India Languages, asked by stargirl2382, 11 months ago

Essay on road safety in Kannada language

Answers

Answered by priyankasingh797112
0

Answer:

In kannada language???????

Answered by appappnnagol
0

Answer:

ರಾಷ್ಟ್ರದಲ್ಲಿ ರಸ್ತೆ ಅಪಘಾತಗಳು ಅತಿಹೆಚ್ಚು ಸಾವಿಗೆ ಕಾರಣವಾಗುತ್ತಿವೆ. ಇದನ್ನು ನೋಡಿದರೆ ಇವೇನು ರಸ್ತೆಗಳೋ ಅಥವಾ ಸಂಚಾರಿ ಸಾವಿನ ಮನೆಗಳೋ ಎಂಬ ಅನುಮಾನ ಬರುತ್ತದೆ. ಸಹಜ ಸಾವು,  ಆತ್ಮಹತ್ಯೆ ಸಾವುಗಳ ಅಂಕಿಅಂಶಗಳಿಗೆ ಹೋಲಿಸಿದರೆ ರಸ್ತೆ, ರೈಲು ಅಪಘಾತಗಳಲ್ಲಿ ಹೆಚ್ಚು ಜನ ಅಸು ನೀಗುತ್ತಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಅಂಕಿ ಅಂಶಗಳ ಪ್ರಕಾರ, ಗಂಟೆಗೆ 16 ಜನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. 2014ರಲ್ಲಿ 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ. 1,41,526 ಜನ ಸತ್ತಿದ್ದಾರೆ. 4.77 ಲಕ್ಷ ಜನ ಗಾಯಗೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 1.8ರಷ್ಟು ಏರಿಕೆ. ಇದು ಆತಂಕಕಾರಿ ಸಂಗತಿ.

ಹೊಸ ಹೊಸ ವಿನ್ಯಾಸ, ಅಧಿಕ ಶಕ್ತಿ, ಅತಿ ವೇಗದ ವಾಹನಗಳು ನಿರಂತರವಾಗಿ ಮಾರುಕಟ್ಟೆಗೆ ಬರುತ್ತಿವೆ. ಬೆಂಗಳೂರಿನಂಥ ನಗರವೊಂದರಲ್ಲಿಯೇ ನಿತ್ಯ ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಇಲ್ಲಿ ಸರಾಸರಿ ಇಬ್ಬರಿಗೆ ಒಂದು ವಾಹನ ಇದೆ. ಆದರೆ ಅದಕ್ಕೆ ತಕ್ಕಂತೆ ರಸ್ತೆಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರಮಟ್ಟದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಗರ ಪ್ರದೇಶಗಳು, ಹೆದ್ದಾರಿಗಳು ಮಾತ್ರವಲ್ಲದೆ ಗ್ರಾಮೀಣ ರಸ್ತೆಗಳಲ್ಲೂ ಸಾವು– ನೋವು ಸಂಭವಿಸುತ್ತಿವೆ.

ನಗರ ಪ್ರದೇಶಗಳಲ್ಲಿ ಪಾದಚಾರಿಗಳೂ ಸುರಕ್ಷಿತರಲ್ಲ್ಲಎನ್ನುವ ವಾತಾವರಣವಿದೆ. ರಸ್ತೆ ಪಕ್ಕ ನಡೆದು ಹೋಗುವವರು, ವಾಹನಗಳಿಗೋಸ್ಕರ ಕಾದು ನಿಂತವರೂ ಅಪಘಾತಗಳಿಗೆ ಆಹುತಿಯಾಗುತ್ತಿದ್ದಾರೆ. ನಮಗಿಂತಲೂ ಹೆಚ್ಚು ವಾಹನಗಳು, ಹೆಚ್ಚು ರಸ್ತೆಗಳಿರುವ ದೇಶಗಳಲ್ಲಿ ಅಪಘಾತ, ಸಾವು ನೋವಿನ ಪ್ರಮಾಣ ನಮಗಿಂತಲೂ ಕಡಿಮೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಅತಿಹೆಚ್ಚು ಅಪಘಾತ ನಡೆಯುತ್ತಿರುವುದು ನಮ್ಮ ದೇಶದಲ್ಲಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಬಹುತೇಕ ಅಪಘಾತಗಳಿಗೆ ಮಾನವ ಲೋಪವೇ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ. ಅತಿ ವೇಗದ ಚಾಲನೆ, ಕುಡಿದು ವಾಹನ ಓಡಿಸುವುದು, ಸಮರ್ಪಕ ತರಬೇತಿ ಕೊರತೆ, ಸೀಟ್‌ ಬೆಲ್ಟ್‌ ಬಳಸದೇ ಇರುವುದು, ದ್ವಿಚಕ್ರ ವಾಹನಗಳಾದರೆ ಹೆಲ್ಮೆಟ್‌ ಧರಿಸದೇ ಇರುವುದು, ವಾಹನಗಳ ದುಃಸ್ಥಿತಿ, ರಸ್ತೆ ಮೇಲೆ ಉಡಾಫೆ ಪ್ರವೃತ್ತಿ ಹೀಗೆ ಹತ್ತು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು.

