World Languages, asked by saroja38, 4 months ago

explanation of Kannada samasa ,Sandi ,and varadhi​

Answers

Answered by candidkhushi
1

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.[೧] ಉದಾ: 'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

ಲಿಖಿತ ವರದಿಗಳು ಒಂದು ನಿರ್ದಿಷ್ಟ ವಾಚಕವೃಂದಕ್ಕೆ ಕೇಂದ್ರೀಕೃತ, ಮಹತ್ವದ ಒಳಅಂಶಗಳನ್ನು ನೀಡುವ ದಸ್ತಾವೇಜುಗಳು. ವರದಿಗಳನ್ನು ಹಲವುವೇಳೆ ಒಂದು ಪ್ರಯೋಗ, ತನಿಖೆ, ಅಥವಾ ವಿಚಾರಣೆಯ ಫಲಿತಾಂಶವನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ವಾಚಕವೃಂದವು ಸಾರ್ವಜನಿಕ ಅಥವಾ ಖಾಸಗಿ, ಒಬ್ಬ ವ್ಯಕ್ತಿ ಅಥವಾ ಒಟ್ಟಾರೆ ಜನತೆಯಾಗಿರಬಹುದು.

Similar questions