India Languages, asked by Aayushijoshi2920, 10 months ago

Forest and wild animals essay of 10-15 pages in Kannada

Answers

Answered by anantkaushik14
0

ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು ಚಿಕಿತ್ಸೆ ನೀಡಿ ಬಿಡುತ್ತದೆ.

ಮನುಷ್ಯನು ಕಾಲಕ್ರಮೇಣ ಕಾಡಿನಿಂದ ನಾಡಿನತ್ತ ಸಂಚಾರ ಮಾಡಿದ. ಕಾಡಿನ ಸೂಕ್ಷ್ಮತೆಗಳನ್ನು ಅರಿಯುವುದು ಮರೆತುಬಿಟ್ಟ. ಆದರೆ ನಾವು ಎಷ್ಟು ಮುಂದುವರೆದರೂ ಪ್ರಕೃತಿಗೆ ತಲೆಬಾಗಲೇಬೇಕು.

ನಮ್ಮ ಪೂರ್ವಜರು ಕಾಡಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ನಮ್ಮ ವೇದಗಳಲ್ಲಿ ಕೂಡ ಕಾಡಿನ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಥರ್ವ ವೇದದಲ್ಲಿ ನಾನು ನಿನ್ನಿಂದ ಏನನ್ನು ತೆಗೆದುಕೊಳ್ಳೂತ್ತೇನೂ, ಅದು ನಿನ್ನಲ್ಲಿ ಬೇಗ ಪುನಃ ಉತ್ಪನ್ನಗೊಳ್ಳಲಿ ಎಂದು ಹೇಳಲಾಗಿದೆ.

Forest means not just wild animals

ಇದನ್ನೇ ಇವತ್ತು ಸಸ್ಟೈಬಲ್ ಡೆವೆಲಪ್‌ಮೆಂಟ್ ಎನ್ನುತ್ತಾರೆ. ಈ ಒಂದು ಸಿದ್ದಾಂತವನ್ನು ಚಂದ್ರಗುಪ್ತ ಮೌರ್ಯ, ಅಕ್ಬರ್, ಶಿವಾಜಿಯವರಂತಹ ರಾಜರು ಕೂಡ ಅಳವಡಿಸಿಕೊಂಡಿದ್ದರು. ಆದರೆ ಬ್ರಿಟೀಷರು ಬಂದಾಗ ನಮ್ಮ ಮೇಲೆ ಅಷ್ಟೇ ಅಲ್ಲದೆ ಕಾಡಿನ ಸಂಪನ್ಮೂಲಗಳ ಮೇಲೆಯೂ ಶೋಷಣೆ ಮಾಡಿದರು. ಆಯುರ್ವೇದದಂತಹ ವಿದ್ಯೆ ಕೂಡ ಕಾಡನ್ನು ಅವಲಂಬಿಸಿದೆ. ಕಾಡಿನ ಸಿಗುವ ಬೇರು ಸೊಪ್ಪು ಇತ್ಯಾದಿಗಳನ್ನು ಉಪಯೋಗಿಸಿ ನಮ್ಮ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತದೆ.

ಕಾಡಿನ ಸೂಕ್ಷ್ಮತೆಯನ್ನು ಅರಿಯಲು ಶುರು ಮಾಡಿದಾಗ ಅದರ ವಿಸ್ಮಯತೆಯನ್ನು ಒಂದೊಂದಾಗಿ ಬಿಚ್ಚಿಡತೊಡಗುತ್ತದೆ. ಎಲ್ಲಿಂದಲೋ ಬೀಸುವ ಗಾಳಿ ಯಾವುದೋ ಪ್ರಾಣಿಯ ವಾಸನೆ ತಂದಿರಬಹುದು. ಇದನ್ನು ಇನ್ನೊಂದು ಪ್ರಾಣಿ ಹಿಡಿದು ಎಚ್ಚೆತ್ತುಕೊಳ್ಳುತ್ತವೆ.

Forest means not just wild animals

ಚಿಲಿಪಿಲಿ ಗುಡುವ ಹಕ್ಕಿ ಕಾಡಿನ ಕಥೆಯನ್ನು ಹೇಳುತ್ತಿರುತ್ತದೆ. ಅದರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತದೆ. ನೀವು ಯಾರಾದರೂ ಪಕ್ಷಿ ತಜ್ಞರನ್ನು ಭೇಟಿ ಮಾಡಿದರೆ ಅದು ಏನು ಹೇಳುತ್ತಿರಬಹುದೆಂದು ನಿಮಗೆ ಹೇಳಿ ಬಿಡುತ್ತಾರೆ. ನೀವು ಸಾಕಿರುವ ನಾಯಿ ಏಕೆ ಬೊಗುಳುತ್ತಿದೆ? ಏಕೆ ಸಪ್ಪಗಿದೆ? ಎಂದು ನಿಮಗೆ ಹೇಗೆ ಅರಿವಾಗುತ್ತದೆಯೋ, ಅದೇ ರೀತಿ ಅವರಿಗೂ ತಿಳಿದುಬಿಡುತ್ತದೆ.