ಅಧ್ಯಯನಗಳ ಪ್ರಕಾರ ಅತಿ ವೇಗದ ಚಾಲನೆಯಿಂದ ಶೇ 90ರಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ   ಚಾಲಕನ ಸ್ಥಾನದಲ್ಲಿ ಕುಳಿತ ವ್ಯಕ್ತಿ ನಿಯ ಮಾವಳಿಗಳನ್ನು ಪಾಲಿಸಿ ಅತ್ಯಂತ ಹೊಣೆಗಾರಿಕೆ ಯಿಂದ ವಾಹನ ಓಡಿಸಿದರೆ ಬಹಳಷ್ಟು ಸಾವು ನೋವು ತಡೆಯಬಹುದು. ನಿಯಮಗಳನ್ನು ಪಾಲಿಸುವುದಕ್ಕಿಂತ ಉಲ್ಲಂಘಿಸುವುದೇ ನಮಗೆ ಹೆಚ್ಚು ಪ್ರೀತಿ.

ಇನ್ನು, ಗಣ್ಯ ವ್ಯಕ್ತಿಯಾಗಿದ್ದರಂತೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಹಕ್ಕು ಎಂಬಂತೆ ವರ್ತಿಸುವುದನ್ನು ಕಂಡಿದ್ದೇವೆ. ಚಾಲಕನ ಮನೋಭಾವ, ನಡವಳಿಕೆ ಕೂಡ ರಸ್ತೆ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರ ಜತೆಗೆ, ರಸ್ತೆ ಎಂಜಿನಿಯರಿಂಗ್‌ ಕೂಡ ತುಂಬ ಮಹತ್ವದ್ದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ಹಾಕದಂತೆ ಸುಪ್ರೀಂ ಕೋರ್ಟ್ ಕಟ್ಟಪ್ಪಣೆ ಮಾಡಿದೆ.

ಆದರೆ ನಮ್ಮ ರಾಜ್ಯವೊಂದನ್ನೇ ತೆಗೆದುಕೊಂಡರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 167, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 2290 ಅವೈಜ್ಞಾನಿಕ ರಸ್ತೆ ಉಬ್ಬುಗಳಿವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಇವೆಲ್ಲ ರಸ್ತೆ ಸುರಕ್ಷತೆಗೆ ಇರುವ ಕಂಟಕಗಳು. ರಸ್ತೆಗಳಿಗೆ ಹೋಲಿಸಿದರೆ ರೈಲುಗಳಲ್ಲಿ ಅಪಘಾತ ಪ್ರಮಾಣ ಕೊಂಚ ಕಡಿಮೆ ಇದ್ದರೂ, ರೈಲ್ವೆ ಕ್ರಾಸಿಂಗ್‌ಗಳಲ್ಲಿ ಕಳೆದ ವರ್ಷ 2575 ಜನ ಸಾವಿಗೀಡಾಗಿದ್ದಾರೆ.  ಇವೆಲ್ಲ ತಡೆಯಬಹುದಾಗಿದ್ದ ಸಾವುಗಳು.

ಒಂದು ಅಪಘಾತ ಅಥವಾ ಸಾವು ಆ ವ್ಯಕ್ತಿಯ ಕುಟುಂಬದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಭಾವಿಸುವುದು ತಪ್ಪು. ಅದಕ್ಕೆ ಹಲವು ಆಯಾಮಗಳಿವೆ. ಸಮಾಜ, ಸರ್ಕಾರದ ಮೇಲೆ ಅದರಿಂದ ಬೀಳುವ ಆರ್ಥಿಕ ಹೊರೆ, ಮೃತ ವ್ಯಕ್ತಿಯ ಪರಿಣತಿ, ಕೊಡುಗೆ ಮತ್ತಿತರ ರೂಪದಲ್ಲಿ ಆಗುವ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಸಂಚಾರ ಸುರಕ್ಷತೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಬೇಕು. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಅದು ನಮ್ಮ ಪಠ್ಯಕ್ರಮದ ಭಾಗವಾಗಬೇಕು.

Similar questions