India Languages, asked by samarthgouda24, 10 months ago

Gidavaagi Baggadu Maravaagi baggite explanation in kannada only... Don't answer in English Plzzzz .

Answers

Answered by veenarkatti
7

ಇದು ಒಂದು ಸುಂದರವಾದ ಗಾದೆ ಮಾತು. ಗಾದೆಗಳು ವಾದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಗಾದೆಗಳು ಹಿರಿಯರ ಅನುಭವದ ಮಾತುಗಳು.

'ಮನೆಯೇ ಮೊದಲ ಪಾಠ ಶಾಲೆ' ಎಂಬ ಹೇಳಿಕೆಯಂತೆ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಒಳ್ಳೆಯ ಹವ್ಯಾಸ, ಸಂಸ್ಕೃತಿ, ನಡತೆ, ಸಭ್ಯತೆ, ಸದ್ಗುಣಗಳನ್ನು ಕಲಿಸಬೇಕು. ಮಗು ಇದಾಗಲೇ ಅದು ಪರರ ವಸ್ತುಗಳನ್ನು ತಂದಾಗ ಅದು ಅಪರಾಧ ಎಂಬ ಮನೋಭಾವನೆಯನ್ನು ಅದರಲ್ಲಿ ಮೂಡಿಸಬೇಕು. ಆಗ ಮಗು ಅದನ್ನು ತಿದ್ದಿಕೊಳ್ಳುತ್ತದೆ. ಹಾಗೆಯೇ ಬಿಟ್ಟರೆ ಮಗು ದೊಡ್ಡವನಾದ ಮೇಲೆ ಕಳ್ಳನಾಗಿ ಸಮಾಜ ಕಂಟಕನಾಗುತ್ತಾನೆ. ಆಗ ಅವನನ್ನಯ ತಿದ್ದಲು ಸಾಧ್ಯವಿಲ್ಲ. ಆದ್ದರಿಂದ ಸಸಿಗಳನ್ನು ಬಗ್ಗಿಸುವಂತೆ ಮಕ್ಕಳನ್ನು ಚಿಕ್ಕವರಿದ್ದಾಗಲೇ ತಿದ್ದಬೇಕು. ಏಕೆಂದರೆ ಗಿಡವಾದ ಮೇಲೆ ಅದು ಬಗ್ಗುವುದಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಸರಿಪಡಿಸಲು ಸಾಧ್ಯವಿಲ್ಲ. ಇಂಥ ಕಾರ್ಯವನ್ನು ತಂದೆ, ತಾಯಿಗಳು, ಶಿಕ್ಶಕರು, ಸಮಾಜ ಸುಧಾರಕರು ಮಾಡಬೇಕು. ಇಲ್ಲದಿದ್ದರೆ ಅನೇಕ ಸಮಾಜ ಘಾತುಕ ವ್ಯಕ್ತಿಗಳ ನಿರ್ಮಾಣವಾಗುತ್ತದೆ. ಚಿಕ್ಕವರಿದ್ದಾಗಲೇ ನಮ್ಮ ಮಕ್ಕಳು ಮಾಡಿದ ತಪ್ಪುಗಳನ್ನು ನಾವು ತದ್ದದಿದ್ದರೆ ದೊಡ್ಡವರಾದ ಮೇಲೆ ಅವರನ್ನು ತಿದ್ದಲು ಸಾಧ್ಯವಿಲ್ಲ ಎಂಬ ನೀತಿಯನ್ನು ಈ ಗಾದೆ ನಿರೂಪಿಸುತ್ತದೆ.


samarthgouda24: Super bro.... tq ☺
Similar questions