Essay on knowledge in kannada language
Answers
Explanation:
ಜ್ಞಾನವು ಮಾಹಿತಿ, ಸಂಗತಿಗಳು, ನಿರೂಪಣೆ ಅಥವಾ ಶಿಕ್ಷಣ ಮತ್ತು ಅನುಭವದ ಮೂಲಕ ಗಳಿಸಿದ ಮಾಹಿತಿ, ಸಂಗತಿಗಳು, ನಿರೂಪಣೆ ಅಥವಾ ಕೌಶಲ್ಯಗಳ ಬಗ್ಗೆ ಅರಿವು ಮತ್ತು ತಿಳುವಳಿಕೆಯನ್ನು ಗಮನಿಸುವುದು, ಕಂಡುಹಿಡಿಯುವುದು ಅಥವಾ ಕಲಿಯುವುದು. ಇದು ಒಂದು ವಿಷಯದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಗ್ರಹಿಕೆಯನ್ನು ಸೂಚಿಸುತ್ತದೆ. ನಮ್ಮ ಕ್ರಿಯೆಗಳೊಂದಿಗೆ ಜ್ಞಾನವು ಕಾರ್ಯರೂಪಕ್ಕೆ ಬರುತ್ತದೆ. ಜ್ಞಾನವು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯತ್ತ ನಮಗೆ ಮಾರ್ಗದರ್ಶನ ನೀಡುತ್ತದೆ. ಜ್ಞಾನದ ಬೆಳವಣಿಗೆಯೊಂದಿಗೆ ಮಾನವರು ಪ್ರಗತಿ ಹೊಂದುತ್ತಾರೆ. ಮನುಷ್ಯರನ್ನು ಮನಸ್ಸು ಮತ್ತು ಹೃದಯ ಎರಡರಿಂದಲೂ ಆಳಲಾಗುತ್ತದೆ, ಮತ್ತು ಜ್ಞಾನವು ಮನಸ್ಸಿನ ಒಂದು ಭಾಗವಾಗಿದೆ. ಜ್ಞಾನವಿಲ್ಲದಿದ್ದರೆ ಮಾನವರು ಪ್ರಾಣಿಗಳಂತೆ ಒಳ್ಳೆಯವರಾಗುತ್ತಿದ್ದರು. ಜ್ಞಾನದ ಶಕ್ತಿಯನ್ನು ಇತರ ಜೀವಿಗಳು ಮತ್ತು ಪ್ರಕೃತಿಯನ್ನು ನಮ್ಮ ಪ್ರಯೋಜನಗಳಿಗಾಗಿ ಸಬಲೀಕರಣಗೊಳಿಸಲು ಬಳಸುವುದರಿಂದ ನಾವು ಮಾನವರಾಗಿ ಪ್ರಬಲರಾಗಿದ್ದೇವೆ.
ಜ್ಞಾನವನ್ನು ಧನಾತ್ಮಕ ಮತ್ತು negative ಣಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಆದ್ದರಿಂದ ಜ್ಞಾನವು ಒಂದೇ ಸಮಯದಲ್ಲಿ ರಚಿಸಬಹುದು ಮತ್ತು ನಾಶಪಡಿಸಬಹುದು. ಕೆಲವರು ವೈಯಕ್ತಿಕ ಪ್ರಗತಿಗೆ ಹಾಗೂ ಸಮುದಾಯ, ನಗರ, ರಾಜ್ಯ ಮತ್ತು ರಾಷ್ಟ್ರದ ಪ್ರಗತಿಗೆ ಜ್ಞಾನವನ್ನು ಬಳಸುತ್ತಾರೆ. ಆದರೆ ಕೆಲವರು ಇದನ್ನು negative ಣಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು ಅದು ವ್ಯಕ್ತಿಗಳಿಗೆ ಹಾನಿ ಮಾಡುವುದಲ್ಲದೆ ಸಮುದಾಯ, ನಗರ, ರಾಜ್ಯ ಮತ್ತು ಒಟ್ಟಾರೆಯಾಗಿ ರಾಷ್ಟ್ರಕ್ಕೂ ಹಾನಿಯಾಗಬಹುದು.
