India Languages, asked by BrundansaiCH, 1 day ago

formal and informal Letter writting format in Kannada​

Answers

Answered by binasarma8
0

Answer:

About Kannada Rajyotsava Kannada Careerindia from kannada.careerindia.com

• informal written to informal letter format in kannada. Before we go through the format of the informal letter it is important to understand the meaning and purpose behind writing the informal letter. Informal writing has a clear structure and generally accepted standards. This video is about anopcharik patra lekhan in hindi two friend for inviting him or her on your sister's or brother's marriage and. Vanijya patra lekhan kaise likhe? Need to translate ಪತ್ರ (patra) from kannada? I have wrote in english but it is informal kannada letter. But there is a general pattern, some conventions that people usually follow.

Answered by madappabhuvan
0

ಔಪಚಾರಿಕ ಪತ್ರದ ವಿವರಣೆ / Formal letter definition: ಸ್ವರೂಪವು ಇನ್ನೂ ಪ್ರಮುಖ ಸ್ಥಳಗಳಲ್ಲಿ ಚಲಾವಣೆಯಲ್ಲಿದೆ. ವಾಣಿಜ್ಯ, ವ್ಯಾಪಾರ, ಅಧಿಕೃತ ಪತ್ರವ್ಯವಹಾರ, ಸಾರ್ವಜನಿಕ ಪ್ರಾತಿನಿಧ್ಯ, ಬ್ಯಾಂಕ್, ದೂರುಗಳು ಮತ್ತು ಇತರ ವ್ಯವಹಾರಗಳು, ವಹಿವಾಟುಗಳು ಮತ್ತು ಜನರೊಂದಿಗೆ ಸಂವಹನವನ್ನು ಔಪಚಾರಿಕ ಪತ್ರಗಳ ಮೂಲಕ ನಡೆಸಲಾಗುತ್ತದೆ.

ಆದ್ದರಿಂದ, ಪತ್ರ ಬರೆಯುವ ಕಲೆ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಿದೆ. ಪತ್ರದಲ್ಲಿ ಯಾವಾಗಲೂ ಸರಳ ಮತ್ತು ಪರಿಣಾಮಕಾರಿ ಭಾಷೆಯನ್ನು ಬಳಸಬೇಕು ಇದರಿಂದ ಪತ್ರವನ್ನು ಸ್ವೀಕರಿಸುವ ವ್ಯಕ್ತಿಯು ನೀವು ಯಾವ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಿದ್ದೀರೆಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಔಪಚಾರಿಕ ಪತ್ರದ ಬರವಣಿಗೆಯ ಸ್ವರೂಪವನ್ನು ಕೆಳಗೆ ಉಲ್ಲೇಖಿಸಲಾಗಿದೆ / Format of Kannada formal letter writing is given below:

ಕಳುಹಿಸುವವರ ವಿಳಾಸ / From Address

ದಿನಾಂಕ / Date

ಸ್ವೀಕರಿಸುವವರ ವಿಳಾಸ / To Address

ವಿಷಯ / Subject

ವಂದನೆ / Wishes

ಪತ್ರದ ಸಾರಾಂಶ / Matter or body of the letter

ಪತ್ರ ಕೊನೆಗೊಳಿಸುವುದು / Closing of letter

ಸಹಿ / Signature: ಕಳುಹಿಸುವವರ ಹೆಸರು / Sender’s Name, ಕಳುಹಿಸುವವರ ಸಹಿ / Sender’s Signature

ಕಳುಹಿಸುವವರ ವಿಳಾಸ / From Address : ಇದು ಕಳುಹಿಸುವವರಿಗೆ ಉತ್ತರ ಪತ್ರ (Return Letter) ಕಳಿಸುವ ವಿಳಾಸವಾಗಿದೆ. ಈ ಸ್ಥಳದಲ್ಲಿ ಪತ್ರವನ್ನು ಕಳುಹಿಸುವ ವ್ಯಕ್ತಿಯ ವಿಳಾಸ(Address) ಮತ್ತು ಸಂಪರ್ಕ ವಿವರಗಳನ್ನು(Contact details) ಇಲ್ಲಿ ಬರೆಯಲಾಗುತ್ತದೆ.

ದಿನಾಂಕ / Date : ಕಳುಹಿಸುವವರ ವಿಳಾಸದ ನಂತರ ಪತ್ರವನ್ನು ಬರೆದ ದಿನಾಂಕವನ್ನು ನಮೂದಿಸಬೇಕು. ದಿನಾಂಕವು ಪತ್ರವು ಎಂದು ಬರೆಯಲ್ಪಟ್ಟಿದೆ ಎಂದು ಅರಿಯಲು ಸಹಾಯ ಮಾಡುತ್ತದೆ.

