Gandhi Jayanthi information in kannada
Answers
Answer:
ದೇಶದ ರಾಷ್ಟ್ರಪಿತ ಎಂದೇ ಖ್ಯಾತಿ ಗಳಿಸಿರುವ ಮಹಾತ್ಮ ಗಾಂಧಿ ಅಕ್ಟೋಬರ್ 2, 1869 ರಂದು ಜನಿಸಿದರು. ಇನ್ನು ಅಹಿಂಸೆ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇವರ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ಗಾಂಧೀಜಿಯವರ ಪೂರ್ತಿ ಹೆಸರು ಮೋಹನ್ ದಾಸ್ ಕರಮ ಚಂದ್ರ ಗಾಂಧಿ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಇವರ ಪಾತ್ರ ತುಂಬಾ ಹಿರಿದು. ಈ ಗಣ್ಯ ವ್ಯಕ್ತಿಯ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂದು ಚೆಕ್ ಮಾಡಲು ಇಲ್ಲಿ ಕೆಲವು ಪ್ರಶ್ನೆಗಳನ್ನ ನೀಡಲಾಗಿದೆ. ಇವುಗಳಲ್ಲಿ ನೀವೆಷ್ಟು ಪ್ರಶ್ನೆಗೆ ಸರಿಯಾದ ಉತ್ತರ ನೀಡಬಲ್ಲೀರಿ ಎಂದು ಚೆಕ್ ಮಾಡಿಕೊಳ್ಳಿಮಹಾತ್ಮ ಗಾಂಧೀಜಿಯ ಕುರಿತ್ತಾದಂತಹ ಪ್ರಮುಖ15 ಪ್ರಶ್ನೆಗಳು ಹೀಗಿವೆ
1. ಮಹಾತ್ಮ ಗಾಂಧಿಯವರು ಎಂದು ಹಾಗೂ ಎಲ್ಲಿ ಜನಿಸಿದರು?
ಉತ್ತರ: ಅಕ್ಟೋಬರ್ 02, 1869 ರಂದು ಗುಜರಾತಿ ಪೋರಬಂದರಿನಲ್ಲಿ ಜನಿಸಿದರು
2. ಮಹಾತ್ಮ ಗಾಂಧಿಯವರ ತಂದೆ-ತಾಯಿ ಹಾಗೂ ಪತ್ನಿ ಮತ್ತು ಮಕ್ಕಳ ಹೆಸರೇನು?
ಉತ್ತರ: ತಂದೆ ಕರಮಚಂದ್ರ ಗಾಂಧಿ ಹಾಗೂ ತಾಯಿ ಪುತಲೀಬಾಯಿ ಮತ್ತು ಪತ್ನಿ ಕಸ್ತೂರ ಬಾ. ಇನ್ನು ಗಾಂಧಿಯವರಿಗೆ ೪ ಜನ ಮಕ್ಕಳಿದ್ದು, ಅವರ ಹೆಸರುಗಳು ಹೀಗಿವೆ ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ, ರಾಮದಾಸ್ ಗಾಂದಿ ಮತ್ತು ದೇವದಾಸ್ ಗಾಂಧಿ.3. ಮಹಾತ್ಮ ಗಾಂಧಿಯವರಿಗೆ ಎಷ್ಟನೇ ವಯಸ್ಸಿಗೆ ವಿವಾಹವಾಯಿತು?
ಉತ್ತರ:13 ವರ್ಷ
4.ಮಹಾತ್ಮ ಗಾಂಧಿ ಅವರ ಹತ್ಯೆ ಯಾವಾಗಾ ಆಯಿತು ಹಾಗೂ ಹತ್ಯೆಗೈದವರಾರು?
ಉತ್ತರ :30-01-1948 , ನಾಥೂರಾಮ್ ವಿನಾಯಕ್ ಗೋಡ್ಸೆ
5. ಮಹಾತ್ಮ ಗಾಂಧಿ ಅವರು ಯಾವ ಸುದ್ದಿ ಪತ್ರಿಕೆ ಸಂಪಾದಕರಾಗಿದ್ದರು?
ಉತ್ತರ: ದಕ್ಷಿಣ ಆಫ್ರಿಕಾದಲ್ಲಿನ ಇಂಡಿಯನ್ ಒಪಿನಿಯನ್ ಪತ್ರಿಕೆ, ಭಾರತದ ಗುಜರಾತಿ, ಹಿಂದಿ ಮತ್ತು ಆಂಗ್ಲಬಾಷೆಯ ಹರಿಜನ್ ಪತ್ರಿಕೆ, ಆಂಗ್ಲ ಭಾಷೆಯ ಯಂಗ್ ಇಂಡಿಯಾ ಪತ್ರಿಕೆ ಹಾಗೂ ಗುಜರಾತಿನ ನವಜೀವನ್ ಎಂಬ ಮಾಸ ಪತ್ರಿಕೆ
6. ಯಾವಾಗ ಗಾಂಧೀಜಿಯರು ಉಪ್ಪಿನ ಸತ್ಯಾಗ್ರಹ ಮಾಡಿದರು?
ಉತ್ತರ: ಮಾರ್ಚ್ 12, 1930 ರಂದು