India Languages, asked by sadshawonoo1147, 1 year ago

explaination of kannada gade mathu kayakave kailasa

Answers

Answered by bhuvaneshwariks81
3

Answer:

'ಕಾಯಕವೇ ಕೈಲಾಸ' ಎಂದ ತಕ್ಷಣ ನೆನಪಿಗೆ ಬರುವವರು- ಬಸವಣ್ಣನವರು. ಹನ್ನೆರಡನೆಯ ಶತಮಾನದಲ್ಲಿ ಅವರು ಆಡುಭಾಷೆಯಲ್ಲಿ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ ಅವರ ವಚನಗಳು ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿ ಉಳಿದಿವೆ. ಕಾರಣ ಅಂದಿನ ಸಮಾಜದಲ್ಲಿನ ಆಗು-ಹೋಗುಗಳನ್ನು ಅವರು ಸರಳವಾಗಿ ಬಿಂಬಿಸಿದ್ದಾರೆ. ಬಸವತತ್ವ ಎಂದ ತಕ್ಷಣ ನಮಗೆ ಅನ್ನಿಸುವುದು ಜಾತಿ ನಿರ್ಮೂಲನೆ, ಕಾಯಕದ ಮಹಿಮೆ.

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ತನ್ನ ಹೊಟ್ಟೆ ತುಂಬಿಸಲು ಏನೆಲ್ಲಾ ಹರಸಾಹಸ ಮಾಡುತ್ತಾನೆ. ಒಬ್ಬ ವ್ಯವಸಾಯ ಮಾಡುತ್ತಾನೆ, ಒಬ್ಬ ಮರದ ಕೆಲಸ ಮಾಡುತ್ತಾನೆ, ಇನ್ನೊಬ್ಬ ಚಿನ್ನದ ಕೆಲಸ ಮಾಡುತ್ತಾನೆ, ಮತ್ತೊಬ್ಬ ಬಟ್ಟೆ ಹೊಲೆಯುತ್ತಾನೆ, ಮಗದೊಬ್ಬ ಚಪ್ಪಲಿ ಹೊಲೆಯುತ್ತಾನೆ ಹೀಗೆ... ಬದುಕಲೊಂದು ನೆಪ- ಈ ಕಾಯಕ. ಮಾದಿಗ, ಕಮ್ಮಾರ ಕುಂಬಾರ, ಒಕ್ಕಲಿಗ ಯಾರೇ ಆಗಲಿ ಅವರು ತಮ್ಮ ಕಾಯಕವನ್ನು ಮನಮೆಚ್ಚುವಂತೆ ಮಾಡಿದರೆ ಅದೇ ಸ್ವರ್ಗ! ಎಂಬುದು ಬಸವಣ್ಣನವರ ತತ್ವ. ಇದರಿಂದಲೇ 'ಕಾಯಕವೇ ಕೈಲಾಸ' ಎಂಬ ನುಡಿಯನ್ನಿತ್ತರು- ಬಸವಣ್ಣನವರು.

ಹನ್ನೆರಡನೆಯ ಶತಮಾನದ ಅಂದಿನ ಸಮಾಜದ ಸ್ಥಿತಿಯನ್ನು ನೋಡಿ ಬಸವಣ್ಣನವರು 'ಕಾಯಕವೇ ಕೈಲಾಸ' ಎಂದು ಘೋಷಿಸಿದ್ದರು. ಆದರಿಂದು ಆ ಮಾತಿಗೆ ಆಸ್ಪದವಿಲ್ಲ ಎಂದು ಹೇಳಬಹುದು. ಏಕೆಂದರೆ, ಇಂದಿಗೆ ಹೋಲಿಸಿದರೆ ಅಂದು ಜನಸಂಖ್ಯೆ ಕಡಿಮೆಯಿತ್ತು. ಇಂದಿನಂತೆ ಸ್ಪರ್ಧಾತ್ಮಕ ಜೀವನವಿರಲಿಲ್ಲ ಮತ್ತು ಇಂದಿನಂತೆ ಆಧುನೀಕರಣವಿರಲಿಲ್ಲ. ಕಾಯಕ ಎಂದರೆ ಅಂದು ಕುಲಕಸುಬಾಗಿತ್ತು. ಉದಾಹರಣೆಗೆ ಒಕ್ಕಲಿಗ ವ್ಯವಸಾಯವನ್ನು, ಕಮ್ಮಾರ ಕಬ್ಬಿಣದ ಕೆಲಸವನ್ನು, ಕುಂಬಾರ ಮಡಿಕೆ ಮಾಡುವುದನ್ನು, ಅಕ್ಕಸಾಲಿಗ ಚಿನ್ನದ ಕೆಲಸವನ್ನು, ಮಾದಿಗ ಚಪ್ಪಲಿ ಹೊಲಿಯುವುದು ಹೀಗೆ ಅವರವರ ಕಾಯಕದ ಮೇಲೆ ಜಾತಿಗಳು ರೂಪುಗೊಂಡಿದ್ದವು. ಅಲ್ಲದೆ, ಅಂತಹ ಕಾಯಕದಲ್ಲಿ ಸ್ಪರ್ಧೆಯಿರಲಿಲ್ಲ ಯಾರೇ ಆಗಲಿ ತಮ್ಮ ದುಡಿಮೆಯಿಂದ ಜೀವನ ಸಾಗಿಸುವುದು ಕಷ್ಟವಾಗಿರಲಿಲ್ಲ. ಕಷ್ಟಪಟ್ಟು ದುಡಿದು ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು. ಇದರಲ್ಲಿ ಸೋಮಾರಿಯೆನಿಸಿದವರನ್ನು ಕಂಡು ಏನೋ ಬಸವಣ್ಣನವರು 'ಕಾಯಕವೇ ಕೈಲಾಸ' ವಪ್ಪಾ ಕಷ್ಟಪಟ್ಟು ದುಡಿಯಯ್ಯ ಅದೇ ನಿನಗೆ ಸ್ವರ್ಗ! ಎಂದು ಹೇಳಿದ್ದು!

