಾದ ಮಂಡಿಸುವ ತಮಿಳುನಾಡು ಸರಕಾರದ ಬೆನ್ನುತಟ್ಟುವುದು.. ಪ್ರತಿಕೃತಿ ದಹಿಸುವುದು ಮತ್ತು ಬಂದ್ ಕರೆನೀಡುವುದಕ್ಕಿಂತ ಉತ್ತಮ.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದಾಗ ಬೇಡವೆಂದರೂ ಬಿಳಿಗುಂಡ್ಲು ಮಾಪನಕೇಂದ್ರದಿಂದ ಮೆಟ್ಟೂರು ಜಲಾಶಯಕ್ಕೆ ಕಾವೇರಿ ನದಿ ಹರಿದುಹೋಗುತ್ತಿದೆ. ಆದರೆ ನೀರಿನ ಸಮಸ್ಯೆ ಉಂಟಾದಾಗ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು (ಸಿದ್ದರಾಮಯ್ಯನವರಿಗೆ ಮಾತ್ರ ಅನ್ವಯಿಸುವುದಿಲ್ಲ) ಪ್ರಾಧಿಕಾರ/ ತ.ನಾ ಸರಕಾರದ ಜೊತೆ ಪತ್ರವ್ಯವಹಾರ ನಡೆಸುವ ಗೋಜಿಗೂ ಹೋಗದಿದ್ದದ್ದು ವಿಷಾದನೀಯ.

I hope it may help u
ThnQ
pls mark me brainliest
.
.
.

Similar questions