hope you like it
plz like it ❤
ಆಧುನಿಕ ಶಿಕ್ಷಣದ ಪರಿಣಾಮಗಳು
ವಿದ್ಯಾಮಾತೆ ಸರಸ್ವತಿಗೆ ನಮಿಸುತಾ... ಶಿಕ್ಷಣ!!! ಇಡೀ ವಿಶ್ವವನ್ನು ಬದಲಾಯಿಸಿದ, ಬದಲಾಯಿಸುತ್ತಿರುವ ಮತ್ತು ಬದಲಾಯಿಸುವ ಬಹುದೊಡ್ಡ ಅಸ್ತ್ರವೆಂದರೆ ಹೇಳಬಹುದು. ಹಾಗಾದರೆ ಶಿಕ್ಷಣ ಎಂದರೇನು? ಶಿಕ್ಷಣವನ್ನು ನಮ್ಮ ಸಮಾಜದಲ್ಲಿರುವ ಜನರು ಅನೇಕ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಶಿಕ್ಷಣವೆಂದರೆ ತಿಳುವಳಿಕೆ, ಜ್ಞಾನ ಅಥವಾ ಮಾನಸಿಕ ದೃಢತೆಯನ್ನು ಹೆಚ್ಚಿಸುವ ಒಂದು ಮೂಲ.
ಶಿಕ್ಷಣದ ಜೊತೆಜೊತೆಗೇ ವಿದ್ಯಾರ್ಥಿ ಎಂದರೆ ಯಾರು ಎಂದು ತಿಳಿಯುವುದು ಇಲ್ಲಿ ತುಂಬಾ ಅತ್ಯವಶ್ಯಕವಾಗಿದೆ. "ಮೂಲಶಿಕ್ಷಣವೇ ಗುರುವಿಗೆ ವಂದನೆ" ಎನ್ನುವಂತೆ ಗುರುವನ್ನು ಭಕ್ತಿಪೂರ್ವಕವಾಗಿ, ಅವರ ಪ್ರತಿ ಆದೇಶವನ್ನು ಪಾಲಿಸುವವನೇ ನಿಜವಾದ ವಿದ್ಯಾರ್ಥಿ ಆಗುತ್ತಾನೆ.
ವೇದಗಳ ಕಾಲದಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯಲು ಕಾಡಿಗೆ ಹೋಗಬೇಕಿತ್ತು. ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ಆಶ್ರಯಿಸುತ್ತ ಶಿಕ್ಷಣವನ್ನು ಕಳಿಸುತ್ತಿದ್ದರು. ಈ ರೀತಿಯ ಶಿಕ್ಷಣದ ಪದ್ಧತಿಯನ್ನು ಗುರುಕುಲ ಪದ್ಧತಿಯನ್ನು ಕರೆಯಲಾಗುತ್ತದೆ. ನಂತರ ದ್ವಾಪರಯುಗದಲ್ಲಿ ಬಹುಶಃ ನಮಗೆ ತಿಳಿದಿದೆ ಅರ್ಜುನ, ದುರ್ಯೋದನ, ಏಕಲವ್ಯ ಮತ್ತು ಕರ್ಣ ಯಾವ- ಯಾವ ಪರಿಯಲ್ಲಿ ಶಿಕ್ಷಣವನ್ನು ಕಲಿತರೆಂದು.
ನಂತರ ಈ ಕಲಿಯುಗದಲ್ಲಿ ಬ್ರಿಟಿಷ್ ಆಳ್ವಿಕೆ ನಡೆಯುತ್ತಿರುವಾಗ ಲಾರ್ಡ್ ವಿಲಿಯಂ ಬೆಂಟಿಕ್ ಎನ್ನುವ ಬ್ರಿಟಿಷ್ ಗವರ್ನರ್ ಜನರಲ್ ಆಂಗ್ಲ ಶಿಕ್ಷಣವನ್ನು ಭಾರತದಲ್ಲಿ ಪರಿಚಯಿಸಿದವರು ಎನ್ನುವುದು ನಮಗೆ ಇತಿಹಾಸಗಾರರು ತಿಳಿಸಿದ್ದಾರೆ.
