India Languages, asked by Anonymous, 3 months ago

essay on ಮಹಾಭಾರತ (mahabharatha) in kannada

dont copy from wikipedia​

Answers

Answered by Anonymous
19

Answer:

ಮಹಾಭಾರತ, ಭಾರತದ ಧಾರ್ಮಿಕ ಮಹಾಕಾವ್ಯಗಳಲ್ಲಿ ಒಂದು. ಹಿಂದೂ ಧರ್ಮದ ಬಹುಮುಖ್ಯ ಗ್ರಂಥವಾಗಿದೆ. ಭಾರತದಾದ್ಯಂತ ಜನಪದೀಯವಾಗಿ, ಪೌರಾಣಿಕವಾಗಿ ಹಲವು ರೂಪಗಳಲ್ಲಿ ಓದಲು ಸಿಗುವ ಮಹಾಭಾರತ, ಭಾರತದಿಂದಾಚೆಗಿನ ಹಲವು ದೇಶದ ಜನರಿಗೆ ಪರಿಚಿತ. ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕ, ಹದಿನೆಂಟು ಪರ್ವಗಳನ್ನೊಳಗೊಂಡ ಬೃಹತ್ ಕಾವ್ಯವಾಗಿದೆ. ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡುಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಕೆಲವು ಚರಿತ್ರಜ್ಞರ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. ೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿದ ಹಲವು ವಿದುಷರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. ೩೧೦೦ಕ್ಕೆ ಹೋಲುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಇವು ಘಟಿತ ಘಟನೆಗಳೋ ಅಲ್ಲವೋ, ಹೌದಾಗಿದ್ದರೆ ಯಾವ ಕಾಲದಲ್ಲಿ ನಡೆದದ್ದು ಎಂಬ ಎಲ್ಲಾ ವಿಷಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ.

ಮಹಾಭಾರತದ ಮುಖ್ಯವಾಗಿ ಚಂದ್ರ ವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರು ವಂಶದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಕಥೆ ಎನಿಸಿಕೊಳ್ಫುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ್ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು.

ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳಾದ ಅರ್ಥ, ಕಾಮ, ಧರ್ಮ, ಮತ್ತು ಮೋಕ್ಷವನ್ನು ತಿಳಿಸಿಕೊಡುವುದು. ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ.

ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.

ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ - ಕೃಷ್ಣಾವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನು ಮುಗಿಸಿರುವುದರಿಂದ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಮಹಾಭಾರತದ ಉಳಿದ ಭಾಗ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿ ಬ೦ದಿದೆ.

ಆಧುನಿಕ ಕನ್ನಡದಲ್ಲಿಯೂ ರಚಿತವಾದ ಈ ಮಹಾಭಾರತದ ಆವೃತ್ತಿಗಳಲ್ಲಿ ಪ್ರಸಿದ್ಧವಾದವು, ಎ.ಆರ್.ಕೃಷ್ಣಶಾಸ್ತ್ರಿಗಳು ಬರೆದ “ವಚನ ಭಾರತ”, ಎಸ್.ಎಲ್.ಭೈರಪ್ಪ ಬರೆದ “ಪರ್ವ”. ಮಹಾಭಾರತದ ಕೆಲವು ಕಥೆಗಳು, ಸನ್ನಿವೇಶಗಳನ್ನು ಆಧರಿಸಿ ನಾಟಕಗಳೂ ರಚನೆಯಾಗಿದ್ದು, ಅವೆಂದರೆ ಕುವೆಂಪು ರಚಿಸಿದ “ಬೆರಳ್ ಗೆ ಕೊರಳ್”, ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಬಿ.ಎಂ.ಶ್ರೀ ಅವರ “ಗದಾಯುದ್ಧಂ” ರನ್ನನ ಗದಾಯುದ್ದದ ನಾಟಕ ರೂಪ. ಗಿರೀಶ್ ಕಾರ್ನಾಡರ “ಯಯಾತಿ”. ಇತ್ಯಾದಿ

ಹೀಗೇ ಮಹಾಭಾರತವು ಭಾರತೀಯರ ಮನೆ ಮಾನಸದಲ್ಲಿ ಬೆರೆತು, ಜೀವನಶೈಲಿಯಲ್ಲಿ ಕಲೆತಿದೆ. ಅದರ ಕಥೆಗಳು, ಉಪಕಥೆಗಳನ್ನು ವಿವರಿಸುತ್ತಾ ಹೋದರೆ ದಿನಗಳೇ ಸಾಲುವುದಿಲ್ಲ. ಹೆಸರಿಗೆ ತಕ್ಕಂತೆ ಇದು ಒಂದು ಮಹಾನ್ ಭಾರತವೇ ಆಗಿದೆ.

ಭಾರತೀಯ ಜನಮಾನಸದಲ್ಲಿ ಕಾಲಾನುಕಾಲದಿಂದ ಬೆರೆತ, ಬೆಳೆದು ಬಂದ ಕಥಾಮೃತ ಈ ಮಹಾಭಾರತ. ಇದರಲ್ಲಿ ಬರುವ ಪಾತ್ರಗಳು ಇಂದಿನ ಪೀಳಿಗೆಗೆ ಮಾದರಿಯಾಗುತ್ತವೆ. ಸನ್ನಿವೇಶಗಳು, ಕಥೆ- ಉಪಕಥೆಗಳು, ಜೀವನದ ಮೌಲ್ಯವನ್ನು ತಿಳಿಸುತ್ತವೆ. ಹಿಂದಿನಿಂದ ಇಂದಿನವರೆಗೂ, ಮುಂದಿನ ಪೀಳಿಗೆಗೂ ಬದುಕಿನ ಮಾರ್ಗದರ್ಶಕ ಕಾವ್ಯವಾಗಿದೆ.

hope it helps...

Answered by bhatanvita9
12

Answer:

ಧನ್ಯವಾದಗಳು

Explanation:

hopes it helps you

Similar questions