Geography, asked by anamikaiyengar539, 8 months ago

HIGH FLYER PEGION DETAILS IN KANNADA

Answers

Answered by yashubr12
1

Answer:

Explanation:

ಹಿಂದೊಂದು ಕಾಲದಲ್ಲಿ ರಾಜ, ಮಹಾರಾಜರಿಗೆ ಮೇಘ ಸಂದೇಶ ತಲುಪುತಿತ್ತು. ಗಗನಗಾಮಿಯಾಗಿ ಹಾರಿ ಬರುವ ಪಾರಿವಾಳಗಳು, ಗುಪ್ತಚರರಂತೆ ಸಂದೇಶ ಹೊತ್ತು ತರುತ್ತಿದ್ದವು. ಅವೆಲ್ಲ ಪೌರಾಣಿಕ ಕಥೆಗಳು ಮಾತ್ರವಲ್ಲ, ಅವುಗಳಲ್ಲಿ ಸತ್ಯವೂ ಇದೆ ಎನ್ನುವುದಕ್ಕೆ ಆಧುನಿಕ ಕಾಲದಲ್ಲಿ ನಡೆಯುತ್ತಿರುವ ಪಾರಿವಾಳ ಸ್ಪರ್ಧೆಗಳು ಜೀವಂತ ನಿದರ್ಶನ. ಸಾವಿರಾರು ಕಿ.ಮೀ. ದೂರದಿಂದ ಹೊರಡುವ ಪಾರಿವಾಳಗಳು, ತಮ್ಮ ನೆಲೆಗೆ ಮತ್ತೆ ನಿಖರವಾಗಿ ಬಂದು ತಲುಪುವ ಈ ರೋಚಕ ಸ್ಪರ್ಧೆಗಳು ಈಗ ಬೆಂಗಳೂರಿನಲ್ಲೂ ಜನಪ್ರಿಯ. ಇತ್ತೀಚೆಗೆ ದಕ್ಷಿಣ ಭಾರತ ಮಟ್ಟದಲ್ಲಿ ನಡೆದ ಮೊದಲ ಕೂಟದಲ್ಲಿ ಮಹಾನಗರಿಯ ಪಾರಿವಾಳಗಳು ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

ಸಾವಿರಾರು ಕಿ.ಮೀ. ದೂರದ ಗುರಿಯನ್ನು, ಪಾರಿವಾಳಗಳು ನಿಖರವಾಗಿ ಕ್ರಮಿಸುವುದು ಈ ರೇಸ್‌ನ ವಿಶೇಷ. ಹೊಮರ್‌ಎನ್ನುವ ವಿಶಿಷ್ಟ ಜಾತಿಯ ಪಾರಿವಾಳಗಳನ್ನು ಇಲ್ಲಿ ಬಳಸುತ್ತಾರೆ. ಎಷ್ಟೇ ದೂರದಲ್ಲಿ ಬಿಟ್ಟು ಬಂದರೂ ಆ ಪಾರಿವಾಳಗಳು ಮತ್ತೆ ತನ್ನ ಮಾಲಿಕನ ಮನೆಯನ್ನು ಹುಡುಕಿಕೊಂಡು ಬರುವ ಸಾಮರ್ಥ್ಯ ಹೊಂದಿರುತ್ತವೆ. ಮಾಲಿಕ ಪ್ರತಿ ನಿತ್ಯ ಅವುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾರೆ. ಸ್ವಲ್ಪಸ್ವಲ್ಪವೇ ಗುರಿಯನ್ನು ನೀಡಿ ಅಣಿಗೊಳಿಸುತ್ತಾರೆ. ಆ ಬಳಿಕ ದೊಡ್ಡ ಮಟ್ಟದ ಕೂಟಗಳಿಗಾಗಿ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಇತರೆ ರಾಜ್ಯದ ಪಾರಿವಾಳಗಳು ಕೂಡ ಬಂದಿರುತ್ತವೆ. ಬಂದಿರುವ ಎಲ್ಲ ಪಾರಿವಾಳಗಳಿಗೂ ಒಂದೇ ಗುರಿ ನೀಡಲಾಗಿರುತ್ತದೆ. ಎಲ್ಲ ತಂಡಗಳ ಪಾರಿವಾಳಗಳ ಬಾಕ್ಸ್‌ಗೂ ಒಂದೊಂದು ಹೆಸರನ್ನು ಕೂಡ ನೀಡಲಾಗುತ್ತದೆ. ಕಡೆಗೆ ಏಕಕಾಲದಲ್ಲಿ ಗೂಡಿನ ಬಾಗಿಲನ್ನು ತೆರೆದು ಬಿಡಲಾಗುತ್ತದೆ. ಅಲ್ಲಿಂದ ರೇಸ್‌ ಆರಂಭವಾಗುತ್ತದೆ.