ಇನ್ನು 2000ರಿಂದ -2020ರ ಶಿಕ್ಷಣದ ಪದ್ಧತಿಯ ಬಗ್ಗೆ ತಿಳಿಯಬೇಕು. ಈ ರೀತಿಯ ಶಿಕ್ಷಣv ಪದ್ಧತಿಯಲ್ಲಿ ಒಂದು ಮಗು ಪ್ರಾಥಮಿಕ ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಮುಗಿಸಿ 3 ಅಥವಾ 6 ವರ್ಷಗಳ ಕಾಲ ವ್ಯಾಸಂಗ ಮುಗಿಸಿದರೆ ಅವನು ಪದವೀಧರನಾಗುತ್ತಾನೆ. ಈ ಒಂದು ಬಗೆಯ ಅಥವಾ ಪ್ರಸ್ತುತವಾಗಿ ಪ್ರಚಲಿತದಲ್ಲಿರುವ ಶಿಕ್ಷಣದ ಪದ್ಧತಿಯನ್ನು ನಾವು-ನೀವು "ಆಧುನಿಕ ಶಿಕ್ಷಣ ಪದ್ಧತಿ" ಎಂದು ಕರೆಯಬಹುದು. ಆದರೆ ಒಂದು ಶತಮಾನದ ನಂತರ ವಾಸಿಸುವ 2021ರ ಅವಧಿ ಇತಿಹಾಸವೇ ಆಗಿರುತ್ತದೆ.
ಈ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಅನುಕೂಲ ಹಾಗೂ ಅನಾನುಕೂಲಗಳು ಎರಡು ಕೂಡ ಇವೆ.
• ಆಧುನಿಕ ಶಿಕ್ಷಣ ಪದ್ಧತಿಯ ಅನುಕೂಲಗಳು
* ಆಧುನಿಕ ಶಿಕ್ಷಣ ಪದ್ಧತಿಯನ್ನು ಹಿಂದಿನ ಶಿಕ್ಷಣ ಪದ್ಧತಿ ಗೆ ಹೋಲಿಸಿ ನೋಡಿದರೆ ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ ಜಾತಿ ಅಥವಾ ಮತವನ್ನು ಪರಿಗಣಿಸುವುದಿಲ್ಲ. ಹಿಂದಿನ ಕಾಲದಲ್ಲಿ ಶೂದ್ರರು ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದರು. ಒಂದು ವೇಳೆ ವೇದಗಳ ಪಾಠಣೆ ಮಾಡುವಾಗ ಕೇಳಿದರೆ ಕಿವಿಗಳಿಗೆ ಬಿಸಿ ಎಣ್ಣೆಯನ್ನು ಬಿಡುವ ಶಿಕ್ಷೆ ಕೊಡಲಾಗುತ್ತಿತ್ತು. ಈ ಸಮಾಜ ಪಿಡುಗನ್ನು ಅಸ್ತಿತ್ವದಲ್ಲಿ ಇಲ್ಲದಿರುವಂತೆ ಮಾಡಿದ್ದು ಡಾಕ್ಟರ್ ಬಿ.ಆರ್. ಅಂಬೇಡ್ಕರ್.