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವುಗಳು ಯಾವರೀತಿ ಬದುಕುತ್ತಿದ್ದೇವೆ? ನಮ್ಮ ದುಡಿಮೆ ಏನು? ನಮ್ಮ ಕಾಯಕದಲ್ಲಿ ನಮಗೆ ನೆಮ್ಮದಿಯಿದೆಯೇ? ತೃಪ್ತಿಯಿದೆಯೇ? ಮೇಲಾಗಿ ನಾವು ಎಂದಾದರೂ ನಮ್ಮ ಕಾಯಕದಲ್ಲಿ ಸ್ವರ್ಗ ಕಾಣುತ್ತೇವೆಯೋ ಎಂಬೆಲ್ಲಾ ಪ್ರಶ್ನೆಗಳು ಒಂದು ಕ್ಷಣ ನಮ್ಮ ಮನಸ್ಸಿಗೆ ಬಂದರೆ ಆ ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ನುಡಿ ನಮಗೆ ಕಿಂಚಿತ್ತೂ ಅನ್ವಯಿಸುವುದಿಲ್ಲ! ಕೆಲವರಿಗೆ ಕಷ್ಟಪಟ್ಟು ದುಡಿದರೂ ಒಂದು ಹೊತ್ತಿನ ಕೂಳಿಗೆ ಗತಿಯಿರುವುದಿಲ್ಲ, ಮತ್ತೆಕೆಲವರು ದುಡಿಮೆಯಲ್ಲಿ ಸೋಮಾರಿಯಾಗಿದ್ದುಕೊಂಡೇ ಐಷಾರಾಮಿ ಜೀವನ ನಡೆಸುತ್ತಾರೆ. ಇವೆರಡರ ಗುಂಪಿಗೆ ಸೇರದವರು ಇನ್ನೊಂದು ವರ್ಗದವರಿದ್ದಾರೆ ಅವರಿಗೆ ದುಡಿಮೆ ಎಂಬುದೇ ಇಲ್ಲ ಕಷ್ಟವೇನೆಂದರೂ ಗೊತ್ತಿರುವುದಿಲ್ಲ ಅಂತಹವರು ಅವರಿವರ ತಲೆಹೊಡೆದು, ತಲೆಹಿಡಿದು ಸಮಾಜದಲ್ಲಿ ಐಷಾರಾಮಿ ಜೀವನ ನಡೆಸುವವರು. ಪಾಪ ಅವರು ತಾನೇ ಏನು ಮಾಡಿಯಾರು? ಅವರಿಗೂ ಹೊಟ್ಟೆ ಎಂಬುದಿದೆಯಲ್ಲ? ಅದಕ್ಕೆ ಇಂತಹುದನ್ನೇ ಒಂದು 'ಕಾಯಕ' ಎಂದು ತಿಳಿದು ಈ ಕೆಲಸಕ್ಕಿಳಿಯುತ್ತಾರೋ ಏನೋ? ಅದೇನೇ ಆಗಲಿ ಇವರ ವಿಷಯ ಬಿಟ್ಟು, ಪಾಪ ಕಷ್ಟಪಟ್ಟು ದುಡಿಯುವವರ ವಿಷಯಕ್ಕೆ ಬರೋಣ.