ಸಾವಿರ ಕಿ.ಮೀ. ಕ್ರಮಿಸುವ ಪಾರಿವಾಳಗಳಿಗೆ ದಾರಿಯುದ್ಧಕ್ಕೂ ಹಲವಾರು ಸವಾಲುಗಳಿರುತ್ತದೆ. ಈ ಬಗ್ಗೆ ಉದಯವಾಣಿ ಜತೆ ಮುಖೀ ಪಾರಿವಾಳದ ಮಾಲಿಕ ರವಿ ಹೇಳಿದ್ದು ಹೀಗೆ, ದಕ್ಷಿಣ ವಲಯ ಕೂಟದಲ್ಲಿ ಭಾಗವಹಿಸಿದ್ದ ನನ್ನ ಮೂವತ್ತು ಪಾರಿವಾಳಗಳು ಮನೆಗೆ ಸೇರಿವೆ. ಆರಂಭದಲ್ಲಿ 10 ಪಾರಿವಾಳಗಳು ಬೇಗ ಮನೆ ಸೇರಿದ್ದ‌ವು. ಉಳಿದಂತೆ ಹೆಚ್ಚು ಬಿಸಿಲು ಇದ್ದುದರಿಂದ ಕೆಲವು ಪಾರಿವಾಳಗಳು ತಡವಾಗಿ ಮನೆಗೆ ಬಂದಿವೆ. ಬದುಕಿದ್ದರೆ 10 ವರ್ಷವಾದರೂ ಪಾರಿವಾಳ ತನ್ನ ಮನೆಗೆ ಬಂದು ಸೇರುತ್ತವೆ.ಇನ್ನು ಒಟ್ಟಾರೆ ರೇಸ್‌ ಹಾದಿಯನ್ನು ನೋಡುವುದಾದರೆ ಪಾರಿವಾಳಗಳಿಗೆ ಭಾರೀ ಸವಾಲು ಇರುತ್ತದೆ. ಹದ್ದುಗಳು ದಾಳಿಯ ಭಯವಾದರೆ ಬಿಸಿಲಿನ ಝಳದ ಸಮಸ್ಯೆ ಮತ್ತೂಂದು ಕಡೆ. ಅಲ್ಲದೆ ಇತ್ತೀಚೆಗೆ ಮೊಬೈಲ್‌ ಟವರ್‌ ಸಿಗ್ನಲ್ಸ್‌ ನಿಂದ ಹಕ್ಕಿಗಳಿಗೆ ಅಪಾಯವಾಗುತ್ತಿದೆ. ಜತೆಗೆ ಕೆಲವರು ಹಣಕ್ಕಾಗಿ ಪಾರಿವಾಳಗಳನ್ನು ಬಲೆ ಹಾಕಿ ಹಿಡಿಯುತ್ತಾರೆ. ಇನ್ನೂ ಕೆಲವು ಹದ್ದುಗಳ ದಾಳಿಗೆ ಬಲಿಯಾಗುತ್ತವೆ. ಇದೆಲ್ಲವನ್ನು ಮೀರಿ ಪಾರಿವಾಳ ತನ್ನ ಗುರಿ ಸೇರುತ್ತದೆ ಎಂದರು.

ಪಾರಿವಾಳಗಳಲ್ಲಿ 2 ವಿಧ. ಮೊದಲನೆಯದು ಹೈ ಫ್ಲೈಯರ್‌ ಮತ್ತೂಂದು ಲಾಂಗ್‌ ಡಿಸ್ಟೆನ್ಸ್‌. ಹೈ ಫ್ಲೈಯರ್‌ ಮನೆಯ ಮೇಲೆಯೇ ಗಂಟೆ ಗಟ್ಟಲೇ ಹಾರುತ್ತದೆ. ಇದನ್ನು ಕೆಲವು ಕಡೆ ಜೂಜಿನಲ್ಲಿ ಬಳಸುತ್ತಾರೆ. ಆದರೆ ನಮ್ಮ ಹೊಮರ್‌ ಲಾಂಗ್‌ ಡಿಸ್ಟೆನ್ಸ್‌ ಹಾರುತ್ತದೆ. 500 ಕಿ.ಮೀ. 700 ಕಿ.ಮೀ. 1000 ಕಿ.ಮೀ.ವರೆಗೆ ಹಾರುವ ಸಾಮರ್ಥ್ಯವಿದೆ. ಈ ಕ್ರೀಡೆಯನ್ನು ಅನೇಕರು ತಪ್ಪಾಗಿ ಕಲ್ಪಿಸಿದ್ದಾರೆ. ಇಲ್ಲಿ ಜೂಜಿಲ್ಲ. ಗೆದ್ದವರಿಗೆ ಟ್ರೋಫಿ, ಸರ್ಟಿಫಿಕೆಟ್‌ ಮಾತ್ರ ನೀಡಿ ಗೌರವಿಸಲಾಗುತ್ತದೆ.

Similar questions