ವಿನಯಂ - ? give this answer
Answers
Answer:
好的,您是否因为战争未参加而获得投票
Explanation:
please mark me as brainlest bro
Explanation:
ವಿದ್ಯೆಯು ವಿನಯವನ್ನು ಕೊಡುತ್ತದೆ - ಎಂಬ ಹೇಳಿಕೆಯನ್ನು ಅನೇಕರು ಹೇಳುವುದನ್ನು ಕೇಳಿದ್ದೇವೆ. ಹಾಗೆಯೇ ಆ ಹೇಳಿಕೆಯನ್ನು ವಿರೋಧಿಸುವವರೂ ಈಚೆಗೆ ಹೆಚ್ಚಾಗುತ್ತಿದ್ದಾರೆ. ವಿದ್ಯಾವಂತರಲ್ಲಿ ವಿನಯವಿಲ್ಲದವರು ಹೆಚ್ಚಾದ ಹಾಗೆಲ್ಲಾ ಈ ಹೇಳಿಕೆಗೆ ವಿರೋಧಿಗಳು ಸಹಜವಾಗಿಯೇ ಹೆಚ್ಚಾಗುತ್ತಾರೆ!
ವಿನಯವೇ ವಿದ್ಯೆಗೆ ಭೂಷಣ - ಎಂಬ ಹೇಳಿಕೆಯನ್ನು ಎಲ್ಲರೂ ಅನುಮೋದಿಸುತ್ತಾರೆ.
ಆದರೆ ವಿದ್ಯೆಯು ವಿನಯವನ್ನು ಕೊಡುತ್ತದೆಂಬುದನ್ನು ಅವರು ಒಪ್ಪುವುದಿಲ್ಲ. ಅವರ ವಿರೋಧಕ್ಕೆ ಕಾರಣ ವಿದ್ಯಾವಂತರಲ್ಲಿ ಎದ್ದುಕಾಣುವ ಉದ್ಧಟತನ. ಇನ್ನೊಂದು ರೀತಿಯಿಂದಲೂ ಈ ವಿರೋಧವನ್ನು ವ್ಯಕ್ತಪಡಿಸಬಹುದು. ವಿದ್ಯಾವಂತರಲ್ಲದ ಅನೇಕರೂ ವಿನಯವಂತರಾಗಿರುತ್ತಾರೆ. ವಿದ್ಯೆಯಿಲ್ಲದೆ ಅವರಿಗೆ ವಿನಯ ಬಂದದ್ದಾದರೂ ಹೇಗೆ?
ಈ ಎಲ್ಲ ಗೊಂದಲಗಳ ಮೂಲವಿರುವುದು ವಿದ್ಯೆ ಎಂಬ ಪದದ ವ್ಯಾಖ್ಯೆ ನೀಡುವ ಕ್ರಮದಲ್ಲಿ ಎಂಬುದನ್ನು ಗಮನಿಸಬೇಕು. ಶಾಲೆಯಲ್ಲಿ ಪಾಠ ಕಲಿತು ಅಂಕಗಳಿಸುವ ಜಾಣ್ಮೆಯೇ ವಿದ್ಯೆ ಎಂದು ಭಾವಿಸಿ ನಾವು ಅರ್ಥೈಸುತ್ತೇವೆ. ಶಾಲೆಯಲ್ಲಿ ಆಗುತ್ತಿರುವುದು ವಿದ್ಯಾಭ್ಯಾಸವಲ್ಲ. ವಾಕ್ಯಗಳ ವರ್ಗಾವಣೆ. ವಿದ್ಯೆಯಾಗಿದ್ದರೆ, ವಿದ್ಯೆಯ ಅಭ್ಯಾಸವಾಗಿದ್ದರೆ - ಆ ಮಾತೇ ಬೇರೆಯಾಗಿರುತ್ತಿತ್ತು. ಶಾಲಾಕಲಿಕೆಯಲ್ಲಿ ವಿನಯ ಬರಲು ಅವಕಾಶವಿಲ್ಲವೆ? ಇದೆ. ಆದರೆ ಕಲಿಕೆಯನ್ನು ಕೈಗೊಳ್ಳುವ ಕ್ರಮವನ್ನು ಅದು ಅವಲಂಬಿಸಿರುತ್ತದೆ.
ನಾವು ಹೆಚ್ಚು ತಿಳಿದ ಹಾಗೆಲ್ಲಾ ನಮ್ಮ ದಡ್ಡತನದ ಅರಿವು ಆಗುತ್ತಾ ಹೋಗುತ್ತದೆ - ಎಂದು ಬರ್ಟ್ರಂಡ್ ರಸೆಲ್ ಹೇಳುತ್ತಾರೆ. ಹೀಗಾಗಬೇಕಿದ್ದರೆ ಕಲಿಯುವ ಮೊದಲು ನಮಗಿದ್ದ ತಪ್ಪು ಕಲಿಕೆಗೂ ಕಲಿತ ನಂತರದ ಸ್ಪಷ್ಟ ನಿಲುವಿಗೂ ಹೋಲಿಸಬೇಕಾಗುತ್ತದೆ. ಆದರೆ, ಇದರ ಬದಲು ನನ್ನ ತಿಳಿವಳಿಕೆಯೆಂದರೆ ನಾನೇ; ಉಳಿದವರಿಗೆ ಈ ತಿಳಿವಳಿಕೆ ಇಲ್ಲ - ಎಂದು ಭಾವಿಸತೊಡಗಿದರೆ ತನಗೇ ತುತ್ತುರಿ ಇದೆಯೆಂದ, ಬೇರಾರಿಗೂ ಅದು ಇಲ್ಲವೆಂದ - ಕಸ್ತೂರಿಯ ರೀತಿಯಲ್ಲಿ ಅದು ಅವಿನಯಕ್ಕೆ ದಾರಿ ಮಾಡಿಕೊಡುತ್ತದೆ.