ಇಂದಿನ ಆಧುನಿಕ ಯುಗದಲ್ಲಿ ಕೆಲಸವೆಂಬುದು ಬರೀ ಕುಲಕಸುಬಲ್ಲ; ಕಾರ್ಖಾನೆ, ಕಛೇರಿ, ಖಾಸಗಿ ಸಂಸ್ಥೆಗಳು, ಸರ್ಕಾರದ ಕಛೇರಿಗಳು ಅಲ್ಲದೆ ಸ್ವಂತ ಬಂಡವಾಳ ಹೂಡಿ ಸ್ವಉದ್ಯೋಗ ನಿರ್ವಹಿಸುವವರದೇ ಮೇಲುಗೈ. ಇದರಿಂದಲೇ ಇಂದು ಕುಲಕಸುಬುಗಳು ತಮ್ಮ ಛಾಯೆಯನ್ನೇ ಕಳೆದುಕೊಳ್ಳುತ್ತಿವೆ. ವ್ಯವಸಾಯ ಮಾಡುವವರ ಮಕ್ಕಳು ಇಂದು ಡಾಕ್ಟರ್‌, ಎಂಜಿನಿಯರ್‌ ಆಗಿರಬಹುದು, ಮಾದಿಗರ ಮಕ್ಕಳು ಸರ್ಕಾರದ ಸೇವೆಯಲ್ಲಿರಬಹುದು ಹೀಗೆ... ಇಂದು ದುಡಿಮೆಯನ್ನು ರೂಪಿಸುವುದು ವಿದ್ಯೆ. ಅವರವರ ವಿದ್ಯಾರ್ಹತೆಗೆ ತಕ್ಕಂತೆ ಅವರು ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಹಲವಾರು ಮಂದಿಗೆ ಇಂದು ಅವರು ಎಷ್ಟೇ ಓದಿದ್ದರೂ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಗಿಟ್ಟಿಸಲು ಬಲುಕಷ್ಟ.

Explanation:

ಕಾಯಕವೇ ಕೈಲಾಸ

'ಹತ್ತು ಬೆರಳುಗಳನ್ನು ಸವೆಸಿ ಐದು ಬೆರಳುಗಳಿಂದ ಉಣ್ಣು’ ಎಂಬ ಮಾತಿದೆ. ಈ ಭೂಮಿಯನ್ನು ವಾಸಸ್ಥಾನವಾಗಿ ಮನುಷ್ಯನಿಗೆ ನೀಡಿದ ಸೃಷ್ಟಿಕರ್ತ, ‘ಅವನನ್ನು ಯಾವುದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ’ ಕೊಟ್ಟನು. ಈ ಕಾರಣದಿಂದ ಮಣ್ಣಿನಿಂದ ಜೀವ ತಳೆದ ಮನುಷ್ಯ ಅದೇ ಮಣ್ಣಿನೊಂದಿಗೆ ಸಂಬಂಧ ಬೆಳೆಸಿ ತನ್ನ ಜೀವನ ನಿರ್ವಹಣೆ ಮಾಡಲಾರಂಭಿಸಿದ. ಇದು ಸೃಷ್ಟಿಕರ್ತನ ಚಿತ್ತದಂತೆ ನಡೆದಿದ್ದುದರಿಂದ ದುಡಿಮೆ, ಕೆಲಸ ಅಥವಾ ಶ್ರಮವೊಂದು ಶಾಪವಲ್ಲ, ಬದಲಾಗಿ ದೇವರ ವರದಾನ. ತಾನು ಆರಂಭಿಸಿದ ಸೃಷ್ಟಿಯ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ದೇವರು ಮನುಷ್ಯನಿಗೆ ನೀಡಿದ ಹೊಣೆಗಾರಿಕೆ.

