essay on teddy bear in kannada
Answers
Answered by
11
Answer:
ಮಕ್ಕಳ ಆಟದ ಸಾಮಾನುಗಳ ಪೈಕಿ ಟೆಡ್ಡಿ ಬೇರ್ ಅತ್ಯಂತ ಖ್ಯಾತಿ ಪಡೆದಿರುವಂಥದ್ದು. ಅಲ್ಲದೆ ಇದು ಅನೇಕ ವಯಸ್ಕರ ಹೃದಯದಲ್ಲಿ ಸ್ಥಾನ ಪಡೆದಿದೆ. ಈ ಪ್ರೀತಿಯ ಸ್ಟಫ್ಡ್ ಪ್ರಾಣಿಗಳಿಗೂ ತನ್ನದೇ ಆದ ಒಂದು ದಿನವಿದೆ. ಅದುವೇ ಟೆಡ್ಡಿ ಬೇರ್ ಡೇ. ಈ ದಿನವು ಜನರಿಗೆ ತಮ್ಮ ಕಪಾಟಿನಲ್ಲಿರುವ ಟೆಡ್ಡಿ ಬೇರ್ ಅನ್ನು ಹೊರ ತೆಗೆಯಲು ಒಂದು ಅವಕಾಶವನ್ನು ನೀಡುತ್ತದೆ. ಜತೆಗೆ ಮನೆಯಲ್ಲಿ ಸೂಕ್ತವಾದ ಜಾಗದಲ್ಲಿರಿಸಿದರೆ ಮನೆಗೆ ಬಂದು ಹೋಗುವವರನ್ನು ಆಕರ್ಷಿಸುತ್ತದೆ. ಕುಟುಂಬದ ಸದಸ್ಯರು ಕೂಡ ಒಟ್ಟು ಸೇರಲು ಇದೊಂದು ಅವಕಾಶ. ನಿಮ್ಮ ಪ್ರೀತಿಯ ಟೆಡ್ಡಿ ಬೇರ್ ಅನ್ನು ತೆಗೆದುಕೊಂಡು ಪಿಕ್‌ನಿಕ್‌ಗೆ ಹೋಗಬಹುದು ಅಥವಾ ಅದನ್ನು ಹಿಡಿದುಕೊಂಡು ಹಾಡು ಹೇಳಿಕೊಂಡು ಡಾನ್ಸ್ ಮಾಡಬಹುದು.
ಯುರೋಪ್ ಮತ್ತು ಅಮೆರಿಕದಲ್ಲಿ ಮೊದಲ ಬಾರಿಗೆ ಟೆಡ್ಡಿ ಬೇರ್ ತಯಾರಿಸಲಾಯಿತು ಎಂದು 1907ರಲ್ಲಿ ಬರೆಯಲಾದ ವರದಿಯಿಂದ ತಿಳಿದು ಬರುತ್ತದೆ. ಅಮೆರಿಕದ ಅಧ್ಯಕ್ಷ ಟಿಯೊಡೇರ್ ರೂಸ್ವೆಲ್ಟ್ ಅವರ ಗೌರವಾರ್ಥವಾಗಿ ಅಮೆರಿಕದ ಆಟಿಕೆ ಕರಡಿಗಳನ್ನು ಟೆಡ್ಡಿ ಎಂದು ಹೆಸರಿಸಲಾಗಿತ್ತು. ಇವರು ಬೇಟೆಯಾಡುವಾಗ ಸಣ್ಣ ಕರಡಿಗಳನ್ನು ಹೊಡೆಯಲು ನಿರಾಕರಿಸಿದ್ದರು ಎನ್ನಲಾಗಿದೆ. ಪ್ಯಾಡಿಂಗ್ಟನ್ ಕರಡಿ, ರೂಪರ್ಟ್ ಕರಡಿ, ಪಡ್ಸೇ ಕರಡಿ, ವಿನ್ನಿ ದಿ ಪೂಹ್ ಸೇರಿದಂತೆ ಕೆಲವು ಕರಡಿಗಳು ಹಲವು ವರ್ಷಗಳಿದ ಪ್ರಸಿದ್ಧವಾಗಿವೆ.
Hope this helps ✌️✌️✌️
Please mark me as brainlist and follow
Stay safe stay blessed ❤️
Answered by
2
Above the answer is correct
Similar questions