Granthalaya mahatva prabandha in kannada
Answers
Explanation:
ಪೀಠಿಕೆ : "ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ" ಎಂಬ ನಾಣ್ಣುಡಿ ಇದೆ. ಗ್ರಂಥಾಲಯ ಎನ್ನುವುದು ಜ್ಞಾನ ಮಂದಿರ ಹಾಗೂ ಜ್ಞಾನಭಂಡಾರದ ಸಂಗ್ರಹ. ಜ್ಞಾನಾರ್ಜನೆಗೆ ಅಗತ್ಯವಾದ ಗ್ರಂಥಗಳಿರುವ ಆಲಯವೇ ಗ್ರಂಥಾಲಯ. ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕವಾಗಿ ಗ್ರಂಥಾಲಯಗಳು ತೆರೆಯಲ್ಪಟ್ಟಿವೆ.
ವಿಷಯ ವಿವರಣೆ : ನಮ್ಮೆಲ್ಲರ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ ಹಾಗೂ ಗುರುವಿದ್ದಂತೆ. ಮಾನವನ ಮನಸ್ಸಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯವಾಗಿದೆ. ಪ್ರತಿಯೊಂದು ವಿಷಯಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು ಗ್ರಂಥಾಲಯದಲ್ಲಿ ದೊರೆಯುತ್ತದೆ. ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿದೆ. ಇಲ್ಲಿ ಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ, ಕಾದಂಬರಿಗಳು, ಕಥೆ ಪುಸ್ತಕಗಳು, ಪ್ರಬಂಧಗಳು, ಜೀವನಚರಿತ್ರೆಗಳು ಮುಂತಾದ ಪುಸ್ತಕಗಳು ದೊರೆಯುತ್ತವೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳು, ದಿನಪತ್ರಿಕೆಗಳು ಸಿಗುತ್ತವೆ. ಇಲ್ಲಿ ಬೇರೆ ಬೇರೆ ಭಾಷೆಯ ಪುಸ್ತಕಗಳು ಕೂಡ ದೊರೆಯುತ್ತದೆ. ಸಂಶೋಧಕರಿಗೆ, ಲೇಖಕರಿಗೆ, ಶಿಕ್ಷಕರಿಗೆ ,ವಿದ್ಯಾರ್ಥಿಗಳಿಗೆ ಹೀಗೆ ಎಲ್ಲಾ ವರ್ಗದ ಜನರಿಗೂ ಗ್ರಂಥಾಲಯಗಳು ಬೇಕೇಬೇಕು. ಇಲ್ಲಿ ಚಿಕ್ಕವರು ದೊಡ್ಡವರು, ಬಡವ-ಶ್ರೀಮಂತ ಎಂಬ ಭೇದ ಭಾವ ಇಲ್ಲ. ಓದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಎಲ್ಲಾ ಪುಸ್ತಕಗಳನ್ನು ಹಣಕೊಟ್ಟು ಕೊಂಡುಕೊಳ್ಳುವುದು ಅಸಾಧ್ಯ ಆದರೆ ಗ್ರಂಥಾಲಯಗಳು ಈ ಕೊರತೆಯನ್ನು ನೀಗಿಸುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳಲು ಇ-ಲೈಬ್ರೆರಿ ಗಳನ್ನು ತೆರೆಯಲಾಗಿದೆ.
ಉಪಸಂಹಾರ : ಒಟ್ಟಾರೆಯಾಗಿ ಗ್ರಂಥಾಲಯಗಳು ನಮ್ಮ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ. ನಮ್ಮಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಓದು ಸಹಕಾರಿಯಾಗಿದೆ.