ಕಾಡನ್ನು ಬರೀ ಪ್ರಾಣಿಗಳು ಇರುವ ಜಾಗ ಎಂಬ ಮನಸ್ಥಿತಿಯನ್ನು ನಾವು ಬಿಡಬೇಕು. ಪ್ರವಾಸಿಗರು ಸಫಾರಿಗೆ ಹೋದಾಗ ಯಾವುದೇ ಪ್ರಾಣಿ ಕಾಣದಿದ್ದಾಗ ನಿರಾಶರಾಗಿ ಬಿಡುತ್ತಾರೆ. ಎಷ್ಟೋ ಬಾರಿ ನಮಗೂ ಕೂಡ ಏನೂ ಕಂಡಿರುವುದಿಲ್ಲ. ಆದರೆ ಕಾಡಿನಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ನಮಗೆ ವಿಶೇಷ.

Forest means not just wild animals

ಒಮ್ಮೆ ನಮ್ಮ ತಂಡದೊಂದಿಗೆ ಬಂಡೀಪುರಕ್ಕೆ ಹೋಗಿದ್ದೆವು. ಹಲವಾರು ಸಫಾರಿ ಮಾಡಿದರೂ ನಮಗೆ ಯಾವುದೇ ಪ್ರಾಣಿಗಳು ಕಂಡಿರಲಿಲ್ಲ. ಆದರೆ ಕಾಡಿನಲ್ಲಿ ಸುತ್ತುವ ಅನುಭವವೇ ನಮಗೆ ವಿಶೇಷ ಎನಿಸುತ್ತಿತ್ತು. ಹಿಂತಿರುಗುವ ಹೊತ್ತಲ್ಲಿ ರಸ್ತೆಯಲ್ಲೆ ನಮಗೆ ಚಿರತೆ ಕಂಡಿತು. ಎಲ್ಲರಿಗೂ ಅಚ್ಚರಿ. ಆದರೆ, ಚಿರತೆ ಕಾಣಲಿಲ್ಲವೆಂದು ನಾವು ನಿರಾಶರಾಗಬೇಕಿಲ್ಲ. ಸಿಕ್ಕರೆ ಅದು ಬೋನಸ್.

ನಾವು ಕಾಡಿಗೆ ಹೋದಾಗ ಕಾಡನ್ನು ನೋಡುವ ರೀತಿ ಬದಲಾಗಬೇಕು. ಏನನ್ನೂ ಅಪೇಕ್ಷಿಸಿದೆ ಒಂದು ನಿರ್ಮಲ ಚಿತ್ತದಿಂದ ಹೋದಾಗ ಉತ್ತಮ ಅನುಭವವಾಗುವುದಂತೂ ಸತ್ಯ. ಎಷ್ಟೋ ಬಾರಿ ನಾವು ಪ್ರಾಣಿಗಳು ಹತ್ತಿರವಿದ್ದರೂ ನಮಗೆ ಕಂಡಿರುವುದಿಲ್ಲ. ಏಕೆಂದರೆ ಅದರ ಮೈಬಣ್ಣ ಅದನ್ನು ಮರೆಮಾಚಿ ಬಿಡುತ್ತದೆ. ಅದಕ್ಕೆ ನಾವು ಅದನ್ನು ನೋಡದಿದ್ದರೂ ಅದು ನಮ್ಮನ್ನು ನೋಡುತ್ತಿದೆ ಎಂಬ ಸೂಚನೆಯು ಕಾಡಿನಲ್ಲಿ ನಮಗೋಸ್ಕರ ಹಾಕಿರುತ್ತಾರೆ.