* ಹಾಗೆಯೇ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಆದರೆ ಜ್ಯೋತಿಬಾ ಪುಲೆ ಹಾಗೂ ಸಾವಿತ್ರಿ ಬಾಪುಲೆ ಅವರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯುವಂತಾಯಿತು.ಇಂದು ಸಮಾಜದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣುಮಕ್ಕಳ ಕಾರ್ಯ ನಿರ್ವಹಿಸುತ್ತಿದ್ದಾರೆ. "ಹೆಣ್ಣು ಅಬಲೆಯಲ್ಲ ಸಬಲೆ" ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
* ಆಧುನಿಕ ಶಿಕ್ಷಣ ಪದ್ಧತಿಯಿಂದ ಒಂದು ದೇಶದಲ್ಲಿರುವ ಯುವಕರು ವಿದ್ಯಾವಂತ ಹಾಗೂ ಬುದ್ಧಿವಂತರಾಗುತ್ತಾರೆ ಮತ್ತು ತಮ್ಮ ತಮ್ಮ ದೇಶವನ್ನು ಸ್ವಾವಲಂಬಿ ಮಾಡುತ್ತಾ ಅದರ ಏಳಿಗೆಗೆ ಕಾರಣವಾಗುತ್ತಾರೆ. ಆ ದೇಶವನ್ನು ಮುಂದುವರೆದ ದೇಶವನ್ನಾಗಿ ಮಾಡಲು ಸಹಾಯ ಮಾಡುತ್ತಾರೆ.
* ಆಧುನಿಕ ಶಿಕ್ಷಣ ಪದ್ಧತಿ ಇಂದು ನಾವು ಬೇರೆ ಗ್ರಹಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಸೌರಮಂಡಲದ ಶಕ್ತಿಗಳು ಹಾಗೂ ಅದರ ಚಲನವಲನದ ಬಗ್ಗೆ ತಿಳಿಯಬಹುದಾಗಿದೆ. ಮನುಷ್ಯ ಮಂಗಳ ಗ್ರಹಕ್ಕೆ ಹೋಗಿ ಬರಬಹುದು. ಆಧುನಿಕ ಶಿಕ್ಷಣ ಪದ್ಧತಿಯ ಒಂದು ದೊಡ್ಡ ಯಶಸ್ಸಾಗಿದೆ.
* ಇತ್ತೀಚಿಗೆ ತಮಿಳುನಾಡಿನಲ್ಲಿ 92 ವರ್ಷ ಅಜ್ಜಿಯೊಬ್ಬರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಸುದ್ದಿ ನಮಗೆಲ್ಲರನ್ನು ವಿಸ್ಮಯಗೊಳಿಸಿತ್ತು. ಹೌದು ಈ ಶಿಕ್ಷಣ ಪದ್ಧತಿ ಯಾವುದೇ ವಯಸ್ಕರರು ಓದಲು ಸಹಾಯ ಕಲ್ಪಿಸುತ್ತದೆ.
• ಆಧುನಿಕ ಶಿಕ್ಷಣ ಪದ್ಧತಿಯ ಅನಾನುಕೂಲಗಳು.
* ಆಧುನಿಕ ಶಿಕ್ಷಣ ಪದ್ಧತಿಯಯು ಸಂಸ್ಕೃತಿ, ಗುರುಭಕ್ತಿ ನೀತಿಪಾಠ ಈ ರೀತಿಯ ಯಾವುದೇ ಅಮೂಲ್ಯ ಗುಣಗಳನ್ನು ಹಾಗೂ ಅದರ ಸಾರವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಿಲ್ಲ. " ಗುರುವೇ ಮಹಾನ್ " ಎನ್ನುತ್ತಿದ್ದ ಕಾಲದಿಂದ " ಗುರುವೇ ಏನ್ ಮಹಾನ್ " ಎನ್ನುವ ಕಾಲಕ್ಕೆ ವಿದ್ಯಾರ್ಥಿಗಳು ತಲುಪಿದ್ದಾರೆ.
* ಈ ಪ್ರಸ್ತುತ ಶಿಕ್ಷಣ ಪದ್ಧತಿ "ಅವಿದ್ಯಾವಂತ ಮೂರ್ಖರನ್ನು" "ವಿದ್ಯಾವಂತ ಮೂರ್ಖರನ್ನಾಗಿ" ಮಾಡುತ್ತಿದೆ. ದೇಶದ ಯುವಕರಿಗೆ ದೇಶದ ಮೇಲೆ ಗೌರವ ಹಾಗೂ ಭಕ್ತಿಯೇ ಇಲ್ಲದಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯುವಕರು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.
