Essay on sun in kannada[easy lines]
Answers
Answer:
ಸೂರ್ಯ, ಆದಿತ್ಯ, ರವಿ,ದಿನಕರ, ದಿವಾಕರ, ದ್ಯುಮಣಿ, ಭಾಸ್ಕರ, ಅಹಸ್ಕರ, ವಿಭಾಕರ, ಅರ್ಕ , ಪ್ರಭಾಕರ ಮುಂತಾಗಿ ನೂರಾರು ಹೆಸರುಗಳಿಂದ ಕರೆಸಿಕೊಳ್ಳುವವ ಸೂರ್ಯ.ಭೂಮಿಕೇಂದ್ರ ವ್ಯವಸ್ಥೆ ಸುಳ್ಳು, ಸೌರಕೇಂದ್ರ ವ್ಯವಸ್ಥೆಯೇ ಸತ್ಯ ಎಂಬುದು ಸಾಬೀತಾದ ಮೇಲೆ ಸೂರ್ಯನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಜಗತ್ತಿನ ಪ್ರತಿ ಆಗುಹೋಗಿಗೂ ಪ್ರತ್ಯಕ್ಷ ಸಾಕ್ಷಿಯಾದವನು ಸೂರ್ಯ. ಅಂಥ ಸೂರ್ಯನ ಕುರಿತು ಸಾಕಷ್ಟು ಕುತೂಹಲಕಾರಿ ಸಂಗತಿಗಳಿವೆ.ನಾವಿಲ್ಲಿ ತಾಪಮಾನ 35 ಡಿಗ್ರಿ ತಲುಪಿದರೆ ಉಸ್ಸಪ್ಪಾ ಎಂದು ಕೈ ಬೀಸಿಕೊಂಡು ಕೂರುತ್ತೇವೆ. ಆದರೆ ಸೂರ್ಯನ ಉಷ್ಣಾಂಶ ಎಷ್ಟು ಎಂದು ಕೇಳಿದರೆ ಹೌಹಾರುತ್ತೀರಾ. ಸೂರ್ಯ ತಾಪಮಾನ ಗರಿಷ್ಟ 15 ದಶಲಕ್ಷ ಡಿಗ್ರಿ ಸೆಲ್ಶಿಯಸ್ ವರೆಗೂ ತಲುಪುತ್ತದೆಯಂತೆ
ಸೂರ್ಯನ ವಯಸ್ಸೆಷ್ಟು?
ಸುಟ್ಟುಬಿಡುವ ಈ ಸೂರ್ಯನ ವಯಸ್ಸೆಷ್ಟು? ಒಂದು ದಿನವೂ ರಜೆಯಿಲ್ಲದೆ, ಜಗವನ್ನು ಬೆಳಗುವ ತನ್ನ ಕಾಯಕವನ್ನು ನಡೆಸಿಕೊಂಡು ಹೋಗುತ್ತಿರುವ ಸೂರ್ಯ 4.6 ಶಸತಕೋಟಿ ವರ್ಷ ವಯಸ್ಸಿನವನು ಎಂದರೆ ನಂಬುತ್ತೀರಾ..?
ದಿನಕರನ ಬಣ್ಣ ಯಾವುದು?
ಸೂರ್ಯ ಎಲ್ಲ ಬಣ್ಣಗಳ ಮಿಶ್ರಣ. ಎಲ್ಲ ಬಣ್ಣಗಳೂ ಸೇರಿ ನಮ್ಮ ಕಣ್ಣಿಗೆ ಆತ ಬಿಳಿ ಬಣ್ಣದಲ್ಲಿ ಗೋಚರಿಸುತ್ತಾನೆ. ಸೂರ್ಯನೊಳಗಿರುವುದು ಹೈಡ್ರೋಜನ್ ಮತ್ತು ಹೀಲಿಯಂ.
ಸೂರ್ಯನೊಳಗೆ ಒಂದು ದಶಲಕ್ಷ ಭೂಮಿ!
ಭೂಮಿಗೆ ಅತ್ಯಂತ ಹತ್ತಿರವಿರುವ ನಕ್ಷತ್ರವಾದ ಸೂರ್ಯ ಎಷ್ಟು ವಿಶಾಲವಾಗಿದ್ದಾನೆಂದರೆ ಅವನಲ್ಲಿ ಒಂದು ದಶಲಕ್ಷ ಭೂಮಿಯನ್ನು ಕೂರಿಸಬಹುದಂತೆ!
ಸೂರ್ಯ ಭೂಮಿಗಿಂತ 109 ಪಟ್ಟು ದೊಡ್ಡವ
ಸೂರ್ಯ ಗಾತ್ರದಲ್ಲಿ ಭೂಮಿಗಿಂತ 109 ಪಟ್ಟು ದೊಡ್ಡವನಂತೆ! ಸೌರವ್ಯೂಹದ ಸುಮಾರು ಶೇ.99.86 ಭಾಗ ಸೂರ್ಯನೇ ಇದ್ದಾನೆ!
ರುದ್ರ ರಮಣೀಯ ಸೂರ್ಯ
ಬೆಂಕಿಯುಗುಳುವ ಸೂರ್ಯ ಉದಯಿಸುವಾಗ, ಮುಳಲುಗುವಾಗ ಕಾಣುವ ರಮಣೀಯತೆ ಬಣ್ಣನೆಗೆ ನಿಲುಕದ್ದು. ರಥಸಪ್ತಮಿಯ ಶುಭದಿನದಂದು ಸೂರ್ಯನ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ. ಅಂತಾರಾಷ್ಟ್ರೀಯ ಯೋಗದಿನದಂದು ಅಲಹಾಬಾದಿನ ಸಂಗಮದಲ್ಲಿ ಕಂಡ ಈ ದೃಶ್ಯ ನೋಡಿ...
Explanation:
Mark my answer as brainliest