Forest means not just wild animals

ಭಾರತದಲ್ಲಿ 70.2 ಮಿಲಿಯನ್ ಹೆಕ್ಟೇರ್ ಜಾಗದಷ್ಟು ಕಾಡಿದೆ. ಅರಣ್ಯ ಇಲಾಖೆಯು ಇದರ ಸಂರಕ್ಷಣೆಗೆಂದು ಶ್ರಮವಹಿಸುತ್ತಿದೆ. ಕಾಡನ್ನು ಕಾಯುವ ಸಿಬ್ಬಂದಿಗಳು ತಮ್ಮ ಜೀವವನ್ನೇ ಇದಕ್ಕೆ ಮುಡಿಪಾಗಿಟ್ಟಿರುತ್ತಾರೆ. ಕಾಡಿನ ವಾಚ್‌ಗಾರ್ಡ್ಸ್ ವಷಾನುಗಟ್ಟಲೆ ಕಾಡಿನಲ್ಲೇ ಇದ್ದುಕೊಂಡು ಅದರ ಸಂರಕ್ಷಣೆಗೆ ದುಡಿಯುತ್ತಾರೆ. ಕಾಡಿನಲ್ಲಿ ಇವರಿಗೆಂದು ಆಂಟಿ ಕೋಚಿಂಗ್ ಕ್ಯಾಂಪ್ಸ್‌ಗಳನ್ನು ನಿರ್ಮಿಸಿರುತ್ತಾರೆ.

ಕಾಡೆಂದ ಮೇಲೆ ಮೊಬೈಲ್ ನೆಟ್‌ವರ್ಕ್ ಅಥವಾ ವಿದ್ಯುತ್ ಸವಲತ್ತುಗಳು ಇರುವುದಿಲ್ಲ. ಅವರನ್ನು ಭೇಟಿಯಾಗಿ ಕೆಲಹೊತ್ತು ಅವರೊಡನೆ ಸಮಯ ಕಳೆದೆವು. ಕಾಡಿಗೋಸ್ಕರ ಅವರ ಜೀವನವನ್ನು ಮುಡಿಪಾಗಿಟ್ಟಿರುವುದರಲ್ಲಿ ಅವರಿಗೆ ಹೆಮ್ಮೆಯಿದೆ. ಅವರೊಂದಿಗೆ ಕಳೆದ ಕ್ಷಣಗಳೂ ಅವಿಸ್ಮರಣೀಯವೆ. ನಮಗೆಂದು ರುಚಿಕಟ್ಟಾದ ಅಡಿಗೆ ಮಾಡಿ ಬಡಿಸಿದರು.

Forest means not just wild animals

ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದಂತಹ ಭೇಟಿಯ ಪ್ರಸಂಗ ತೀರಾ ಬೇಸರ ಮೂಡಿಸಿದೆ. ಮುಂದಿನ ವಾರ ಹೊಸ ಕಾಡುಗಳ ಪರಿಚಯ ಮಾಡಿಸುತ್ತೇನೆ. ಹಾಗಾಗಿ ಕಾಡೆಂದರೆ ಏನು, ಅದನ್ನು ಯಾವ ರೀತಿ ನೋಡಬೇಕೆಂದು ನಿಮಗೆ ನನ್ನ ಅಭಿಪ್ರಾಯವನ್ನು ತಿಳಿಸಲು ಬಯಸಿದೆ. ನೀವೂ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ.

ಇನ್ನಷ್ಟು FOREST ಸುದ್ದಿಗಳು arrow_forward

ಹಾವೇರಿ ಅರಣ್ಯದಲ್ಲಿ ನಡೆಯುತ್ತಿದೆ ನೀರು ಇಂಗಿಸುವ ಅಪರೂಪದ ಕೆಲಸ

ರಾಮನಗರದಲ್ಲಿ ವೃದ್ಧೆ ಮೇಲೆ ಕರಡಿ ದಾಳಿ

ಎದೆ ನಡುಗಿಸುವ ವಿಡಿಯೋ; ಸಫಾರಿಗೆ ಹೋದವರ ಬೆನ್ನಟ್ಟಿದ ಹುಲಿ

ಆನಂದ್ ಸಿಂಗ್ ಪ್ರಕರಣವನ್ನು ಮುಚ್ಚಿಹಾಕಲ್ಲವೆಂದ ಸಚಿವ ಸೋಮಶೇಖರ್

ಅರಣ್ಯ ಒತ್ತುವರಿ ಆರೋಪ: ಸಚಿವ ಆನಂದ್ ಸಿಂಗ್ ಧಿಮಾಕಿನ ಮಾತು

ಭಾರತದಲ್ಲಿ ಅಳಿವಿನಂಚಿಗೆ ಸರಿಯುತ್ತಿವೆ ಚಿರತೆಗಳು: ಆಘಾತಕಾರಿ ವರದಿ

Read More About:ಅರಣ್ಯಕಾಡು ಪ್ರಾಣಿ

English Summary

Forest means not just wild animals. There is something beyond imagination. There is green, birds, music, smell, tribals, fresh air... Many more things. One should learn to enjoy every moment in forest.

