India Languages, asked by RathanachariT, 8 months ago

ತಾಳಿದವನು ಬಾಳಿಯಾನು ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ ಪೀಠಿಕೆ ,, ವಿಷಯ ನಿರೂಪಣೆ ಪ್ಲಸ್ ಹೆಲ್ಪ್ ಮೀ frnzz​

Answers

Answered by rrr7397
70

Answer:

ಗಾದೆಯ ವಿಸ್ತರಣೆ: ತಾಳಿದವನು ಬಾಳಿಯಾನು

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದೆಂಬ ಮಾತು ಜನಜನಿತವಾಗಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಅಮೂಲ್ಯವಾದ ಅಗಣಿತ ಗಾದೆ ಮಾತುಗಳಲ್ಲಿ ‘ತಾಳಿದವನು ಬಾಳಿಯಾನು’ ಎಂಬ ಗಾದೆಯೂ ಒಂದಾಗಿದೆ. ದುಡುಕು, ಕೋಪ, ಆತುರ ಮುಂತಾದವು ಅನರ್ಥಸಾಧನಗಳು. ಜೀವನದಲ್ಲಿ ಏಳು ಬೀಳುಗಳು, ಕಷ್ಟ ಕಾರ್ಪಣ್ಯ, ಸುಖ ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ, ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು ತಾಳ್ಮೆಯಿಂದಿರಬೇಕು. ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು. ದಾಸರ ನುಡಿಯಂತೆ ‘ತಾಳುವಿಕೆಗಿಂತ ತಪವಿಲ್ಲ’. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳುವಂತೆ ''ಈಸಬೇಕು, ಇದ್ದು ಜಯಿಸಬೇಕು'' ಪ್ರವಾಹ ಎದುರಾದರೂ ಈಜಿ ಆಚೆಯ ದಡವನ್ನು ಸೇರುವ ಮನೋಭಾವ ಇರಬೇಕು. ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು. ಅದು ಜೀವನವನ್ನು ಬಲಿತೆಗೆದುಕೊಳ್ಳುತ್ತದೆ. ಬಂದ ಪರಿಸ್ಥಿತಿಯನ್ನು ತಾಳ್ಮೆಯಿಂದ ಧೈರ್ಯದಿಂದ ಎದುರಿಸಿದಾಗ ಬದುಕು ಗಟ್ಟಿಯಾಗುತ್ತಾ ಮುಂದೆ ಸಾಗುತ್ತದೆ. ಯಾವುದೇ ಭಾವನೆ, ಮಾತು, ಕೆಲಸವಿರಲಿ ಅದನ್ನು ಯೋಚಿಸಿ, ಪರಾಮರ್ಶಿಸಿ ನೋಡಬೇಕೇ ವಿನಃ ಯಾವುದೇ ಕಾರಣಕ್ಕೂ ದುಡುಕಬಾರದು. ಏನೇ ಮಾಡಿದರೂ ಎರಡೆರಡು ಸಲ ಯೋಚನೆ ಮಾಡಿ ಮಾಡಬೇಕು. ಇದಕ್ಕೆ ತಾಳ್ಮೆಬೇಕು ದುಡುಕಿನ ನಿರ್ಧಾರ ಬೇರೊಬ್ಬರ ಅಥವ ನಮ್ಮ ಜೀವನದ ಮೇಲೆಯೇ ಭಾರಿ ಪರಿಣಾಮ ಉಂಟುಮಾಡಬಹುದು. ತಾಳ್ಮೆಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆಯಿದೆ. ಇಂದಿನ ಜೀವನ ಶೈಲಿಯಲ್ಲಂತು ಹೆಚ್ಚು ಬೇಡಿಕೆಯೂ ಇದೆ ಎಂದರೆ ತಪ್ಪಾಗಲಾರದು. ತಾಳ್ಮೆಗಾಗಿ ತೀವ್ರ ಹಂಬಲಿಸುವವರಿಗೆ ಹೆಚ್ಚಿನ ತಾಳ್ಮೆ ಬೇಕು. ತಾಳ್ಮೆ ಎಂದರೆ ಕೇವಲ ಕಾಯುವಿಕೆಯಲ್ಲ. ಕಾಯುವಿಕೆಯ ಪ್ರಕ್ರಿಯೆಯಲ್ಲಿ ನಾವು ತೋರುವ ಉತ್ತಮ ನಡವಳಿಕೆಯೇ ನಿಜವಾದ ತಾಳ್ಮೆ. ಮೇಲ್ನೋಟಕ್ಕೆ ತಾಳ್ಮೆಯು ಅತಿ ಕಷ್ಟವೆಂದು ಕಂಡರೂ, ಅದು ನೀಡುವ ಫಲಮಾತ್ರ ಸದಾ ಸಿಹಿಯಿಂದ ಕೂಡಿರುತ್ತದೆ. ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು. ತಾಳ್ಮೆಯಿದ್ದಲ್ಲಿ ಪ್ರೀತಿಯು ಜನಿಸುತ್ತದೆ. ತಾಳ್ಮೆಯಿದ್ದಲ್ಲಿಭರವಸೆಯು ಬೆಳೆಯುತ್ತದೆ. ತಾಳ್ಮೆಯಿಂದಿದ್ದರೆ ಅಲ್ಲಿ ನಂಬಿಕೆಯು ನೆಲೆಸುತ್ತದೆ. ಪ್ರೀತಿ, ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಯನ್ನು ಲೋಕವೇ ಮನ್ನಿಸಿ, ಗೌರವಿಸಿ, ನಮಿಸುತ್ತದೆ. ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ, ಅದೊಂದು ಬಗೆಯ ಜ್ಞಾನವೂ ಹೌದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲಾ ಒಂದು ಪರಿಹಾರವಿದ್ದೇ ಇದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲೇ ಬೇಕು. ತಾಳ್ಮೆಯು ಇದನ್ನು ಪ್ರತಿಪಾದಿಸುತ್ತದೆ. ಕೆಸರು ತುಂಬಿ ರಾಡಿಯಾಗಿರುವ ಕೊಳದಲ್ಲಿನ ನೀರನ್ನು ಹಾಗೇ ಬಿಟ್ಟರೆ ನಿಧಾನವಾಗಿ ಮಣ್ಣೆಲ್ಲಾ ತಳಭಾಗವನ್ನು ಸೇರಿ ನೀರು ತಿಳಿಯಾಗುತ್ತದೆ. ಹರಿಯಲು ಬಿಟ್ಟರೆ ಪರಿಶುದ್ಧವೂ ಆದೀತು. ಹಾಗೆಯೇ ಬದುಕಿನಲ್ಲೂ ಕೆಲವೊಂದು ಕಷ್ಟಗಳು ನಮ್ಮಲ್ಲಿ ಆತಂಕ, ತಳಮಳ ಕಳವಳಗಳನ್ನುಂಟು ಮಾಡುತ್ತವೆ, ನಾವು ಸಂಕಷ್ಟಗಳಿಗೆ ನಲುಗದೆ ತಾಳ್ಮೆಯಿಂದ ಕಾದದ್ದೇ ಆದರೆ ಮುಂದೊಂದು ದಿನ ಆ ಕಷ್ಟಗಳೇ ಕಾಣದಂತೆ ಕಮರಿಹೋಗುತ್ತವೆ. ತಾಳ್ಮೆಯ ಕೊರತೆಯಿಂದ ತಲೆದೋರುವ ತಾಪತ್ರಯಗಳು ಊಹಿಸಲಸಾಧ್ಯ. ತಾಳ್ಮೆಯ ಅನುಪಸ್ಥಿತಿಯಿಂದ ಸುಮಧುರ ಸಂಬಂಧಗಳು ಹಾಳಾಗುತ್ತವೆ. ಗೆಲುವ ಪಡೆವ ಜಾಗದಲ್ಲಿ ನಾವು ಸೋಲನ್ನು ಕಂಡದ್ದೇ ಆದರೆ ತಾಳ್ಮೆಯನ್ನು ಮರೆತದ್ದೇ ಅದಕ್ಕೆ ಕಾರಣವಾಗಿರಬಹುದು. ಶೃತಿಬದ್ಧ ಹಾಡುಗಾರಿಕೆ ಹಾಗೂ ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳುವುದು ಬದುಕಿನಲ್ಲಿ ತಾಳ್ಮೆಬೇಕು. ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ. ಮಾಡುವ ಕೆಲಸ ಸಣ್ಣದೇ ಇರಲಿ, ದೊಡ್ಡದೇ ಆಗಿರಲಿ, ಸಹನೆಯಿಂದ ವಿವೇಚನೆಯೊಂದಿಗೆ ಮಾಡಿದರೆ ಅದರ ಫಲ ನಿಜಕ್ಕೂ ಅತ್ಯುತ್ತಮವಾಗಿರುತ್ತದೆ. ತಾಳ್ಮೆಗೆ ಕಾಯುವ ಗುಣ ಬೇಕು. ‘ಆತುರಗಾರನಿಗೆ ಬುದ್ಧಿಮಟ್ಟ' ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಪಡೆಯಬೇಕೆಂದರೆ ಕಾಯಬೇಕು. ಕಾಯುವಂಥ ಸಹನೆ ಬೇಕು. ತಾಳ್ಮೆಯಿಂದ ತಪಸ್ಸು ಮಾಡಿದಾಗ ಸಿಗುವ ಫಲ ತುಂಬ ರುಚಿಯಾಗಿರುತ್ತದೆ, ಮಹತ್ವದ್ದಾಗಿರುತ್ತದೆ ಎಂಬಮಾತು ಸಾರ್ವಕಾಲಿಕ ಸತ್ಯ. ಆ ಗುಣ ಇಲ್ಲದವರು ತಮ್ಮದೇ ಭ್ರಮಾಲೋಕದಲ್ಲಿ ಮುಳುಗಿ ಹೋಗುತ್ತಾರೆ. ನಾವು ಎಷ್ಟೇ ಒಳ್ಳೆಯ ಗುಣಗಳನ್ನು ಹೊಂದಿದ್ದರೂ ತಾಳ್ಮೆಯೊಂದಿಲ್ಲದಿದ್ದರೆ ಆ ಒಳ್ಳೆಯ ಗುಣಗಳಿಗೆ ಬೆಲೆ ಸಿಗುವುದು ದುಸ್ತರ. ಹಿರಿಯರು ಹೇಳುವಂತೆ ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ.

it might help you.....

friends not frnzz.... ☜ this might help you more...

Answered by rajareddyefl
33

Explanation:

i think it may help you

Similar questions