India Languages, asked by hegderaksha2006, 3 months ago

examples for Anya deshiya words

Answers

Answered by rcpawar1977
0

Answer:ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ.  ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ.  ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ.  ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ.  ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು.  ಅವೂ ಇರಬೇಕು; ಪರಭಾಷಾ ಶಬ್ದಗಳೂ ಇರಬೇಕು.  ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು.  ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:-

“ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.”

ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.

(i) ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.

(ii) ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ.

(iii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು.

(iv) ಓಡಾಡು, ಗುರಿ, ನಾವು, ತಿಳಿಯಬೇಕು – ಇವು ಕನ್ನಡ ಭಾಷೆಯ ಶಬ್ದಗಳು.

Explanation:

Similar questions