ಸ್ವೀಕರಿಸುವವರ ವಿಳಾಸ / To Address : ಪತ್ರ ಸ್ವೀಕರಿಸುವವರ ವಿಳಾಸವನ್ನು ಇಲ್ಲಿ ನಮೂದಿಸಬೇಕು. ವ್ಯಕ್ತಿ (ಹುದ್ದೆಯೊಂದಿಗೆ) ಅಥವಾ ಸಂಸ್ಥೆಯ ಹೆಸರು ಮತ್ತು ನಂತರ ಪಿನ್‌ಕೋಡ್ ಸಹಿತ ಪೂರ್ಣ ವಿಳಾಸವನ್ನು ಬರೆಯಬೇಕು.

ವಿಷಯ / Subject : ಇದು ಪತ್ರ ಬರೆಯುವ ಗುರಿಯನ್ನು ಎತ್ತಿ ತೋರಿಸುತ್ತದೆ. ಔಪಚಾರಿಕ ಪತ್ರದ ವಿಷಯವು ಬಹಳ ಸಂಕ್ಷಿಪ್ತವಾಗಿರಬೇಕು ಮತ್ತು ‘ವಿಷಯ’ ಎಂಬ ಪದವನ್ನು ಮೊದಲು ಬರೆದಿರಬೇಕು. ಓದುವವರು ವಿಷಯದ ಮೂಲಕ ಪತ್ರದ ಉದ್ದೇಶವನ್ನು ಒಂದು ಒಂದೇ ಬಾರಿಗೆ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.

ವಂದನೆ / Wishes : ಪತ್ರವನ್ನು ಸ್ವೀಕರಿಸುವವರಿಗೆ ಇದು ಸಾಂಪ್ರದಾಯಿಕ ಶುಭಾಶಯವಾಗಿದೆ. ಸ್ವೀಕರಿಸುವವರ ಹೆಸರು ತಿಳಿದಿದ್ದರೆ, ವಂದನೆಯು ‘ಆತ್ಮೀಯ’ ಎಂಬ ಪದದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಶ್ರೀ / ಶ್ರೀಮತಿ / ಮಿಸ್, ಇತ್ಯಾದಿ ಪದಗಳನ್ನು ಬಳಸಬಹುದು. ವ್ಯಕ್ತಿಯು ಅಪರಿಚಿತರಾಗಿದ್ದರೆ ಅಥವಾ ಲಿಂಗ ತಿಳಿದಿಲ್ಲದಿದ್ದರೆ ಸ್ವೀಕರಿಸುವವರನ್ನು ಆತ್ಮೀಯ ಸರ್ / ಆತ್ಮೀಯ ಮೇಡಮ್ ಎಂದೂ ಕೂಡ ಸಂಬೋಧಿಸಬಹುದು.

ಸಾರಾಂಶ / Matter or body of the letter : ಸಾರಾಂಶವು ಯಾವುದೇ ಪತ್ರದ ಪ್ರಮುಖ ಅಂಶವಾಗಿದೆ. ಪತ್ರ ಬರೆಯುವ ಮೂಲ ಉದ್ದೇಶವನ್ನು ಇಲ್ಲಿ ತಿಳಿಯಬಹುದು. ಔಪಚಾರಿಕ ಪತ್ರಗಳಲ್ಲಿ, ಸಾರಾಂಶವನ್ನು ತಿಳಿಸಲು ಅಭ್ಯರ್ಥಿಗಳು ಚಿಕ್ಕ ಮತ್ತು ಸ್ಪಷ್ಟವಾಗಿರುವಂತಹ ಪ್ಯಾರಾಗಳನ್ನು ಬಳಸಬೇಕು.

ಪತ್ರದ ಸಾರಾಂಶವನ್ನು ಸಾಮಾನ್ಯವಾಗಿ 3 ವಿಧಗಳಲ್ಲಿ ವಿಂಗಡಿಸಲಾಗಿದೆ / Body of the letter is been divided into 3 parts:

ಆರಂಭ (Introduction): ಮುಖ್ಯ ವಿಷಯವನ್ನು ತಿಳಿಸುವ ಪರಿಚಯ.

ಮಧ್ಯ ಭಾಗ (Middle content): ಪತ್ರ ಬರವಣಿಗೆಯ ಉದ್ದೇಶ ಮತ್ತು ಪತ್ರದ ಪ್ರಾಮುಖ್ಯತೆಯನ್ನು ಸಮರ್ಥಿಸುವ ಅಂಶಗಳು ಮತ್ತು ವಿವರಗಳು.

ತೀರ್ಮಾನ / Conclusion: ಕ್ರಮ ಕೈಗೊಳ್ಳಲು ವಿನಂತಿ ಅಥವಾ ಪತ್ರದ ಮುಖೇನ ಏನನ್ನು ನಿರೀಕ್ಷಿಸಲಾಗಿದೆ ಎಂಬ ಮಾಹಿತಿ.

ಪತ್ರ ಕೊನೆಗೊಳಿಸುವುದು / Closing of Letter : ಇದು ‘ನಿಮ್ಮ ನಿಷ್ಠೆಯಿಂದ’, ‘ನಿಮ್ಮ ಪ್ರಾಮಾಣಿಕ’, ಇತ್ಯಾದಿ ಶಬ್ಧ ಬಳಸುವ ಮೂಲಕ ಸಭ್ಯ ರೀತಿಯಲ್ಲಿ ಪತ್ರವನ್ನು ಕೊನೆಗೊಳಿಸುವುದು.