ಈ ಸೃಷ್ಟಿ ಕಾರ್ಯದಲ್ಲಿ ಮಾನವ ಜನಾಂಗವನ್ನೂ ಬೆಳೆಸುವ ಜವಾಬ್ದಾರಿಯೂ ಸೇರಿದೆ. ಮನುಷ್ಯ ಆರಂಭದಿಂದಲೂ ಪರಿಶ್ರಮದ ದುಡಿಮೆಯ ಮೂಲಕ ತನ್ನ ಈ ಜವಾಬ್ದಾರಿಯನ್ನು ಪಾಲಿಸುತ್ತಾ ಬಂದಿದ್ದಾನೆ. ಅದರಂತೆ ಕುಟುಂಬ ಜೀವನದ ಮೂಲಕ ಮಾನವ ಜನಾಂಗವನ್ನು ಬೆಳೆಸುವ ಕಾರ್ಯದಲ್ಲೂ ತೊಡಗಿದ್ದಾನೆ. ಭೂಮಿಯನ್ನು ಉತ್ತು ಬೆಳೆ ತೆಗೆಯುವುದು ಮಾತ್ರವಲ್ಲ, ಇತರ ಕಸುಬುಗಳಲ್ಲೂ ತನ್ನನ್ನೇ ತೊಡಗಿಸಿಕೊಂಡಿದ್ದಾನೆ. ಈ ಮೂಲಕ ಪರಿಶ್ರಮದಿಂದ ತನ್ನ ಜೀವನ ನಿರ್ವಹಣೆ ಮಾಡಿಕೊಂಡಿದ್ದಾನೆ. ಕಸುಬು ಯಾವುದೇ ಇರಲಿ, ಅದರಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ಹಳ್ಳಿಯ ರೈತನಿಗೂ ದೆಹಲಿ ಆಡಳಿತಗಾರನಿಗೂ ಸಮಾನ ಗೌರವ ಸಲ್ಲಬೇಕು. ತನ್ನ ದುಡಿಮೆಯನ್ನು ಪ್ರಾಮಾಣಿಕವಾಗಿ ಮಾಡದವನೇ ಕೀಳು ಎಂಬುದು ಸತ್ಯ.

ದುಡಿಮೆ ಮಾನವನಿಗೆ ದೇವರ ವರದಾನ, ಆದರೂ ಅನೇಕರು ಇದನ್ನು ದೇವರ ಶಾಪ, ಶಿಕ್ಷೆ ಎಂದುಕೊಂಡು ಪರಿಶ್ರಮಪಡದೆ ಸೋಮಾರಿತನದಿಂದ ಕಾಲ ಕಳೆಯುವುದು ವಿಷಾದಕರ. ದುಡಿಮೆ, ಪರಿಶ್ರಮ ಪಾಪಿ ಮನುಷ್ಯನಿಗೆ ದೇವರು ನೀಡಿದ ಶಿಕ್ಷೆ ಎಂದು ಪ್ರತಿಪಾದಿಸಲು ಧರ್ಮಗ್ರಂಥಗಳ ಆಧಾರವನ್ನು ಪಡೆಯುವವರೂ ಇದ್ದಾರೆ. ಸೋಮಾರಿತನ ದೇವರ ಚಿತ್ತವಲ್ಲ. ದುಡಿಯಲು ಸಾಮರ್ಥ್ಯವಿರುವ ಪ್ರತಿಯೊಬ್ಬನೂ ದುಡಿದು ತನ್ನ ಜೀವನ ಸಾಗಿಸಬೇಕೆಂಬುದು ದೇವರ ಇಚ್ಛೆ. ಸೋಮಾರಿತನದಿಂದ ಜೀವಿಸಿ, ತಾವೂ ಪರಿಶ್ರಮಪಡದೆ, ಇತರರ ಕೆಲಸದಲ್ಲಿ ಮೂಗು ತೂರಿಸುವವರಿಗೆ ಸಂತ ಪಾವ್ಲರು ಕಠಿಣವಾದ ಮಾತುಗಳನ್ನು ಹೇಳುತ್ತಾರೆ. ‘ಕೆಲಸ ಮಾಡಲೊಲ್ಲದವನು ಊಟ ಮಾಡಬಾರದೆಂದು ನಿಮಗೆ ಆಜ್ಞಾಪಿಸಿದೆವಷ್ಟೆ. ಆದರೆ, ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಕ್ರಮವಾಗಿ ನಡೆಯುತ್ತಾರೆಂದು ಕೇಳಿದ್ದೇವೆ. ಅಂಥವರು ಮೌನವಾಗಿ ತಮ್ಮ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ಆಹಾರವನ್ನೇ ಊಟಮಾಡಬೇಕೆಂದು ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.’ ‘ಸೋಮಾರಿಯ ಮಿದುಳು ಸೈತಾನ ಕಾರ್ಯಸ್ಥಾನ’ ಎಂಬ ಮಾತಿನಂತೆ ದುಡಿಯದೆ ಇರುವ ಮನುಷ್ಯನು ಕೆಟ್ಟ ಆಲೋಚನೆ ಮತ್ತು ಕಾರ್ಯಗಳಲ್ಲಿ ಭಾಗಿಯಾಗುವ ಸಂದರ್ಭಗಳು ಬಹಳ. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ನುಡಿ ಸರ್ವಕಾಲಕ್ಕೂ ಸತ್ಯ.

Similar questions