Answered by preetykumar6666
0

ಅರಣ್ಯ ಮತ್ತು ಕಾಡು ಪ್ರಾಣಿಗಳು:

ಭೂಮಿಯ ವಾತಾವರಣ ಮತ್ತು ಜಾಗತಿಕ ತಾಪಮಾನ ಏರಿಕೆಯ ರಕ್ಷಣೆ ಮತ್ತು ಸ್ಥಿರತೆಗೆ ಅರಣ್ಯ ಅತ್ಯಂತ ಮುಖ್ಯವಾಗಿದೆ. ಮನೆಯ ಪ್ರದೇಶಗಳಲ್ಲಿ ವಿಶ್ವದ ಜೀವನ ವಿಧಾನದಲ್ಲಿ ಮನುಷ್ಯನಿಗೆ ಕಾಡುಗಳು ಅವಶ್ಯಕ. ಮಣ್ಣಿನ ಮೇಲೆ, ಹವಾಮಾನದಲ್ಲಿ ಮತ್ತು ಪ್ರಪಂಚದ ಪರಿಸರದ ಮೇಲೆ ಕಾಡಿನ ಪ್ರಮುಖ ಪಾತ್ರವಿದೆ, ಏಕೆಂದರೆ ಅದು ಕಾಡಿನ ಬದಲಾವಣೆಯನ್ನು ಪಡೆದಾಗ ಅದು ನಾಶವಾಗುತ್ತದೆ ಮತ್ತು ಅದು ಇಡೀ ಹವಾಮಾನದ ಮೇಲೆ ಮತ್ತು ಭೂಮಿಯ ಗೋಳದ ಮೇಲೆ ಪರಿಣಾಮ ಬೀರುತ್ತದೆ.

ಪ್ರಪಂಚದ ವಾತಾವರಣದ ಉಳಿತಾಯದ ದೃಷ್ಟಿಯಿಂದ ಪ್ರಕೃತಿಯನ್ನು ಉಳಿಸಲು ಇಡೀ ಜಗತ್ತಿನಲ್ಲಿ ಅರಣ್ಯ ಸಂರಕ್ಷಣೆ ಬಹಳ ಅವಶ್ಯಕ ವಿಷಯವಾಗಿದೆ.

ಭಾರತದಲ್ಲಿ 1972 ರಲ್ಲಿ ಮರವನ್ನು ಉಳಿಸುವ ಕ್ಷಣವನ್ನು ಪ್ರಾರಂಭಿಸಿದ ಮೂಲವಿತ್ತು, ಆ ಕ್ಷಣದಲ್ಲಿ, ಭಾಗವಹಿಸುವವರು ಮರಗಳನ್ನು ಉಳಿಸುವ ಕರ್ತವ್ಯದ ಪೂರ್ಣ ದಿನವನ್ನು ಪ್ರಾರಂಭಿಸಿದ್ದಾರೆ. ಆ ಸಮಯದಲ್ಲಿ ಮರಗಳು ಕಡಿಯುತ್ತಿವೆ ಮತ್ತು ಅರಿವಿಲ್ಲದ ಕೆಲವರು ಮರವಿಲ್ಲದೆ ಸಂಭವಿಸಿದ ಕಾರಣಗಳನ್ನು ರೂಪಿಸುತ್ತಾರೆ, ಅವರು ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದರು.

ಕಾಡು ಪ್ರಾಣಿ ಎಂದರೆ ಪ್ರಾಣಿ, ಅಂದರೆ ಕಾಡು. ಇದರರ್ಥ ಇದು ಪಳಗಿದಂತಿಲ್ಲ ಮತ್ತು ಜನರ ಯಾವುದೇ ಸಹಾಯವಿಲ್ಲದೆ ಅದು ತನ್ನದೇ ಆದ ಮೇಲೆ ವಾಸಿಸುತ್ತದೆ. ಕಾಡು ಪ್ರಾಣಿ ತನ್ನದೇ ಆದ ಆಹಾರ, ಆಶ್ರಯ, ನೀರು ಮತ್ತು ಇತರ ಎಲ್ಲ ಅಗತ್ಯಗಳನ್ನು ನಿರ್ದಿಷ್ಟ ನೈಸರ್ಗಿಕ ಆವಾಸಸ್ಥಾನದಲ್ಲಿ ಕಂಡುಕೊಳ್ಳುತ್ತದೆ. ಆವಾಸಸ್ಥಾನವು ಒಂದು ಕ್ಷೇತ್ರ, ಕಾಡು, ಕೊಳ, ಗದ್ದೆ, ಹುಲ್ಲುಗಾವಲು, ಉದ್ಯಾನವನ ಅಥವಾ ನಿಮ್ಮ ಪ್ರಾಂಗಣವಾಗಿರಬಹುದು.

Similar questions