Essay on sparrow in kannada language
Answers
Answered by
1
ಮನೆಯ ಉತ್ತರಕ್ಕೆ ಸಮುದ್ರ, ದಕ್ಷಿಣಕ್ಕೆ ಮರುಭೂಮಿ, ಪೂರ್ವಕ್ಕೆ ಬೆಟ್ಟ , ಪಶ್ಚಿಮಕ್ಕೆ ಕಾಡು !
ಆಗಷ್ಟೇ ಎದ್ದುನಿಲ್ಲುತ್ತಿದ್ದ ಊರಾಚೆಯ ಬಡಾವಣೆಯಲ್ಲಿ ಕಟ್ಟಿದ ಹೊಸಮನೆಯನ್ನು ನಾವು ತಮಾಷೆ ಮಾಡಿಕೊಳ್ಳುತ್ತಿದ್ದುದು ಹೀಗೆ. ನಮ್ಮ ವರ್ಣನೆಯಲ್ಲೂ ಒಂದಿಷ್ಟು ಸತ್ಯವಿತ್ತು : ಸುತ್ತಲ ಪ್ರದೇಶಕ್ಕೆ ಜೀವವುಣಿಸುತ್ತಿದ್ದ ಸಣ್ಣಕೆರೆ ನಮ್ಮ ಪಾಲಿಗೆ ಸಮುದ್ರವಾಗಿತ್ತು , ಮನೆಯ ಪಕ್ಕದ ಬಂಡೆಕಲ್ಲುಗಳ ಪ್ರದೇಶ ಬೆಟ್ಟವಾಗಿತ್ತು , ಇನ್ನೊಂದು ಕಡೆಯ ತೆಂಗಿನ ತೋಟ ನಮ್ಮ ಪಾಲಿನ ಕಾಡು, ಮನೆಯ ಹಿಂಭಾಗದ ಜಾಲಿಗಿಡಗಳ ಬಯಲು ಮರುಭೂಮಿಯಲ್ಲದೆ ಮತ್ತೇನು ?
ಬಯಲಿಗೆ ದೃಷ್ಟಿಬೊಟ್ಟಿನಂತೆ ಅಲ್ಲೊಂದು ಇಲ್ಲೊಂದು ಮನೆಗಳು. ನಮ್ಮ ಮನೆ ಅಂತದೊಂದು ದೃಷ್ಟಿಬೊಟ್ಟು. 'ಬೆಟ್ಟದುದ್ದಕೂ ಬರೆದ ನೀರ ಎಳೆಯಂತೆ ಬಯಲಿನಲ್ಲಿ ಮೂಡಿದ ಹೆಜ್ಜೆಜಾಡಿನಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಹಳ್ಳಿಯ ದಾರಿಯ ಪಥಿಕರು, ದನಕರು ಕುರಿಗಳು ಹಾಗೂ ಅವುಗಳನ್ನು ಮೇಯಿಸಲು ಬಂದ ಚಿಳ್ಳೆಪಿಳ್ಳೆ- ಇವರುಗಳನ್ನು ನೋಡುತ್ತ ಹಗಲನ್ನು ಹೇಗಾದರೂ ಕಳೆಯಬಹುದು; ರಾತ್ರಿಯನ್ನು ಕಳೆಯುವುದು ಹೇಗೆ ? ಮನೆಯ ಹೊರಗೆ ಹುಳುಹುಪ್ಪಡಿಗಳ ಕಾಟ. ಒಳಗಿದ್ದರೂ ನೆಮ್ಮದಿಯಿಲ್ಲ ; ಊರ ಹೊಕ್ಕಳಲ್ಲಿನ ಕೋಟೆಗಳಂಥ ಮನೆಗಳಿಗೇನೆ ಕೇರು ಮಾಡದೆ ಕಳ್ಳರು ನುಗ್ಗುವಾಗ, ಈ ಬಯಲಿನ ಮನೆಯನ್ನು ಬಿಟ್ಟಾರೆಯೆ?" ಎನ್ನುವ ಭಯ ಅಪ್ಪನಿಗೆ. ಗಂಡಸಾದ ಅಪ್ಪನೇ ಅಂಜುವಾಗ ಅಮ್ಮ ಅಂಜದಿರಲಾದೀತೆ ? ಈ ಭಯದ ನಡುವೆಯೂ ಒಂದು ಧೈರ್ಯವಿತ್ತು . ಅಪ್ಪ ಅಮ್ಮ ಸಂಪಾದಿಸಿದ ಚೂರುಪಾರು ಬಂಗಾರ ನಗದೆಲ್ಲ ಇಟ್ಟಿಗೆ ಕಲ್ಲು ಸಿಮೆಂಟುಗಳಾಗಿ 'ಮನೆ"ಯ ರೂಪ ತಳೆದಿರುವಾಗ, ಕಳ್ಳರು ಮನೆಗೆ ನುಗ್ಗಿದರೂ ಏನನ್ನು ಹೊತ್ತಾಯ್ದಾರು ಎನ್ನುವ ತರ್ಕವದು. ಆದರೆ, ಅಪ್ಪ ಇಷ್ಟಕ್ಕೇ ಸಮಾಧಾನ ಮಾಡಿಕೊಳ್ಳುವ ಜೀವವಲ್ಲ ; ಏನೂ ಸಿಗಲಿಲ್ಲ ಎನ್ನುವ ಕೋಪಕ್ಕೆ ಮನೆಯವರಿಗೆ ಚಚ್ಚಿದರೆ ಎಂದು ಆತಂಕಪಡುತ್ತಿದ್ದರು.
ಆ ಮನೆ ನಮ್ಮ ಪಾಲಿಗೆ ಬರಿ ಮನೆಯಷ್ಟೇ ಆಗಿರಲಿಲ್ಲ . ಅಪ್ಪನೊಂದಿಗೆ ಸಪ್ತಪದಿ ತುಳಿದ ಅಮ್ಮನ ನಲವತ್ತು ವರ್ಷಗಳ ಪ್ರತಿದಿನದ ಕನವರಿಕೆಯ ಸಾಕಾರ ರೂಪವಾಗಿತ್ತು. ಮೇಷ್ಟ್ರು ಚಾಕರಿಯಿಂದ ನಿವೃತ್ತರಾದ ಅಪ್ಪ , ತಮ್ಮ ಈವರೆಗಿನ ಉಳಿಕೆಯನ್ನೆಲ್ಲ ಸುರಿದು- ಗೋಡೆಗಳನ್ನು ಹಾಗೂ ಕಾಂಕ್ರೀಟ್ ಸೂರನ್ನು ನಿಲ್ಲಿಸಿದ್ದರು.

Similar questions
Math,
7 months ago
Physics,
7 months ago
Computer Science,
7 months ago
CBSE BOARD X,
1 year ago
Math,
1 year ago
Math,
1 year ago