World Languages, asked by Poorvi344, 1 year ago

Essay on parisara ( Kannada)

Answers

Answered by rajesh205
12
ಮಾಲಿನ್ಯ

ಮಾಲಿನ್ಯವು ನೈಸರ್ಗಿಕ ಪರಿಸರದೊಳಗೆ ಮಾಲಿನ್ಯಕಾರಕಗಳ ಪರಿಚಯವಾಗಿದೆ, ಇದು ಪ್ರತಿಕೂಲ ಬದಲಾವಣೆಗೆ ಕಾರಣವಾಗುತ್ತದೆ.

ಎರಡನೇ ಮಹಾಯುದ್ಧದಿಂದಾದ ವಾಯುಮಾಲಿನ್ಯ

ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ gfhvಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು.[೧] ಮಾಲಿನ್ಯವುರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ‍್‌ಬೈಜಾನ್,ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತುಜಾಂಬಿಯಾ ಪ್ರದೇಶದಲ್ಲಿವೆ.

ಪ್ರಾಚೀನ ಸಂಸ್ಕೃತಿಸಂಪಾದಿಸಿ

ಖನಿಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೈನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.[೨]

ಅಧಿಕೃತ ಸ್ವೀಕೃತಿಸಂಪಾದಿಸಿ

ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳುಅರೇಬಿಕ್ ವ್ಯೆದ್ಯಕೀಯ ಗ್ರಂಥಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ.ಅಲ್-ಕಿಂಡಿ(ಆಲ್ಕಿಂಡಸ್), ಕ್ವೆಸ್ಟಾ ಇಬ್ನ್ ಲ್ಯುಕಾ (ಕೊಸ್ತಾ ಬೆನ್ ಲುಕಾ), ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ(ರಾಝೆಸ್), ಇಬ್ನ ಅಲ್ -ಜಝ್ಝಾರ್, ಅಲ್-ತಮಿಮಿ, ಅಲ್- ಮಸಿಹಿ, ಇಬ್ನ ಸಿನ(ಅವಿಸಿನ್ನ), ಅಲಿ ಇಬ್ನ್ ರಿದ್ವಾನ್, ಇಬ್ನ ಜುಮಯ್, ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್, ಅಬ್ದ-ಎಲ್-ಲತಿಫ್, ಇಬ್ನ ಅಲ್-ಖಫ್ ಮತ್ತು ಇಬ್ನ್‌ ಅಲ್-ನಫೀಸ್ ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ವಾಯುಮಾಲಿನ್ಯ, ನೀರು ಮಲಿನಗೊಳ್ಳುವಿಕೆ, ಮಣ್ಣು ಮಾಲಿನ್ಯ, ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ ಪರಿಸರಕ್ಕೆಕುರಿತಾದಂತೆ ತಿಳಿಸುತ್ತವೆ.[೩] ಸಮುದ್ರ ಕಲ್ಲಿದ್ದಲನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿಇಂಗ್ಲಂಡ್‌ನ ಕಿಂಗ್‌ ಎಡ್ವರ್ಡ್ Iಲಂಡನ್‌ನಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.[೪][೫] ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.

ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ 1952ರ ಗ್ರೇಟ್ ಸ್ಮಾಗ್‌ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ ಥೇಮ್ಸ್ ನದಿಯಲ್ಲಿನ’ಗ್ರೇಟ್ ಸ್ಟಿಂಕ್’ ಘಟನೆಯಿಂದಾಗಿ ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು ಕಲ್ಲಿದ್ದಲುಮತ್ತು ಭೂಗರ್ಭದಲ್ಲಿ ದೊರೆಯುವ ಇತರ ಇಂಧನಗಳ ಬಳಕೆಯು ಹಿಂದೆಂದೂ ಕಂಡಿರದ ವಾಯುಮಾಲಿನ್ಯಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾರಾಸಾಯನಿಕಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದಚಿಕಾಗೊ ಮತ್ತು ಸಿನ್ಸಿನ್ನಾಟಿ ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿಲಾಸ್‌ಏಂಜಲೀಸ್ ಮತ್ತು ಪೆನ್‌ಸಿಲ್ವೇನಿಯಾದ ಡೊನೊರಾದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.[೬]

Similar questions