ಸಹಿ / Signature : ಪತ್ರವನ್ನು ಕಳುಹಿಸುವವರು ತನ್ನ ಮೊದಲ ಅಥವಾ ಕೊನೆಯ ಹೆಸರಿನೊಂದಿಗೆ ಸಹಿ ಮಾಡುವ ಕೊನೆಯ ಭಾಗವಾಗಿದೆ.

Kannada letter writing format

ಔಪಚಾರಿಕ ಪತ್ರದ ಉದಾಹರಣೆ – 1 / Formal letter writing in Kannada example – 1

ನೀವು ಶಾಲೆಯೊಂದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ. ಶಾಲೆಯ ಮಕ್ಕಳಿಗಾಗಿ 500 ಬರೆಯುವ ಪುಸ್ತಕ ಕಳಿಸಿಕೊಡುವಂತೆ ಸ್ನೇಹ ಪುಸ್ತಕ ಭಂಡಾರ್ ಗೆ ಪತ್ರ ಬೆರೆಯಿರಿ (Assume that you are working as a librarian in a school, write a letter to Sneha book house asking for sending 500 notebooks for school children).

ಇಂದ,

ಸಂಪಿಗೆ ಶಾಲೆ , ಜಯನಗರ

ಬೆಂಗಳೂರು – 560001

ದಿನಾಂಕ : 15 ಜೂನ್ 2021

ರಿಗೆ,

ಮ್ಯಾನೇಜರ್

ಸ್ನೇಹ ಪುಸ್ತಕ ಭಂಡಾರ್ , 5ನೇ ಕ್ರಾಸ್, ಅವೆನ್ಯೂ ರಸ್ತೆ

ಬೆಂಗಳೂರು – 560002

ಮಾನ್ಯರೇ,

ವಿಷಯ: ಶಾಲೆಗೆ 500 ಬರೆಯುವ ಪುಸ್ತಕಗಳನ್ನು ಕೋರಿ ಪತ್ರ.

ನಮ್ಮ ಶಾಲಾ ವಿದ್ಯಾರ್ಥಿಗಳಿಗೆ 500 ಬರೆಯುವ ಪುಸ್ತಕಗಳ ಅಗತ್ಯವಿರುವುದರಿಂದ ತಾವು ಆದಷ್ಟು ಬೇಗನೇ ಪುಸ್ತಕಗಳನ್ನು ಕಳಿಸಿಕೊಡಬೇಕೆಂದು ಮತ್ತು ಈ ಪತ್ರದ ಸ್ವೀಕೃತಿಯನ್ನು ದಯವಿಟ್ಟು ಅಂಗೀಕರಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ತಮ್ಮ ವಿಶ್ವಾಸಿ

ಗಣೇಶ್

(ಗ್ರಂಥಪಾಲಕ)

ಔಪಚಾರಿಕ ಪತ್ರದ ಉದಾಹರಣೆ – 2 / Formal letter writing in Kannada example – 2

ನೀವು ಮೈಸೂರಿನ ಜಯನಗರದ ನಿವಾಸಿ. ನಿಮ್ಮ ಪ್ರದೇಶದಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕೋರಿ ನಿಮ್ಮ ನಗರದ ಮೇಯರ್‌ಗೆ ಪತ್ರ ಬರೆಯಿರಿ (You are resident of Jayanagar colony Mysore. Write a letter to your city Mayor regarding waterlogging after heavy rainfall along with the water logging problems).

ಇಂದ,

15, ಜಯನಗರ

ಮೈಸೂರು

ದಿನಾಂಕ: 20 ಮೇ 2021

ಗೆ,

ಮೇಯರ್

ಮೈಸೂರು

ವಿಷಯ: ಜಯನಗರದ ಕಾಲೋನಿಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರು.

ಸರ್ / ಮೇಡಂ,

ನಾನು ಕುಮಾರ್, ಜಯನಗರದ ಕಾಲೋನಿ ನಿವಾಸಿ. ನೀರು ನಿಲ್ಲುವುದರಿಂದ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನೀರು ಹೆಚ್ಚಾಗಿ ಈ ಪ್ರದೇಶ ನೀರಿನಿಂದ ತುಂಬಿಕೊಳ್ಳುತ್ತದೆ. ಪ್ರದೇಶ ಸಮಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪರಿಸ್ಥಿತಿ ಹಾಗೆಯೇ ಇದೆ. ನೀರಿನಿಂದ ಹರಡುವ ರೋಗಗಳು ಹರಡುತ್ತಿರುವುದರಿಂದ ಇಲ್ಲಿನ ನಿವಾಸಿಗಳ ಬದುಕು ದುಸ್ತರವಾಗಿದೆ. ಮನೆಗಳೆಲ್ಲ ಮುಳುಗಡೆಯಾಗಿದ್ದು, ಸಂಕಷ್ಟದ ಸಮಯ ಎದುರಿಸುತ್ತಿದ್ದೇವೆ

Similar questions