India Languages, asked by Smamtha040, 2 months ago

ಅರಣ್ಯದ ರಕ್ಷಣೆ essay
pls ansss

Answers

Answered by Anonymous
1

Answer:

ಅರಣ್ಯ ಸಂರಕ್ಷಣೆ ಅರಣ್ಯಗಳ ಸಂರಕ್ಷಣೆ అతి ಮುಖ್ಯವಾದುದು. ಬೀಳಬಹುದಾದ ಮರಗಳನ್ನು ಗುರುತಿಸಿ ಅದನ್ನು ಕಡಿದು ಅದರ ಜಾಗದಲ್ಲಿ ಉಪಯೋಗಿ ಹೊಸ ಗಿಡಗಳನ್ನು ನೆಡಬೇಕು. ಆರಿಸಿದ ಗಿಡಗಳಿಲ್ಲದಿದ್ದರೆ ಆರಿಸಿದ ಬೀಜಗಳನ್ನಾದರೂ ಬಿತ್ತಬೇಕು. ಅರಣ್ಯದಲ್ಲಿ ವಾಸಿಸುವ ಪ್ರಾಣಿಪಕ್ಷಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಬೇಟೆಯಾಡಲು ನಿರ್ದಿಷ್ಟ ಜಾಗವನ್ನು ಗೊತ್ತು ಮಾಡುವುದರಿಂದ ಪ್ರಾಣಿಪಕ್ಷಿ ಸಂರಕ್ಷಣೆ ಸಾಧ್ಯವಾಗುತ್ತದೆ. ಕಾಡುಗಳಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ, ಸುರಕ್ಷಿತವಾಗಿ ಉಳಿಯುವಂತೆ ನೋಡಿಕೊಳ್ಳಬೇಕು. ಕಾಡಿಚ್ಚು ಹರಡದಂತೆ, ಮರಗಳಿಗೆ ರೋಗಗಳು ತಗುಲದಂತೆ ಎಚ್ಚರ ವಹಿಸಬೇಕು.

ಉಪಸಂಹಾರ

ಹೊಸ ಸಸಿಗಳನ್ನು ಸರಿಯಾಗಿ ನೆಡುವುದು, ಗುಡ್ಡ, ದಿನ್ನೆಗಳಲ್ಲಿ ಹೊಸದಾಗಿ ಅರಣ್ಯಗಳನ್ನು ಹಬ್ಬಿಸುವುದು, ಅರಣ್ಯ ಸಂರಕ್ಷಣೆಯ ಕೆಲವು ವಿಧಾನಗಳು.ದನ, ಕುರಿ, ಆಡು, ಚಿಗರೆ ಇತ್ಯಾದಿ ಪ್ರಾಣಿಗಳು ಚಿಕ್ಕ ಗಿಡಗಳ ಎಲೆಗಳನ್ನು ತಿನ್ನದಂತೆ ಕಾಪಾಡಬೇಕು. ಆನೆಗಳು ಗಿಡಗಳನ್ನು ತುಳಿದು ಹಾಳು ಮಾಡಬಹುದು. ಅದರಿಂದ ರಕ್ಷಿಸಲು ಗಿಡಗಳಿಗೆ ಬೇಲಿ, ಇತ್ಯಾದಿ ಕಟ್ಟುವುದು ಒಳ್ಳೆಯದು.

Similar questions