Guna sandhi 20 examples in Kannada language
Answers
Answer:
hope the answer is write
Explanation:
ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ.
Kuvempu
ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು.
ಸಂಸ್ಕೃತ ಸ್ವರ ಸಂಧಿಗಳು
ಸ್ವರಸಂಧಿಗಳಲ್ಲಿ ಮುಖ್ಯವಾದವುಗಳು, ಸವರ್ಣಧೀರ್ಘ ಸಂಧಿ, ಗುಣ ಸಂಧಿ, ವೃದ್ಧಿ ಸಂಧಿ, ಯಣ್ ಸಂಧಿ.
ಸವರ್ಣಧೀರ್ಘ ಸಂಧಿ
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾ:
ದೇವ + ಅಸುರ = ದೇವಾಸುರ
ಸುರ + ಅಸುರ = ಸುರಾಸುರ
ಮಹಾ + ಆತ್ಮ = ಮಹಾತ್ಮ
ಕವಿ + ಇಂದ್ರ = ಕವೀಂದ್ರ
ಗಿರಿ + ಈಶ = ಗಿರೀಶ
ಲಕ್ಷೀ + ಈಶ = ಲಕ್ಷ್ಮೀಶ
ಗುಣ ಸಂಧಿ
ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಓ' ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಆರ್' ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಗುಣಸಂಧಿ' ಎಂದು ಹೆಸರು.
ಉದಾ:
ಸುರ + ಇಂದ್ರ = ಸುರೇಂದ್ರ
ಧರಾ + ಇಂದ್ರ = ಧರೇಂದ್ರ
ಮಹಾ + ಈಶ್ವರ = ಮಹೇಶ್ವರ
ಚಂದ್ರ + ಉದಯ = ಚಂದ್ರೋದಯ
ದೇವ + ಋಷಿ = ದೇವರ್ಷಿ
ಮಹಾ + ಋಷಿ = ಮಹರ್ಷಿ
ವೃದ್ಧಿಸಂಧಿ
ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.
ಉದಾ:
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ
ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ
ಘನ + ಔದಾರ್ಯ = ಘನೌದಾರ್ಯ
ಮಹಾ + ಔದಾರ್ಯ = ಮಹೌದಾರ್ಯ
ಯಣ್ ಸಂಧಿ
ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ 'ಯ್' ಕಾರವು, ಉ, ಊ, ಕಾರಗಳಿಗೆ 'ವ್' ಕಾರವು, ಋ ಕಾರಕ್ಕೆ 'ರ್' ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
ಉದಾ:
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಕೋಟಿ + ಅಧೀಶ = ಕೋಟ್ಯಾಧೀಶ
ಗತಿ + ಅಂತರ = ಗತ್ಯಂತರ
ಪ್ರತಿ + ಉತ್ತರ = ಪ್ರತ್ಯುತ್ತರ
ಅತಿ + ಆಸೆ = ಅತ್ಯಾಸೆ
ಗುರು + ಆಜ್ಞೆ = ಗುರ್ವಾಜ್ಞೆ
ಮನು + ಆದಿ = ಮನ್ವಾದಿ
ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ವ್ಯಂಜನ ಸಂಧಿಗಳಲ್ಲಿ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿ ಇರುವುದು ಜತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ.
ಜತ್ವ ಸಂಧಿ
ಮೊದಲ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ, ಜ, ಡ, ದ, ಬ) ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಜತ್ವ ಸಂಧಿ' ಎನ್ನುವರು.
ಉದಾ:
ವಾಕ್ + ಈಶ = ವಾಗೀಶ
ವಾಕ್ + ದಾನ = ವಾಗ್ದಾನ
ದಿಕ್ + ಅಂತ = ದಿಗಂತ
ಅಚ್ + ಆದಿ = ಅಜಾದಿ
ಷಟ್ + ಆನನ = ಷಡಾನನ
ವಿರಾಟ್ + ರೂಪ = ವಿರಾಡ್ರೂಪ
ಸತ್ + ಉದ್ದೇಶ = ಸದುದ್ದೇಶ
ಬೃಹತ್ + ಆಕಾರ = ಬೃಹದಾಕಾರ
ಸತ್ + ಭಾವನೆ = ಸದ್ಭಾವನೆ
ಚಿತ್ + ಆನಂದ = ಚಿದಾನಂದ
ಶ್ಚುತ್ವ ಸಂಧಿ
'ಸ' ಕಾರ 'ತ' ವರ್ಗಾಕ್ಷರಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವು, 'ತ' ವರ್ಗಕ್ಕೆ 'ಚ' ವರ್ಗವು ಆದೇಶಗಳಾಗಿ ಬರುತ್ತವೆ. ಇದಕ್ಕೆ ಶ್ಚುತ್ವ ಸಂಧಿಯೆಂದು ಹೆಸರು.
ಉದಾ:
ಪಯಸ್ + ಶಯನ = ಪಯಶ್ಯಯನ
ಮನಸ್ + ಚಂಚಲ = ಮನಶ್ಚಂಚಲ
ಮನಸ್ + ಚಾಪಲ್ಯ = ಮನಶ್ಚಾಪಲ್ಯ
ಶರತ್ + ಚಂದ್ರ = ಶರಚ್ಚಂದ್ರ
ಜಗತ್ + ಜ್ಯೋತಿ = ಜಗಜ್ಯೋತಿ
ಯಶಸ್ + ಶರೀರ = ಯಶಶ್ಯರೀರ
ಅನುನಾಸಿಕ ಸಂಧಿ
ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೂ ಅವುಗಳಿಗೆ ಅಂದರೆ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶವಾಗಿ ಬರುತ್ತವೆ.
ಉದಾ:
ದಿಕ್ + ನಾಗ = ದಿಙ್ನಾಗ
ಷಟ್ + ಮಾಸ = ಷಣ್ಮಾಸ
ವಾಕ್ + ಮಾಧುರ್ಯ = ವಾಙ್ಮಾಧುರ್ಯ
ಚಿತ್ + ಮಯ = ಚಿನ್ಮಯ
ಸತ್ + ಮಣಿ = ಸನ್ಮಣಿ
Guna sandhi 20 examples in Kannada language:
Explanation:
ಉದಾಹರಣೆ :
ಸುರ + ಇಂದ್ರ = ಸುರೇಂದ್ರ
ಮಹಾ + ಋಷಿ = ಮಹರ್ಷಿ
ಧರಾ + ಇಂದ್ರ = ಧರೇಂದ್ರ
ಧರಾ + ಇಂದ್ರ = ಧರೇಂದ್ರ
ಮಹಾ + ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ
ಚಂದ್ರ + ಉದಯ = ಚಂದ್ರೋದಯ
ರಾ ಜ + ಇಂ ದ್ರ = ರಾಜೇಂದ್ರ
ಜ ನ್ಮ + ಉತ್ಸವ = ಜನ್ಮೋತ್ಸವ
ದೇ ವ + ಋ ಷಿ = ದೇವರ್ಷಿ
ರ ಮಾ + ಈ ಶ = ರಮೇಶ
ಮ ಹಾ + ಉ ತ್ಸ ವ = ಮ ಹೋತ್ಸವ