* ಶಿಕ್ಷಣ ಪದ್ಧತಿ ಮುಂದುವರೆದಂತೆ ಪದವೀಧರರು ಜಾಸ್ತಿಯಾಗುತ್ತಿದ್ದಾರೆ. ಇದರಿಂದ ನಿರುದ್ಯೋಗ ಮತ್ತು ಬಡತನ ಜಾಸ್ತಿಯಾಗುತ್ತಿದೆ. ಇದರ ಪರಿಣಾಮದಿಂದ ಕೊಲೆ-ಸುಲಿಗೆ ಕಳ್ಳತನ ದರೋಡೆ ಹೆಚ್ಚಾಗುತ್ತಿದೆ. ಸಮಾಜದ ಶಾಂತಿ ಹದಗೆಡುತ್ತಿದೆ.
* ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ರಾಶಿಗಟ್ಟಲೆ ಪುಸ್ತಕವನ್ನು ಓದಬೇಕು. ಅಷ್ಟೇ ಅಲ್ಲದೆ ನಿಯೋಜಿತ ಕಾರ್ಯಗಳು, ಮನೆಗೆ ಕೊಡುವ ಕಾರ್ಯಗಳು, ಸೆಮಿನಾರ್, ವೇಬಿನರ್ಸ್, ಇಂಟರ್ನಲ್ಸ್. ಇದರಿಂದ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀಳುತದೆ. ಮಕ್ಕಳು ಮಾನಸಿಕವಾಗಿ ಕೂಗುತ್ತಿದ್ದಾರೆ.
* ಇನ್ನು ಇತ್ತೀಚಿಗೆ ಮಕ್ಕಳು ಅರ್ಥವಾಗದ ಆನ್ಲೈನ್ ತರಗತಿಗಳಲ್ಲಿ ಪಾಠ ಕೇಳುತ್ತಿದ್ದಾರೆ. ನೆಟ್ವರ್ಕ್ ವಿದ್ಯಾರ್ಥಿಗಳ ಸ್ನೇಹಿತರಲ್ಲ ಸುತ್ತಲೂ ಇರಲಿ. ಗ್ರಾಮದಲ್ಲಿ ವಾಸಿಸುವ ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಹೇಳಲು ಅಸಾಧ್ಯ ವಾಗಿದೆ.
"ಶಿಕ್ಷಣದ ಸಂತೆಯಲ್ಲಿ ಕುರಿಯಾಗಬೇಡ ನೀ... ವಿದ್ಯಾದೇವತೆ ಕೈ ಹಿಡಿಯುವಳು ನಿಮ್ಮನ್ನು. ಸ್ವಂತ ಶಿಕ್ಷಣದಿಂದ ಸಿಂಹದಂತೆ ಬಾಳಬೇಕು". ಶಿಕ್ಷಣ ಮನುಷ್ಯನಲ್ಲಿ ಸಂಸ್ಕೃತಿ, ಸಹನೆ, ವಿದ್ಯೆ, ಭಕ್ತಿ ಮಾನಸಿಕ ದೃಡತೆಯನ್ನು ತಂದು ಮನುಷ್ಯನ ಜೀವನದಲ್ಲಿ ಶಾಂತಿಯನ್ನು ತರಬೇಕು ಅಂತಹ ಶಿಕ್ಷಣ ಪದ್ಧತಿ ನಮ್ಮದಾಗಬೇಕು.
ಶಿಕ್ಷಣವೆನ್ನುವುದು ಉತ್ತಮ ಸ್ನೇಹಿತನಿದ್ದಂತೆ ಕಲಿತ ವ್ಯಕ್ತಿ ಎಲ್ಲಾ ಕಡೆಯೂ ಎಲ್ಲರಿಂದಲೂ ಗೌರವಿಸಿ ಕೊಳ್ಳುತ್ತಾನೆ. ಸೌಂದರ್ಯ ಮತ್ತು ಶಿಕ್ಷಣ ಮೇಲುಗೈ ಸಾಧಿಸುತ್ತದೆ.
--- ಚಾಣಕ್ಯ